LatestMysore

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಡಾ. ಪ್ರಪುಲ್ಲ ಮಲ್ಲಾಡಿ  ಆಕ್ರೋಶ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿಗೊಳಿಸುವುದು ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆಯುವಂತಹ ಒಂದು ಐತಿಹಾಸಿಕವಾದ ನಿರ್ಧಾರವಾಗಬಹುದಿತ್ತು. ದಶಕಗಳ ಕನಸು ನನಸಾಗಿಸುವ, ಮೀಸಲಾತಿ ಹಕ್ಕನ್ನು ಕೇಳಿ ಕೇಳಿ ದಣಿದ ದ್ವನಿಗೆ ಶಕ್ತಿ ತುಂಬಿಸುವ ಹಾಗೂ ಈ ದೇಶದ ಅರ್ಧ ಜನಸಂಖ್ಯೆಯ ಆತ್ಮ ಗೌರವವನ್ನು ಹೆಚ್ಚಿಸುವ  ಅವಕಾಶಗಳು  17ಏಪ್ರಿಲ್ 2026 ಕ್ಕೆ ವಿಶೇಷ ಸದನದಲ್ಲಿದ್ದ ಎಲ್ಲಾ ರಾಜಕೀಯ ಪಕ್ಷಗಳಿಗೆ ಇತ್ತು ಆದರೆ ಪ್ರತಿಪಕ್ಷಗಳ ಧ್ರೋಹದಿಂದ ಮಹಿಳೆಯರು ತಮ್ಮ ಹಕ್ಕಿನಿಂದ ವಂಚಿತರಾಗಿದ್ದರೆ. ಕಾಂಗ್ರೆಸ್ ಮಹಿಳಾ ವಿರೋಧಿ ನೀತಿಯ ಕರಾಳ ಮುಖ ಇಡೀ ದೇಶಕೆ ಮತೊಮ್ಮೆ ತೋರಿಸಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಡಾ.ಪ್ರಪುಲ್ಲ ಮಲ್ಲಾಡಿ ಕಿಡಿಕಾರಿದರು.

ಕೆ.ಅರ್. ನಗರದಲ್ಲಿ ನಡೆದ ಬಿಜೆಪಿಮಹಿಳಾ ಮೋರ್ಚಾ ಖಂಡನೀಯ ಸಭೆಯಲ್ಲಿ ಮಾತನಾಡಿ, ರಾಹುಲ್ ಗಾಂಧಿಗೆ ಕಾಂಗ್ರೆಸ್ಸಿನ ಪರವಾಗಿ ತಾಯಿ ಸೋನಿಯಾ ಗಾಂಧಿ ಅಕ್ಕ ಪ್ರಿಯಾಂಕ ಗಾಂಧಿ ಪಾರ್ಲಿಮೆಂಟ್ ಗೆ ಹೋದರೆ ಸಾಕು, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಗೆ ತನ್ನ ಪತ್ನಿ ಡಿಂಪಲ್ ಯಾದವ್ ಪಾರ್ಲಿಮೆಟಿನಲ್ಲಿ ಇದ್ದರೆ ಸಾಕು, ಸಾಮಾನ್ಯ ವರ್ಗದ ಹಿಂದುಳಿದ ದಲಿತ ಮಹಿಳೆಯರು ಎಲ್ಲ ಸಾಮರ್ಥ್ಯ ಇದ್ದರೂ ಅವರಿಗೆ ಅವಕಾಶ ಕಲ್ಪಿಸಬೇಕು ಅನ್ನೋ ಆಲೋಚನೆಯಿಂದ ಗಾಂಧಿ ಪರಿವಾರ ತುಂಬಾ ದೂರ ಉಳಿದುಬಿಟ್ಟಿದೆ.

ಇತಿಹಾಸ ನೋಡಿದರೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸಮಾನ ಅವಕಾಶವನ್ನು  ಕೊಡಬೇಕು ಅಂತ 1951ರಲ್ಲಿ  “ಹಿಂದೂ ಕೋಡ್ ಬಿಲ್”ನ್ನ ಮಂಡಿಸುತ್ತರೆ ಆದಿನ ಇದನ್ನ ವಿರೋಧಿಸಿದ್ದು ನೆಹರು ಅಂಡ್ ದ ಟೀಮ್ ಕಾಂಗ್ರೆಸ್.  ಒಂದು ಕಡೆ ಬಾಬಾ ಸಾಹೇಬರ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು  “ನಾರಿ ಶಕ್ತಿ ವಂದನ” ಅಧಿನಿಯಮದ ಮೂಲಕ ಈ ದೇಶದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡಿ ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಮಹಿಳೆಯರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕು, ರಾಷ್ಟ್ರ ನೀತಿಗಳನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕು ಅಂದುಕೊಂಡಿದ್ದ ಕನಸಿಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ತಣ್ಣೀರು ಎರಚಿದೆ, ಇದರಿಂದ ಎಚ್ಚೆತ್ತಿರುವ ಈ ದೇಶದ ಸಮಸ್ತ ನಾರಿಯರು ಮುಂಬರುವ ಚನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ತಕ್ಕ ಪಾಠ ಕಲಿಸುತ್ತದೆ ಎಂದು ಕಿಡಿ ಕಾರಿದ್ದಾರೆ

ಖಂಡನೀಯ ಸಭೆಯಲ್ಲೀ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ  ಕುಂಬ್ರಳ್ಳಿ ಸುಬ್ಬಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ್ ರಾಜ್ ಅರಸ್ , ಜಿಲ್ಲಾ ಉಪಾಧ್ಯಕ್ಷೆ  ಸ್ವಪ್ನ ನಾಗೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ತಿರುಮಲೇಶ್ವರಿ ಪ್ರಧಾನ ಕಾರ್ಯದರ್ಶಿ ಸವಿತ ಚೌಹಾಣ್, ನಂದಿನಿ, ಮಂಡಲದ ಅಧ್ಯಕ್ಷ ಧರ್ಮ, ಸಾ.ರಾ.ತಿಲಕ್, ಉಮಾಶಂಕರ್, ಅಂಬುಜಾ, ಲತಾ ಹಾಗೂ ಎಲ್ಲ  ಕಾರ್ಯಕರ್ತರು, ಮಹಿಳೆಯರು  ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ನಡೆದಂತಹ ಈ ಖಂಡನೀಯ ಸಭೆಗೆ ಸಾಕ್ಷಿಯಾಗಿದ್ದರು.

admin
the authoradmin

Leave a Reply

Translate to any language you want