LatestMysore

ಕಿತ್ತೂರು(ಬಸಾಪುರ)ಕೃಷಿ ಪತ್ತಿನ ಸಂಘಕ್ಕೆ ಅಧ್ಯಕ್ಷರಾಗಿ ಎಂ ಮಲ್ಲೇಶ್, ಉಪಾಧ್ಯಕ್ಷರಾಗಿ ಸ್ವಾಮಿಗೌಡ  ಆಯ್ಕೆ

 ಸರಗೂರು(ದಾಸೇಗೌಡ): ಕಿತ್ತೂರು(ಬಸಾಪುರ)ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಎಂ ಮಲ್ಲೇಶ್, ಉಪಾಧ್ಯಕ್ಷರಾಗಿ ಸ್ವಾಮಿಗೌಡ  ಆಯ್ಕೆಯಾದರು, 5 ವರ್ಷದ ಅವಧಿಗೆ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘ 12 ಸದಸ್ಯರ ಬಲ ಹೊಂದಿದೆ.

ತಾಲ್ಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರ ನಡುವೆ ಜಿದ್ದ ಜಿದ್ದಿಯಲ್ಲಿ, ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ ಮಲ್ಲೇಶ್ ಹಾಗೂ ಜೆಡಿಎಸ್ ಪಕ್ಷದ ಟಿ ಕಾಳಸ್ವಾಮಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಎಂ ಮಲ್ಲೇಶ್ 7 ಮತ ಪಡೆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸ್ವಾಮಿಗೌಡ 7 ಮತ ಪಡೆದು ವಿಜಯಿಯಾದರು. ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ಟಿ ಕಾಳಸ್ವಾಮಿ 6 ಮತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಸಿದ್ದಯ್ಯ 6 ಮತಗಳನ್ನು ಪಡೆದು ಪರಾಭವಗೊಂಡರು.

ನಾಮಪತ್ರ ಪರಿಶೀಲನೆ ಮಾಡಿದ ನಂತರ, ಅಧ್ಯಕ್ಷರು ಉಪಾಧ್ಯಕ್ಷರು  ಒಂದೊಂದು ಮತದಿಂದ ಜಾಸ್ತಿ ಬಂದಿದ್ದ ಅವರುಗಳನ್ನು  ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸುರೇಶ್ ಬಿ.ಎಂ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾರಾಟ ಗುಮಾಸ್ತ ಶಂಕರ್ ಹಾಗೂ ಶಿಕ್ಷಣ ಇಲಾಖೆಯ ಎಲ್ ಜಗದೀಶ್ ಹಾಜರಿದ್ದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಂ ಮಲ್ಲೇಶ್ ಮಾತನಾಡಿ ನನ್ನನ್ನು  ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ರೈತರಿಗೆ ಸಾಲ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳನ್ನು ವಿಶ್ವಾಸ ಪಡೆದು ಕೆಲಸ ಮಾಡುತ್ತೇನೆ ಎಂದರು.

ನಿರ್ದೇಶಕರಾದ ಸಣ್ಣಸೋಮಯ್ಯ, ನಾಗರಾಜು, ಪುಟ್ಟನಾಯಕ, ಕೆ.ಎಸ್ ನಾಗಣ್ಣಸ್ವಾಮಿ, ಶಿವಸಿದ್ದಯ್ಯ, ರುದ್ರೇಶ್, ತಿಮ್ಮಮ್ಮ, ಸ್ವಾಮಿಗೌಡ, ಎಂ ಮಲ್ಲೇಶ್, ವೆಂಕಟಮ್ಮ, ಕಮಲಮ್ಮ, ಟಿ ಕಾಳಸ್ವಾಮಿ ಹಾಜರಿದ್ದರು.

ಮುಖಂಡರಾದ ಪುರಸಭೆ ಸದಸ್ಯ ಎಚ್ ಸಿ ನರಸಿಂಹಮೂರ್ತಿ, ಮನುಗನಹಳ್ಳಿ ಗುರುಸ್ವಾಮಿ, ಪಪಂ ಸದಸ್ಯ ಶ್ರೀನಿವಾಸ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಕಂದೇಗಾಲ ಶಿವರಾಜು, ಮಣಿ, ನಾಗರಾಜು ಉಯ್ಯಂಬಳ್ಳಿ , ಬಸಾಪುರ ರವಿ, ಕೊತ್ತೆಗಾಲ ಮಂಜುನಾಥ್,  ಗುರುರಾಜ್, ಶಿವಣ್ಣ, ಕಾಳಸ್ವಾಮಿ, ಗಿರೀಶ್ ದೇವಪುರಹುಂಡಿ, ಬಸವರಾಜು, ಬಸವಯ್ಯ, ಮಾರಕಂಡಯ್ಯ, ವೀಕೇಶ, ಪಾಪು,ಪಿ ನಂದೀಶ್, ಪ್ರವಿ, ಮಂಜುನಾಥ, ಮಾದಪ್ಪ, ಸುರೇಶ್, ಗಿರೀಶ್, ಬಸವರಾಜು, ಬಿ ಸಿ ರಾಜು, ಲಂಕೆ ಮಹೇಶ್,ಶಕಲೇಶ್, ಡಿ.ಸಿ  ಮಹೇಶ್,ಗೋಪಾಲಯ್ಯ ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು.

ಕಾಂಗ್ರೆಸ್ ಪಕ್ಷದ  ಕಚೇರಿ ಮುಂಭಾಗದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್  ವ್ಯವಸ್ಥೆಯನ್ನು ಸರಗೂರು ಠಾಣೆ ಉಪ ನಿರೀಕ್ಷಕರಾದ ಕಿರಣ್ ನೇತೃತ್ವದಲ್ಲಿ ಗೋಪಾಲ್ ಸಿಬ್ಬಂದಿ ಇಮ್ರಾನ್, ಆನಂದ್ ಇನ್ನಿತರರು ಮಾಡಿದ್ದರು.

admin
the authoradmin

Leave a Reply

Translate to any language you want