ಚಾಮರಾಜನಗರ: ಪಟ್ಟಣದ ಜೋಡಿ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಕಾಶ ಭವನದಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕಾಗಿ ಮಕ್ಕಳ ಬೇಸಿಗೆಯ ಸಂಭ್ರಮದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
6 ರಿಂದ 16 ವಯಸ್ಸಿನ ಮಕ್ಕಳಿಗಾಗಿ ಎಳೆಯ ಮನಸ್ಸಿಗೆ ಏಕಾಗ್ರತೆ ಹಾಗೂ ದೃಢತೆ ಮೂಡಿಸಲು, ಪರಿಸ್ಥಿತಿಗಳಲ್ಲಿ ಕುಗ್ಗದೆ, ಧೈರ್ಯವನ್ನು ಧರಿಸಲು, ಬದಲಾದ ಈ ಪೀಳಿಗೆಗೆ ಶ್ರೇಷ್ಠ ಮೌಲ್ಯಗಳನ್ನು ತುಂಬಲು, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಲು, ಪರಸ್ಪರದಲ್ಲಿ ಏಕತೆಯ ಭಾವನೆ ಮೂಡಿಸಲು, ಆಧ್ಯಾತ್ಮಿಕತೆಯಿಂದ ನವರಾಷ್ಟ್ರ,ಯುವ ರಾಷ್ಟ್ರ,ಸಮೃದ್ಧ ರಾಷ್ಟ್ರ ಕಟ್ಟುವ, ಈ ಪ್ರಯತ್ನದಲ್ಲಿ ಸರ್ವರು ಕೈಜೋಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೌಲ್ಯಭರಿತ ಆಟಗಳು, ರಾಜಯೋಗ ಧ್ಯಾನ, ಉಲ್ಲಾಸವನ್ನು ಹೆಚ್ಚಿಸುವ ಚಟುವಟಿಕೆಗಳು,ಏರೋಜಿಕ್ ವ್ಯಾಯಾಮ,ಧ್ಯಾನ, ಸಕರಾತ್ಮಕ ಚಿಂತನೆ, ಸ್ವಚ್ಛ ಮನಸ್ಸು, ಸ್ವಚ್ಛ ಜೀವನದಿಂದ,ಸ್ವಚ್ಛ ಭಾರತ, ಇತ್ಯಾದಿ ವಿಷಯಗಳನ್ನೊಳಗೊಂಡಂತಹ ಶಿಬಿರವು ದಿನಾಂಕ ಏಪ್ರಿಲ್ 15 ರಿಂದ 17 ರವರೆಗೆ ಸಮಯ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಹಮ್ಮಿಕೊಳ್ಳಲಾಗಿದೆ. ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಬೇಕು ಹೆಚ್ಚಿನ ವಿವರಗಳಿಗೆ 7483520495, 7899820430 ನ್ನು ಸಂಪರ್ಕಿಸ ಬಹುದಾಗಿದೆ.








