LatestNews

ಅಧರ್ಮಗಳು ವಿನಾಶ ಹೊಂದಿ ಒಂದು ಆದಿ ಸನಾತನ ದೇವಿ ದೇವತಾ ಧರ್ಮ ಸ್ಥಾಪನೆ

ಚಾಮರಾಜನಗರ: ಎಲ್ಲಾ ಅಧರ್ಮಗಳು ವಿನಾಶ ಹೊಂದಿ ಒಂದು ಆದಿ ಸನಾತನ ದೇವಿ ದೇವತಾ ಧರ್ಮ ಸ್ಥಾಪನೆಯಾಗಲಿದೆ ಎಂದು ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಹೇಳಿದರು.

ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಇತ್ತೀಚೆಗೆ ನಡೆದ ಯುಗಾದಿ ಆಚರಣೆ ಸಂಬಂಧ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಎರಡು ಭೂತಗಳ ನಡುವೆ ಮಹಾಯುದ್ಧ ನಡೆಯುತ್ತಿದೆ ಮಹಾಭಾರತದಲ್ಲಿ ಯಾದವರು ತಮ್ಮ ಹೊಟ್ಟೆಯಲ್ಲಿ ತಾವೇ ಒನಕೆಯನ್ನು ಹುಟ್ಟಿಸಿಕೊಂಡು, ಅದರಿಂದ ಒಬ್ಬರಿಗೊಬ್ಬರು ಬಡಿಗಾಡಿಕೊಂಡು ನಾಶ ಹೊಂದಿದರು ಎಂದು ತಿಳಿಸುತ್ತದೆ.

ಈಗ ನಡೆಯುತ್ತಿರುವುದೇ ಅದೇ ಬುದ್ಧಿ ರೂಪಿ ಹೊಟ್ಟೆಯಿಂದ ಒನಕೆ ರೂಪಿ ಬಾಂಬ್ ಗಳನ್ನು ತಯಾರಿಸಿಕೊಂಡು, ಯುರೋಪ್ ವಾಸಿಗಳು ಅವರಿಗೆ ಇವರು, ಇವರಿಗೆ ಅವರು ಒನಕೆ ರೂಪಿ ಬಾಂಬುಗಳನ್ನು ಎಸೆದುಕೊಂಡು ನಾಶ ಹೊಂದುತ್ತಿದ್ದಾರೆ. ಮುಂದೆ  ಮನುಕುಲವನ್ನೇನು ಇಂತಹ ಏಳು ಸೃಷ್ಟಿಯನ್ನು ಸುಡುವಷ್ಟು ಅಣುಬಾಂಬ್ ಗಳನ್ನ ತಯಾರಿಸಿ ಇಟ್ಟುಕೊಂಡಿದ್ದಾರೆ ಅದು ಪೂಜೆ ಮಾಡುವುದಕ್ಕೆ ಅಲ್ಲ ಎಂಬುದು ಅವರಿಗೂ ಗೊತ್ತು. ಇದರಿಂದ ಇಡೀ ಜಗತ್ತನ್ನ ಧೂಳಿಪಟ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.

ಎರಡು  ಕೋತಿಯ ಜಗಳದಲ್ಲಿ ಮೂರನೇಯವನಿಗೆ ಲಾಭ ಎನ್ನುವ ಹಾಗೆ ಭಾರತದಲ್ಲಿ ಶ್ರೀ ಕೃಷ್ಣ ನಿಗೆ ವಿಶ್ವ ಮಾಲೀಕತ್ವ ರೂಪಿ ಬೆಣ್ಣೆ ಸಿಗಲಿದೆ. ಎಲ್ಲಾ ಅಧರ್ಮಗಳು ವಿನಾಶ ಹೊಂದಿ ಒಂದು ಆದಿ ಸನಾತನ ದೇವಿ ದೇವತಾ ಧರ್ಮ ಸ್ಥಾಪನೆಯಾಗಲಿದೆ. ಇತ್ತ ಇಲ್ಲಿ ಭಾರತದಲ್ಲಿ ಪಾಂಡವರು ಇದ್ದಾರೆ. ಕೌರವರೂ ಇದ್ದಾರೆ. ಪರಮಾತ್ಮನ ಬಗ್ಗೆ ಪ್ರೀತಿ ಬುದ್ಧಿಯವರೇ ಪಾಂಡವರು, ನಾವು ಯಾವ ಬುದ್ದಿ ಯವರಾಗಿದ್ದೇವೆ ಎಂಬುದನ್ನು ನೋಡಿಕೊಳ್ಳಬೇಕಾಗಿದೆ. ಇದನ್ನು ಅರಿಯುವ ಸಮಯವೇ ಸತ್ಯಯುಗದ ಆದಿಯ ಸಮಯ ವರ್ತಮಾನ ಕಲ್ಯಾಣ ಕಾರಿ ಪುರುಷೋತ್ತಮ ಸಂಗಮ ಯುಗವಾಗಿದೆ.

ಈ ಸಮಯದಲ್ಲೇ ಸೃಷ್ಟಿ ಕರ್ತನು ಅವತರಿಸಿ ಅನೇಕತೆಯನ್ನು ಹೋಗಲಾಡಿಸಿ ಒಂದೇ ರಾಜ್ಯ, ಒಂದೇ ಭಾಷೆ, ಒಂದೇ ಆದಿ ಸನಾತನ ದೇವಿ ದೇವತಾ ಧರ್ಮ, ಒಬ್ಬರ ಕೈಯಲ್ಲಿ ವಿಶ್ವ ರಾಜ್ಯಾಧಿಕಾರವಿರುತ್ತದೆ. ಅಂತಹ ಸುಂದರ ಸುವರ್ಣಮಯವಾದ ಜಗತ್ತು ಬರುತ್ತಿರುವ ಸಂಕೇತವೇ ಸತ್ಯ ಯುಗದ ಆದಿಯಾಗಿದೆ ಎಂದರು. ನಂತರ ಎಲ್ಲರಿಗೂ ಬೇವು ಬೆಲ್ಲವನ್ನು ಹಂಚಲಾಯಿತು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂಸ್ ಸರ್ವಿಸ್ ನ ಬಿ.ಕೆ.ಆರಾಧ್ಯ, ಪುಟ್ಟ ಶೇಖರ ಮೂರ್ತಿ, ಸುಂದರಣ್ಣ, ಶ್ರೀನಿವಾಸ, ಗೀತ, ಪುಷ್ಪ, ಶಶಿ, ಸುಲೋಚನಾ, ಶಿವಕಮಲ, ಜಯಲಕ್ಷ್ಮಿ, ಜ್ಯೋತಿ, ಅರ್ಜುನ್, ಆರ್‌ಡಿ ನಾಗರಾಜ್, ಮರಗತಕ್ಕ, ಮಾಣಿಕ್ಯ ಹಾಜರಿದ್ದರು.

admin
the authoradmin

Leave a Reply

Translate to any language you want