LatestMysore

ಭಕ್ತಿ ಭಾವದಿಂದ ಮೂರು ದಿನ ಜರುಗಿದ ಹೆಬ್ಬಾಳಮ್ಮ(ಮಸಣಮ್ಮ) ದೇವಿಯ ಪೂಜಾ ಮಹೋತ್ಸವ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ತನ್ನ ಪವಾಡ ಶಕ್ತಿಯಿಂದ ಇತಿಹಾಸ ಪ್ರಸಿದ್ಧಿ ಗಳಿಸಿರುವ ಶಕ್ತಿ ದೇವತೆ ಎಂದೇ ಜನವಲಯದಲ್ಲಿ ಖ್ಯಾತಿ ಪಡೆದಿರುವ ತಾಲೂಕಿನ ಹೆಬ್ಬಾಳು ಗ್ರಾಮದ ಹೆಬ್ಬಾಳಮ್ಮ(ಮಸಣಮ್ಮ) ದೇವಿಯ ಪೂಜಾ ಮಹೋತ್ಸವವು ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗಿತು.

ಹದಿನೈದು ವರ್ಷಗಳಿಗೊಮ್ಮೆ ನಡೆಯ ಬೇಕಾಗಿದ್ದ ಹೆಬ್ಬಾಳಮ್ಮ ತಾಯಿಯ ಉತ್ಸವ ಹಲವು ದಶಕಗಳಿಂದ ಆಚರಣೆಯಾಗದೆ ನೆನೆಗುದಿಯಲ್ಲಿತ್ತು. 25 ವರ್ಷಗಳ ನಂತರ ನಡೆದ  ಈ ಬಾರಿಯ ಪೂಜಾ ಮಹೋತ್ಸವ ಸಡಗರ ಸಂಭ್ರಮ, ಭಕ್ತಿಪೂರ್ವಕವಾಗಿ ನಡೆಯಿತು. ಮೊದಲ ದಿನವಾದ ಮಾ.24(ಮಂಗಳವಾರ) ಅಡಗನಹಳ್ಳಿ ಗುರುಗಳಾದ ಮಹದೇವಪ್ಪನವರ ನೇತೃತ್ವದಲ್ಲಿ ಬೆಳಿಗ್ಗೆ ಹೆಬ್ಬಾಳಮ್ಮ ದೇವಿಯ ಉತ್ಸವ ಮೂರ್ತಿಗೆ ಪವಿತ್ರ ಕ್ಷೇತ್ರ ಕಪ್ಪಡಿ ಬಳಿಯಲ್ಲಿರುವ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮತ್ತು ಹೋಮಕಾರ್ಯಗಳನ್ನು ಮಾಡಲಾಯಿತು.

ಆ ನಂತರ  ವಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಿ ನದಿಯ ದಡದಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ದೇವರ ಮೂರ್ತಿಯನ್ನು ತಮಟೆ, ಛತ್ರಿ, ಛಾಮರ ಮತ್ತು ಮಂಗಳವಾದ್ಯಗಳೊಂದಿಗೆ ಕಳಸಗಳನ್ನು ಹೊತ್ತ ಬಾಲಕಿಯರು, ವೀರಕುಣಿತ ಗಳೊಂದಿಗೆ ಮೆರವಣಿಗೆ ಮೂಲಕ ತಂದು ಹೆಬ್ಬಾಲು ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.

ಮಾ.25  (ಬುಧವಾರ) ಬೆಳಿಗ್ಗೆ 7.30 ರಿಂದ ಅಭಿಷೇಕ, ಮಹಾಮಂಗಳಾರತಿ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಿಯ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು. ದಶಕಗಳ ನಂತರ ನಡೆಯುತ್ತಿರುವ ಪೂಜಾ ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಹೆಬ್ಬಾಳು ಗ್ರಾಮ ಜನ ಜಂಗುಳಿಯಿಂದ ತುಂಬಿತ್ತು.

ದೇವರ ಉತ್ಸವದ ಹಿನ್ನೆಲೆಯಲ್ಲಿ ಸಿಹಿ ತಿಂಡಿಗಳ ವ್ಯಾಪಾರಸ್ಥರು, ಆಟಿಕೆಗಳ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳನ್ನು ತೆರೆದಿದ್ದರು. ಉತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಭಕ್ತರು ಮತ್ತು ಗ್ರಾಮಸ್ಥರಿಗೆ ದೇವಸ್ಥಾನದ ಸಮಿತಿ ವತಿಯಿಂದ ಸಾಮೂಹಿಕ ಸಾಲು ಪಂಕ್ತಿ ಮಾಂಸದೂಟದ ಪ್ರಸಾದವನ್ನು ಏರ್ಪಡಿಸಲಾಗಿತ್ತು. ಪೂಜಾ ಮಹೋತ್ಸವ ಇದಕ್ಕೆ ಸಹಕಾರ ನೀಡಿದ್ದ ಸರ್ವಜನಾಂಗದ ಜನತೆಗೆ ಕೃತಜ್ಞೆ ಸಲ್ಲಿಸುವುದಾಗಿ ದೇವರ ವಕ್ಕಲಿನ ಯಜಮಾನರುಗಳು ತಿಳಿಸಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸ್ವಾಮಿಗೌಡ, ಶಿವಣ್ಣೇಗೌಡ(ಕೆಂಪು), ಕೃಷ್ಣೇಗೌಡ, ವಿಠಲೇಗೌಡ, ಶಿವರಾಜೇಗೌಡ, ಕೃಷ್ಣೇಗೌಡ, ಈರಪ್ಪ, ಸುರೇಶ್‌ನಾಯಕ, ಕೆಪಿಎನ್ ವೆಜಿಟೆಬಲ್ ಮಾಲೀಕರಾದ ಮುಖಂಡ ದೇವರಾಜ್, ಗ್ರಾಪಂ ಮಾಜಿ ಉಪಾಧ್ಯಕ್ಷ ಹೆಚ್.ಕೆ.ನಾಗೇಶ್, ಮಾಜಿ ಸದಸ್ಯ ಹೆಚ್.ಎಸ್.ವೆಂಕಟರಾಮು, ಸಮಾಜ ಸೇವಕ ಹೆಚ್.ವಿ.ಪುನೀತ್‌ರಾಜ್ ಹೆಬ್ಬಾಳು ಮತ್ತಿತರರು ಹಾಜರಿದ್ದರು. ದೇವರ ಅರ್ಚಕರಾದ ಹೆಚ್.ಎ.ಸುನೀಲ್, ಮಹದೇವಪ್ಪ ಮತ್ತಿತರ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನಡೆಸಲಾಯಿತು.

ಹೆಬ್ಬಾಳು ಸಮಾಜ ಸೇವಕ  ಹೆಚ್.ವಿ.ಪುನೀತ್‌ರಾಜ್ ಮಾತನಾಡಿ ಹೆಬ್ಬಾಳಮ್ಮ ತಾಯಿ ನಮ್ಮ ಗ್ರಾಮದ ಶಕ್ತಿ ದೇವತೆಯಾಗಿದ್ದು ಯಾವುದೇ ದುಷ್ಟಶಕ್ತಿಗಳು ನಮ್ಮೂರಿಗೆ ಪ್ರವೇಶಿಸದಂತೆ ಗ್ರಾಮದ ಮದ್ಯಭಾಗದಲ್ಲಿ ನೆಲೆಸಿ ಕಾವಲು ಕಾಯುತ್ತಿದ್ದಾಳೆ ಎಂಬುದು ನಮ್ಮಲ್ಲೆರ ನಂಬಿಕೆಯಾಗಿದೆ.. ನಮ್ಮ ಪೂರ್ವಜರು ಕಳೆದ ನಾಲ್ಕೈದು  ತಲೆ ಮಾರುಗಳಿಂದ ದೇವಿಯನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. 15ವರ್ಷಗಳಿಗೊಮ್ಮೆ ತಾಯಿಯ ಉತ್ಸವ ನೆರವೇರಲಿದ್ದು ಇದನ್ನು ಕಣ್ತುಂಬಿಕೊಳ್ಳುವುದೇ ವಿಶೇಷವಾಗಿದೆ ಎಂದು ಹೇಳಿದರು.

admin
the authoradmin

Leave a Reply

Translate to any language you want