ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಹೊಸೂರಿನ ಮಸೀದಿ ಅಧ್ಯಕ್ಷ ಇಬ್ರಾಹಿಂ ಶರೀಫ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇಬ್ರಾಹಿಂ ಷರೀಪ್ ಅವರಿಗೆ ಶುಭ ಕೋರಿದರು
ಈ ವೇಳೆ ದೊಡ್ಡಸ್ವಾಮೇಗೌಡ ಮಾತನಾಡಿ ಇಬ್ರಾಹಿಂ ಷರೀಪ್ ಅವರ ತಂದೆ ಮಾಜಿ ಗ್ರಾ.ಪಂ.ಸದಸ್ಯ ಗೌಸ್ ಷರೀಪ್ ಅವರು ಜನಸೇವೆಗೆ ದುಡಿದು ಭಾಗದ ಪ್ರಭಾವಿ ಮುಸ್ಲಿಂ ಮುಖಂಡರಾಗಿ ಗುರುತಿಸಿ ಕೊಂಡಿದ್ದರು. ಇವರ ಹಾದಿಯಲ್ಲಿ ಇಬ್ರಾಹಿಂ ಷರೀಪ್ ಅವರು ಕೂಡ ಜನಸೇವೆಗೆ ಮುಂದಾಗಿ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಇದೇ ಸಂದರ್ಭದಲ್ಲಿ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹುಚ್ಚೇಗೌಡ, ಕಾಂಗ್ರೇಸ್ ಮುಖಂಡರಾದ ಡೈರಿ ಮಾದು, ಎಚ್.ಆರ್.ಪರಶುರಾಮ್, ಮುಖಂಡರಾದ ಐ.ಪಿ.ವೆಂಕಟೇಶ್, ಸಯ್ಯದ್ ಸಲೀಂ, ಮುನ್ನಾ, ರೈಸ್ ಮಿಲ್ ದಿವಾಕರ್, ವಾಚ್ ಅಂಗಡಿ ಬಾಬು, ಪೊಲೀಸ್ ಮಧು, ಮಹ್ಮದ್ ನೂರೂಲ್ಲ, ಜಬೀವುಲ್ಲಾ, ಇಸ್ಮಾಯಿಲ್ ಷರೀಪ್, ಯಾಕೂಬ್ ಷರೀಪ್, ಯುನಸ್ ಷರೀಪ್, ಐಯೂಬ್ ಷರೀಪ್, ರಾಮನ್ ಷರೀಪ್, ಮುಶ್ರತ್ ಪಾಷ, ಮಟನ್ ಜಮೀಲ್, ಮೆಕಾನಿಕ್ ಆಯಾಜ್, ರಿಜ್ವಾನ್, ನದ್ದು ಬೈ, ಸಲಾವುದ್ದಿನ್ ಸೇರಿದಂತೆ ಹಲವರು ಹಾಜರಿದ್ದರು








