ಹೊಸೂರು(ಸಂಘಟನೆ ಮಂಜುನಾಥ್) : ಮಕ್ಕಳನ್ನು ಓದಿಗೆ ಪ್ರೇರಣೆ ನೀಡುವ ಕೆಲಸ ಪೋಷಕ ವರ್ಗ ಮಾಡಿದಾಗ ಮಕ್ಕಳು ಶಿಕ್ಷಣದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕೆ.ಆರ್.ನಗರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪತ್ತಿನ ಸಹಕಾರ ಸಂಘದ ಗೌರವ ಅಧ್ಯಕ್ಷ ಹೆಬ್ಬಾಳು ಮಂಜೇಗೌಡ ಹೇಳಿದರು
ಸಾಲಿಗ್ರಾಮ ತಾಲೂಕಿನ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ 2025-26 ನೇ ಸಾಲಿನಲ್ಲಿ ನವೋದಯ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿ, ಯಾವುದೇ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಪಾಸು-ಫೇಲ್ ಲೆಕ್ಕಾಚಾರ ಹಾಕದೇ ಎದುರಿಸಲು ಮುಂದಾಗ ಬೇಕು ಇದರಿಂದ ಎಂತಹದ್ದೇ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು

ನವೋದಯ ಪರೀಕ್ಷೆಯಲ್ಲಿ ಉತ್ತಿರ್ಣವಾಗುವುದು ನಿಜಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಮೈಲಿಗಲ್ಲು ಆಗಲಿದ್ದು ಈ ಪರೀಕ್ಷೆಯಲ್ಲಿ ಉತ್ತಿರ್ಣರಾದ ಪುಣ್ಯಶ್ರೀ, ಲೋಕರಂಜನ್, ವಿ.ದಿಶಾ ಅವರ ಮುಂದಿನ ಭವಿಷ್ಯದ ಶಿಕ್ಷಣ ಯಶಸ್ವಿಯಾಗಲಿ ಗ್ರಾಮಕ್ಕೆ ಮತ್ತು ಪೋಷಕರಿಗೆ ಗೌರವ ತರುವಂತಾಗಲಿ ಎಂದು ಹಾರೈಸಿದ್ದರಲ್ಲದೇ, ಈ ಶಾಲೆಯಲ್ಲಿ ಎಲ್.ಕೆ.ಜೆ, ಯು.ಕೆ.ಜಿ ಮತ್ತು ಒಂದನೇ ತರಗತಿಯ ಇಂಗ್ಲೀಷ್ ಮಾಧ್ಯಮವನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಶಿಕ್ಷಕರಾದ ಅನ್ನಪೂರ್ಣ, ಶ್ವೇತಾ, ಪೂಜಾ, ಅಭ್ರೀನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪಾನಿಪುರಿ ಕೃಷ್ಣೇಗೌಡ, ಸಿಬ್ಬಂದಿ ರತ್ನ ಸೇರಿದಂತೆ ಮತ್ತಿತರರು ಹಾಜರಿದ್ದರು








