ArticlesLatestLife style

ಬಹುಮುಖ ಪ್ರತಿಭೆ ಬರೀರಾ ಷಪಿ಼… ವಿದ್ಯಾರ್ಥಿ ಜೀವನದಲ್ಲಿಯೇ ವಿಶ್ವದಾಖಲೆ ಬರೆದ ಮಹಾಸಾಧಕಿ…!

ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತಿದೆ. ಅದರಂತೆ ಬಾಲ್ಯದಿಂದಲೇ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾದ ಸುಂದರ ಬರವಣಿಗೆ, ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಗೆಲುವು ಸಾಧಿಸುತ್ತಾ ಬಂದಿರುವ  ಪಿರಿಯಾಪಟ್ಟಣದ ಪುಷ್ಪ ಆಂಗ್ಲ ಮಾಧ್ಯಮ  ಶಾಲೆಯ ವಿದ್ಯಾರ್ಥಿನಿ ಬರೀರಾ ಷಪಿ಼ (CBSE) 10ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಲ್ಲದೆ, “ವರ್ಲ್ಡ್ ರೆಕಾರ್ಡ್  ಹೋಲ್ಡರ್” (World Record Holder) ಆಗಿ ಹೊರಹೊಮ್ಮುವ ಮೂಲಕ ಚಿಕ್ಕವಯಸ್ಸಿಗೆ ದೊಡ್ಡ ಸಾಧನೆ ಮಾಡಿ, ಪೋಷಕರಿಗೆ, ಶಾಲೆಗೆ ಕೀರ್ತಿ ತರುವುದರೊಂದಿಗೆ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

ಮಹಮ್ಮದ್ ಫಫಿ಼ ಮತ್ತು ಡಾ. ಸರ್ತಾಜ್ ಪಿ. ಹೆಚ್. ದಂಪತಿಗಳ ಪುತ್ರಿ ಬರೀರಾ ಷಪಿ಼ ಅವರು ಗುರ್ಲಿನ್ ಕೌರ್ –  ಝೆನಿತ್  ಸ್ಕೂಲ್ ಆಫ್ ಲೀಡರ್ ಶಿಫ್ ಸಂಸ್ಥೆಯ  ಸಂಸ್ಥಾಪಕಿ ಮತ್ತು ಮುಖ್ಯಸ್ಥೆ. ಎಂಬ ಮಹಿಳಾ ಉದ್ಯಮಿಯ ಬಗೆಗಿನ  ಶೋಧ ಲೇಖನವನ್ನು ಪುರಸ್ಕರಿಸಿ ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಪ್ರಮಾಣಿಕರಿಸಿ, ಯುನಿಕ್ ವರ್ಲ್ಡ್ ರೆಕಾರ್ಡ್ಸ್  ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ – 2 ಪ್ರಶಸ್ತಿ ,ಟ್ರೋಫಿ, ಮೆಡಲ್, ನೀಡಿ ಗೌರವಿಸಿದೆ.  ಇದೊಂದು ಮಹಾ ಸಾಧನೆಯಾಗಿದೆ.

ಏನಿದು ಯುನಿಕ್ ವರ್ಲ್ಡ್ ರೆಕಾರ್ಡ್ಸ್  ಮತ್ತು ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಒಂದಿಷ್ಟು ಪರಿಚಯ ಮಾಡಿಕೊಂಡರೆ  ಅದರ ಮಹತ್ವ ಅರಿವಾಗುತ್ತದೆ.  “ಅಗ್ರಿಣಿ : ದಿ ವುಮೆನ್ ಎಂಟರ್‌ಪ್ರೆನ್ಯೂರ್” ( AGRANI :The Women Enteraprenur) ಸಂಶೋಧನಾ ಆಧಾರಿತ ಲೇಖನಗಳ ಸಂಗ್ರಹವನ್ನು  ದೆಹಲಿಯ ಡಾ. ವಿದುಷಿ ಶರ್ಮ 5 ವಿಶ್ವ ದಾಖಲೆ ಸಾಧಕರು, ಶೈಕ್ಷಣಿಕ ಕೌನ್ಸಿಲರ್- ಇಗ್ನೋ, ದೆಹಲಿ. ರಹಸ್ಯ ಅಧಿಕಾರಿ- ಸಿ.ಬಿ.ಎಸ್‌.ಇ, ಸಂಶೋಧನಾ ಮಾರ್ಗದರ್ಶಿ- ಜೆ.ಜೆ.ಟಿ.ಯು, ಶೈಕ್ಷಣಿಕ ಸಹಾಯಕಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದಾರೆ.

ಇವರ  ಸಂಘಟನೆ, ನಿರ್ದೇಶನ, ಸಂಪಾದಕತ್ವದಲ್ಲಿ ಪ್ರಸ್ತುತ ಪಡಿಸಲಾದ ಸಂಶೋಧನಾ ಸಂಗ್ರಹವಾಗಿದೆ. ಇದು ಮಹಿಳಾ ಉದ್ಯಮಿಗಳ ಬಾಲ್ಯ, ಶಿಕ್ಷಣ, ಸಂಘರ್ಷ, ಹೋರಾಟ, ಸಾಧನೆ ಮತ್ತು ನಾಯಕತ್ವದ ಪ್ರಯಾಣಗಳನ್ನು ಪ್ರದರ್ಶಿಸುತ್ತದೆ ಮತ್ತು ಮಹಿಳಾ ಸಬಲೀಕರಣ ಕುರಿತು  ವಿಶಿಷ್ಟ ವಿಶ್ವ ದಾಖಲೆಗಳಲ್ಲಿ ಸೇರಿಸಲಾಗುತ್ತದೆ.

ಇದರಲ್ಲಿ ಬರೀರಾ ಷಪಿ಼  ರವರು  ಗುರ್ಲಿನ್ ಕೌರ್ –  ಝೆನಿತ್  ಸ್ಕೂಲ್ ಆಫ್ ಲೀಡರ್ಶಿಪ್ ಸಂಸ್ಥೆಯ  ಸಂಸ್ಥಾಪಕಿ ಮತ್ತು ಮುಖ್ಯಸ್ಥೆ. ಎಂಬ ಮಹಿಳಾ ಉದ್ಯಮಿಯ ಬಗ್ಗೆ ಶೋಧ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ ಎಂದು ಪ್ರಮಾಣಿಕರಿಸಿ, ಯುನಿಕ್ ವರ್ಲ್ಡ್ ರೆಕಾರ್ಡ್ಸ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ – 2 ಪ್ರಶಸ್ತಿ ,ಟ್ರೋಫಿ, ಮೆಡಲ್, ನೀಡಿ ಗೌರವಿಸಿದೆ.  ಈ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ವಿದ್ಯಾರ್ಥಿನಿ ಬರೀರಾ ಷಪಿ಼ ಅವರ ಕುಟುಂಬ ಮತ್ತು ಪ್ರಾಥಮಿಕ ಶಿಕ್ಷಣ, ಪಠ್ಯೇತರ ಚಟುವಟಿಕೆಗಳನ್ನು ನೋಡಿದ್ದೇ ಆದರೆ ಪ್ರತಿಭಾವಂತ ವಿದ್ಯಾರ್ಥಿನಿ ಎನ್ನುವುದನ್ನು ಸಾಬೀತು ಮಾಡುತ್ತದೆ. ಇದಕ್ಕೆ ಅವರ  ತಂದೆ ಮಹಮ್ಮದ್ ಫಫಿ಼ ಮತ್ತು ತಾಯಿ ಡಾ. ಸರ್ತಾಜ್ ಪಿ. ಹೆಚ್. ಅವರು ಬೆಳೆಸಿದ ರೀತಿಯೇ ಕಾರಣವಾಗಿದೆ.

ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ  ಬರೀರಾ ಷಪಿ಼ ಅವರಿಗೆ ನೈತಿಕ ಮೌಲ್ಯ, ಶಿಸ್ತಿಗೆ ಪ್ರಾಮುಖ್ಯತೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಿ, ಸುಸಂಸ್ಕೃತ ವಾತಾವರಣದಲ್ಲಿ ತುಂಬಾ ಪ್ರೀತಿಯಿಂದ ಬೆಳೆಸಿದ್ದಾರೆ.

ಪೋಷಕರಿಬ್ಬರು ಉಪನ್ಯಾಸಕರಾಗಿದ್ದು ವಿದ್ಯಾರ್ಜನೆಗೆ ಮನೆಯ ಅನುಕೂಲಕರ ವಾತಾವರಣ ಸಹಕಾರಿಯಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ತಂದೆ ಮಹಮ್ಮದ್ ಫಫಿ಼ ಅವರಿಂದ ನಿರ್ವಹಣಾ ಮತ್ತು ನಾಯಕತ್ವ ಗುಣಗಳನ್ನು ಪಡೆದ ಅವರು ಶಾಲಾ ದಿನಗಳಲ್ಲಿ ಶಾಲೆಯಲ್ಲಿ ನಡೆಯುವ ಚುನಾವಣೆಗಳಲ್ಲಿ ಭಾಗವಹಿಸಿ ಶಾಲಾ ಸಾಂಸ್ಕೃತಿಕ ನಾಯಕಿಯಾಗಿ, ಶಾಲಾ ವಿದ್ಯಾರ್ಥಿಗಳ ನಾಯಕಿಯಾಗಿ ತಮ್ಮ ಜವಾಬ್ದಾರಿಯನ್ನ ನಿರ್ವಹಿಸುತ್ತಾ ಬಂದಿರುವುದು ಖುಷಿಕೊಡುವ ವಿಚಾರವಾಗಿದೆ.

ಇನ್ನು  ತನ್ನ ತಾಯಿ ಡಾ. ಸರ್ತಾಜ್ ಪಿ. ಹೆಚ್. ಅವರಿಂದ ಸಂಸ್ಕಾರ, ಸಂಸ್ಕೃತಿ ಸಾಹಿತ್ಯ ಕೃತಿಯನ್ನು ತನ್ನದಾಗಿಸಿಕೊಂಡಿರುವ ಬರೀರಾ ಷಪಿ಼  ತನ್ನ ನಾಲ್ಕನೇ ವಯಸ್ಸಿನಿಂದಲೇ (LKG) ಸುಂದರ ಬರವಣಿಗೆ, ಚಿತ್ರಕಲೆ, ಭಾಷಣ , ಪ್ರಬಂಧ ಸ್ಪರ್ಧೆ, ಕ್ರೀಡೆ ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಗೆಲುವು ಸಾಧಿಸುತ್ತಾ ಬಂದಿರುವುದು ಗಮನಾರ್ಹವಾಗಿದೆ.

ಇವರ ಸಾಧನೆಯತ್ತ ಕಣ್ಣು ಹಾಯಿಸಿದರೆ  2024-25ರಲ್ಲಿ ಅಖಿಲ ಭಾರತ ನಾಗರಿಕ ಅಭಿವೃದ್ಧಿ ಕೇಂದ್ರ ,ಔರಂಗಬಾದ್ ಮಹಾರಾಷ್ಟ್ರ  ಇವರು ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ ಸುಂದರ ಬರಹ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ “ವಿದ್ಯಾಭೂಷಣ” ಪ್ರಶಸ್ತಿ ಮತ್ತು ಪದಕ ಪಡೆದಿದ್ದಾರೆ.

ತನ್ನ ಬಾಲ್ಯದಿಂದ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಬರೀರಾ ಷಪಿ಼   ಶಾಲಾ ಮಟ್ಟದಲ್ಲಿ, ಅಂತರ್ ಶಾಲಾ ಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟದಲ್ಲಿ ಚಿತ್ರ ಕಲೆಯಲ್ಲಿ ಭಾಗವಹಿಸುವುದರೊಂದಿಗೆ ಜಪಾನ್ ಟೋಕಿಯೋದಿಂದ ಪ್ರಕಟಗೊಳ್ಳುವ “ಹಿಂದಿ ಕೀ ಗುಂಜ್ ”ಪತ್ರಿಕೆಯಲ್ಲಿ ತಮ್ಮ ಚಿತ್ರಗಳನ್ನು ರಚಿಸಿ “ಬಾಲ ಚಿತ್ರಕಾರ ಸಮ್ಮಾನ್”  ಪ್ರಶಸ್ತಿ ಬಾಜನರಾಗಿದ್ದಾರೆ.

ಇಷ್ಟೇ ಅಲ್ಲದೆ, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಮೈಸೂರು ಘಟಕ ಇಲ್ಲಿ ಶಾಲಾ ವತಿಯಿಂದ ಭಾಗವಹಿಸಿ “ರಾಜ್ಯ ಪುರಸ್ಕಾರ” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಶಿಸ್ತು, ಸೃಜನಾತ್ಮಕತೆ, ಪರಿಶ್ರಮಿ, ಸ್ವಾವಲಂಬಿ, ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ಸುಸಂಸ್ಕೃತ ಕೌಟುಂಬಿಕ ವಾತಾವರಣದಲ್ಲಿ ಬೆಳೆಯುತ್ತಿರುವ ಬರೀರಾಳಿಗೆ ಚಿತ್ರಕಲೆ ,ಕ್ಯಾಲಿಗ್ರಫಿ ಭಾಷಣ, ವೇದಿಕೆ ನಿರ್ವಹಣೆ, ಓದು ಸೃಜನಾತ್ಮಕ, ಬರವಣಿಗೆಯತ್ತ ಹೆಚ್ಚಿನ ಆಸಕ್ತಿಯಿದ್ದು, ಸದಾ ಏನಾದರೊಂದು ಸಾಧನೆ ಮಾಡಬೇಕೆನ್ನುವ ಛಲ ಹೊಂದಿರುವ ಅವರ ಭವಿಷ್ಯ ಉಜ್ಜಲವಾಗಿರಲಿ ಎನ್ನುವುದೇ ಜನಮನಕನ್ನಡದ ಆಶಯವಾಗಿದೆ

 

-B M Lavakumar

admin
the authoradmin

Leave a Reply

Translate to any language you want