ಕೆ. ಆರ್. ನಗರ (ಸಂಘಟನೆ ಮಂಜುನಾಥ್ ): ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಕೆ ಆರ್ ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳ ರೈತರು ಸಂಭ್ರಮದಿಂದ ಹೊನ್ನಾರನ್ನು ಕಟ್ಟಿ, ಭೂತಾಯಿಯನ್ನು ಪ್ರಾರ್ಥಿಸಿ ತಮ್ಮ ಜಮೀನಿನಲ್ಲಿ ಪೂಜೆ ಸಲ್ಲಿಸಿ ಭೂತಾಯಿಯನ್ನು ಪ್ರಾರ್ಥಿಸಿದ್ದಾರೆ.
ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನಾರನ್ನು ಕಟ್ಟಿ, ಹೊಸ ಬಟ್ಟೆಗಳನ್ನು ಧರಿಸಿ ಜಮೀನುಗಳಿಗೆ ಗೊಬ್ಬರ ಸಿಂಪಡಿಸಿ ಉಳುವ ಮೂಲಕ ಹೊಸ ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ ರೋಗ ರುಜಿನ ಮಾಯವಾಗಿ ಉತ್ತಮ ಬೆಳೆ ಬೆಳೆದು ನೆಮ್ಮದಿ ಜೀವನ ಸಿಗಲಿ ಎಂದು ಬೇಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.
ಯುಗಾದಿ ಆರಂಭಗೊಳಿಸಿದಂತೆ ಮಳೆ ಬರಲಿದ್ದು ಖುಷಿ ಚಟುವಟಿಗಳು ಆರಂಭವಾಗುತ್ತವೆ ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರಗಳನ್ನು ಜಮೀನುಗಳಿಗೆ ಸಿಂಪಡಿಸುವ ಹೊನ್ನಾರು ಎಂದು ಕರೆಯುತ್ತಾರೆ. ಅವಳಿ ತಾಲೂಕುಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತದೆ.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಹಳಿಯೂರು ಗ್ರಾಮದಲ್ಲಿ ಪೂರ್ವಿಕರ ಕಾಲದಿಂದ ಯುಗಾದಿ ಹಬ್ಬದಂದು ಹೊನ್ನಾರು ಕಟ್ಟಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಪ್ರತಿ ವರ್ಷವೂ ಯುಗಾದಿ ಹಬ್ಬದ ಹೊಸ ವರ್ಷ ದಿನದಂದು ಜ್ಯೋತಿಷ್ಯ ಕೇಳುತ್ತಾರೆ. ಜ್ಯೋತಿಷ್ಯದಲ್ಲಿ ಯಾರ ಹೆಸರು ಬರುತ್ತೆ ಅವರ ಹೆಸರಲ್ಲಿ ಹೊನ್ನಾರು ಕಟ್ಟುತ್ತಾರೆ. ಈ ಬಾರಿ ಎಚ್ ಕೆ ರಾಮು ಅವರ ಹೆಸರಿನಲ್ಲಿ ದೇವರ ಬಲ ಬರುತ್ತೆ ಅವರು ಹೊನ್ನಾರು ಕಟ್ಟುತ್ತಾರೆ.

ಸಿಡ್ಲು ಕಾಳಮ್ಮ ತಾಯಿಗೆ ಪೂಜೆ ಸಲ್ಲಿಸಿ ಬಳಿಕ ಎತ್ತುಗಳನ್ನು ತೊಳೆದು ಕೊಂಬು ಮೈಯಿಗೆ ಎಣ್ಣೆ ಹಚ್ಚಿ ಕುಂಕುಮ ಅರಿಶಿಣ ತಿಲಕವನ್ನು ಇಟ್ಟು ಕೊರಳಿಗೆ ಹೂಮಾಲೆ ತಿಳಿಸಲಾಯಿತು. ಕೊರಳಿಗೆ ನೋಗ ವನ್ನು ಕಟ್ಟಿ ನೇಗಿಲು ಹೂಡಲಾಯಿತು. ರಾಸುಗಳಿಗೆ ಆರತಿ ಎತ್ತಿ ಬಾಳೆಹಣ್ಣು ತಿನ್ನಿಸಲಾಯಿತು ನಮಸ್ಕರಿಸಿ ಹೊನ್ನರಿಗೆ ಚಾಲನೆ ನೀಡಲಾಯಿತು.
ತಮಟೆ ವಾದ್ಯದೊಂದಿಗೆ ಹೊನ್ನಾರು ಸಂಭ್ರಮದ ಮೆರವಣಿಗೆ ಗ್ರಾಮದ ಲೀಲಾವತಿ ರಾಮಚಂದ್ರ ಅವರ ಮನೆಯಿಂದ ಬಸವೆಶ್ವರ ದೇವಸ್ಥಾನ ಆಂಜನೇಯ ದೇವಸ್ಥಾನ ಹತ್ತಿರ ಹಾದು ಬಂದು ಊರಿನ ಸುತ್ತ ಗಡಿ ರೇಖೆ ಹಾಕುವ ಮೂಲಕ ಕೊನೆಗೊಂಡಿತು .
ಮಾಜಿ ಗ್ರಾ ಪಂ ಅಧ್ಯಕ್ಷೆ ರೇಖಾ ಜಗದೀಶ್, ಎ ಪಿ ಎಮ್ ಸಿ ಮಾಜಿ ಅಧ್ಯಕ್ಷ ಕೃಷ್ಣೆಗೌಡ, ಗ್ರಾಫಂ ಮಾಜಿ ಅಧ್ಯಕ್ಷ ರಾಜೇಗೌಡ, ಮಾಜಿ ಉಪಾಧ್ಯಕ್ಷ ಎಚ್ ಆರ್ ಕೃಷ್ಣಮೂರ್ತಿ, ಮಾಜಿ ತಾಪಂ ಸದಸ್ಯ ಪ್ರಭಾಕರ್, ಸಂಘದ ಅಧ್ಯಕ್ಷ ಎಚ್ ಬಿ ನವೀನ್ ಕುಮಾರ್, ಮಲ್ಲೇಶಾರಿ, ರಾಮೇಗೌಡ, ಶಿಕ್ಷಕ ಕುಮಾರ್, ಎಚ್ ಆರ್ ಜಗದೀಶ್ ಎಚ್ ಕೆ ಸುರೇಶ್ ಎಚ್ ಎನ್ ಯೋಗಾನಂದ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.








