ಧಾರವಾಡ: ಧಾರವಾಡದ ವಿದ್ಯಾಪೋಷಕ ಸಂಸ್ಥೆ ವತಿಯಿಂದ 2025-26ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ ಅಭ್ಯಾಸ ಮಾಡುತ್ತಿರುವ ಧಾರವಾಡ ಮತ್ತು ಗದಗ ಜಿಲ್ಲೆಯ ಕೃಷಿಕಾರ್ಮಿಕರು, ಮನೆಗೆಲಸ, ಕ್ಷೌರಿಕ, ಕಟ್ಟಡ ಕೆಲಸ ಮಾಡುವವರು, ಬಡಿಗತನ, ಕಮ್ಮಾರಿಕೆ, ಟೈಲರಿಂಗ್ ಮುಂತಾದ ಕೆಲಸಗಳಲ್ಲಿ ತೊಡಗಿರುವ ಕುಟುಂಬದಿಂದ ಬಂದ ಅನೇಕ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಧನಸಹಾಯ, ಪುಸ್ತಕ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡಲಾಗಿತ್ತು. ಈ ವಿದ್ಯಾರ್ಥಿಗಳ ಪೈಕಿ ಪ್ರತಿಭಾನ್ವಿತ 19ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ಸಾಲಿನಲ್ಲಿ ದ್ವೀತಿಯ ಪಿ.ಯು.ಸಿ.ಯಲ್ಲಿ ಗಣನೀಯ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಅನು ಜಾಧವ್–96.5%(ವಾಣಿಜ್ಯ), ಶಾರದ ನೆಣಕ್ಕಿ–95.83%(ವಾಣಿಜ್ಯ), ಭವಾನಿ ರಡ್ಡರ್–95.16%(ವಿಜ್ಞಾನ), ದೀಕ್ಷಿತಾ ಅಂಚಟಗೆರಿ–95.16% (ವಾಣಿಜ್ಯ), ಸಾಕ್ಷಿ ಬಡಿಗನ್ನವರ–95.16% (ವಾಣಿಜ್ಯ), ಸುಮಾ ಗರಗ–95.3%(ವಿಜ್ಞಾನ), ಚಂದನಾ ಪಾಟೀಲ್–94.6% (ವಿಜ್ಞಾನ),ಮೇಘಾ ಚಿಕ್ಕನಗೌಡ್ರ–94.3%(ವಿಜ್ಞಾನ), ಆಕಾಶ ಜುಲ್ಪಿ–93.8%(ವಾಣಿಜ್ಯ), ಚನ್ನಮ್ಮ ಸಂದಿಮನಿ–93.3%, (ವಾಣಿಜ್ಯ),ಪ್ರಣೀತ್ ಕಲಘಟಗಿ–92.16% (ವಿಜ್ಞಾನ), ಸೌಜನ್ಯ ತುರುಮರಿ–90.6%(ವಿಜ್ಞಾನ), ರುಚಿತಾ ಶಿಲಾರೆ–90%(ವಿಜ್ಞಾನ), ಅದಿತಿ ದೇಶಪಾಂಡೆ–91.5% (ವಿಜ್ಞಾನ), ಪಲ್ಲವಿ ಕುಂಬಾರ್–90.16%(ವಿಜ್ಞಾನ), ಭಾವನಾ ಬಡಗರು–92.16%(ವಿಜ್ಞಾನ), ಅಮೋಘಾ ಹಿರೇಮಠ–90.6% (ವಿಜ್ಞಾನ), ಸೌಮ್ಯ ಪಾಟೀಲ್–94.5% (ವಾಣಿಜ್ಯ), ಬಸವಣ್ಣೆವ್ವ ಉಪ್ಪಾರ್–92.6%(ವಾಣಿಜ್ಯ)ದಲ್ಲಿ ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ ಸಂಸ್ಥೆ ಶುಭಹಾರೈಸಿದೆ.








