ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಅನಿಲ್, ಉಪಾಧ್ಯಕ್ಷರಾಗಿ ಲಲಿತಮ್ಮ ಜಗದೀಶ್ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಯದುಕುಮಾರ್ ಮತ್ತು ಉಪಾಧ್ಯಕ್ಷರಾಗಿದ್ದ ಪ್ರಸನ್ನ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪೂರ್ಣಿಮಾ ಮತ್ತು ಲಲಿತಮ್ಮ ಅವರನ್ನು ಬಿಟ್ಟು ಬೇರೆಯವರು ನಾಮಪತ್ರ ಸಲ್ಲಿಸದ ಕಾರಣ ಆಯ್ಕೆಯನ್ನು ಪ್ರಕಟಿಸಲಾಯಿತು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಸ್ ಟಿ ಕೀರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ ಮಂಜುನಾಥ್ ಮಾಜಿ ಸದಸ್ಯ ಶಿವಣ್ಣ, ಅಜಯ್, ಸಹಕಾರ ಸಂಘದ ನಿರ್ದೇಶಕ ರಮೇಶ್, ಬಲರಾಮ್ ಆರ್ ಎಸ್ ಎಸ್ ರಮೇಶ್, ನಾಗೇಂದ್ರ, ವೆಂಕಟೇಶ್, ಸೇರಿದಂತೆ ಮತ್ತಿತರರು ಅಭಿನಂದಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷೆ ಪೂರ್ಣಿಮಾ ಅನಿಲ್ ಮಾತನಾಡಿ ಸಂಘದ ಬೆಳವಣಿಗೆಗೆ ಸರ್ವ ಸದಸ್ಯರ ಸಹಕಾರ ಪಡೆದು ಕಾರ್ಯನಿರ್ವಹಿಸುವ ಜೊತೆಗೆ ಸಂಘದ ವತಿಯಿಂದ ಷೇರುದಾರ ಸದಸ್ಯರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪರಶುರಾಮ್, ರಂಗೇಗೌಡ, ರಮೇಶ್, ಸ್ವಾಮಿ,ಬುದ್ಧಿಸಾಗರ, ನಾಗರಾಜ, ಭಾರತಿ ಸಂಘದ ಸಿಇಓ ಗಿರೀಶ್ ಹಾಲು ಪರೀಕ್ಷಕ ಮಹದೇವ್ ಸೇರಿದಂತೆ ಮತ್ತಿತರರು ಹಾಜರಿದ್ದರು.








