janamanakannada > Blog > Latest > Mysore > ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಿ.ಎಲ್.ಪ್ರಾಣೇಶ್, ಉದಯಕುಮಾರ್ ಅವಿರೋಧ ಆಯ್ಕೆ
ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಬ್ಯಾಡರಹಳ್ಳಿ ಬಿ.ಎಲ್.ಪ್ರಾಣೇಶ್ ಮತ್ತು ಉಪಾಧ್ಯಕ್ಷ ರಾಗಿ ಬೀರನಹಳ್ಳಿ ಉದಯಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಛೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸವಿತಾ ಅವಿರೋಧ ಆಯ್ಕೆ ಪ್ರಕಟಿಸಿದರು.

ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಬಿ.ಎಂ.ಮುರಳೀಧರ,ಎಸ್.ಕೆ.ಗೌತಮ್, ರಮೇಶ್, ಕುಮಾರ್, ಉಮಾ, ಭಾಗ್ಯ, ರಮೇಶ್, ಕರಿಯಯ್ಯ, ಕೆ.ಹರೀಶ್, ಎಸ್.ಎಂ.ಶ್ರೀಕಾಂತ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್, ಸಂಘದ ಸಿಇಓ ಸಚಿನ್‌ಕುಮಾರ್, ಸಹಾಯಕ ಮಹದೇವ್ ಹಾಜರಿದ್ದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರಾದ ಚೀರ್ನಹಳ್ಳಿಶಿವಣ್ಣ, ಮಹದೇವ್, ಚಿಕ್ಕಹಾಲೇಗೌಡ, ವಿನಯ್, ಕರೀಗೌಡ ಮತ್ತಿತರರು ಅಭಿನಂದಿಸಿದರು.
Tags:k r nagar news
admin








