ಮೈಸೂರು: ಬಂಟರ ಸಂಘ ಹಾಗೂ ಬಂಟ್ಸ್ ಚಾರಿಟೇಬಲ್ ಟ್ರಸ್ಟ್, ಮೈಸೂರು ವತಿಯಿಂದ ಆಯೋಜಿಸಲಾದ ವಾರ್ಷಿಕ ಮಹಾಸಭೆ ಭಾನುವಾರ ಬೆಳಿಗ್ಗೆ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆನ್ಷನ್ ಹಾಲ್, ಬಂಟರ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮೈಸೂರು ಬಂಟರ ಸಂಘದ ಅಧ್ಯಕ್ಷರಾಗಿ ಶ್ರೀ ಕೆ. ಗಣೇಶ್ ನಾರಾಯಣ ಹೆಗ್ಡೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಶ್ರೀ ಎಂ. ನಂದ್ಯಪ್ಪ ಶೆಟ್ಟಿ ಹಾಗೂ ಶ್ರೀ ರಂಜಿತ್ ಹೆಗ್ಡೆ ಆಯ್ಕೆಯಾದರು.
ಗೌರವ ಕಾರ್ಯದರ್ಶಿಯಾಗಿ ಸಿ.ಎ. ಸುರೇಂದ್ರ ಹೆಗ್ಡೆ, ಕೋಶಾಧಿಕಾರಿಗಳಾಗಿ ಶ್ರೀಮತಿ ಆಲಕರಾಣಿ ಶೆಟ್ಟಿ ಮತ್ತು ಜೊತೆ ಕೋಶಾಧಿಕಾರಿಗಳಾಗಿ ಶ್ರೀಮತಿ ಸೌಮ್ಯ ವಿ. ಶೆಟ್ಟಿ ಆಯ್ಕೆಯಾದರೆ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಪ್ರಮೀಳಾ ಶೆಟ್ಟಿ ಹಾಗೂ ಡಾ. ವೇದಾಂತ್ ಶೆಟ್ಟಿ ಜವಾಬ್ದಾರಿ ವಹಿಸಿಕೊಂಡರು.
ಬಂಟ್ಸ್ ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಶ್ರೀ ಪಿ. ಸುರೇಶ್ ಆಳ್ವ ಆಯ್ಕೆಯಾಗಿದ್ದು, ಉಪ ಮ್ಯಾನೇಜಿಂಗ್ ಟ್ರಸ್ಟಿಗಳಾಗಿ ಡಾ. ಜಗನ್ನಾಥ್ ಶೆಟ್ಟಿ ಹಾಗೂ ಶ್ರೀ ಸಂಜಯ್ ಕೆ. ಶೆಟ್ಟಿ ಆಯ್ಕೆಯಾದರು. ಟ್ರಸ್ಟ್ನ ಕೋಶಾಧಿಕಾರಿ ಹಾಗೂ ಗೌರವ ಕಾರ್ಯದರ್ಶಿಯಾಗಿ ಸಿ.ಎ. ಸುರೇಂದ್ರ ಹೆಗ್ಡೆ, ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಪಿ. ಹರೀಶ್ ಆಳ್ವ ಮತ್ತು ಡಾ. ಪ್ರಕಾಶ್ ಶೆಟ್ಟಿ ಆಯ್ಕೆಯಾದರು. ಸುಮಾರು 12 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯೂ ರಚಿಸಲಾಯಿತು.
ಸಭೆಯಲ್ಲಿ ಸದಸ್ಯರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ಅವರಿಂದ ಉತ್ತಮ ಕಾರ್ಯ ಹಾಗೂ ಮಾರ್ಗದರ್ಶನ ದೊರೆಯಲೆಂದು ಹಾರೈಸಿದರು. ಹೊಸ ಪದಾಧಿಕಾರಿಗಳು ಸಂಘದ ಪ್ರಗತಿಗೆ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.








