ArticlesLatest

ಭಾರತ ರತ್ನ ಕರ್ಪೂರಿ ಠಾಕೂರ್ … ಸವಿತಾ ಸಮಾಜದ ಮೇರುನಾಯಕ… ಹೋರಾಟದ ಬದುಕು ಹೇಗಿತ್ತು?

ಜಾತಿ ಪದ್ಧತಿಯಿಂದ ಶೋಷಣೆಗೆ ಒಳಪಟ್ಟ ಹಲವಾರು ಜನಾಂಗಗಳಲ್ಲಿ ಕ್ಷೌರಿಕ ಜನಾಂಗವೂ ಒಂದು. ಕಾಯಕ ಸಮಾಜಗಳು ವರ್ಣಾಶ್ರಮ ಪದ್ಧತಿ ಹುಟ್ಟಿದಾಗಿನಿಂದಲೂ ತಮ್ಮ ಬದ್ಧತೆಯನ್ನು ಮೆರೆಯುತ್ತಾ ಬಂದಿವೆ. ಕಾಯಕ ಸಮಾಜಗಳ ಸೇವೆ ನಾಗರಿಕ ಸಮಾಜಕ್ಕೆ ಅತ್ಯಗತ್ಯ ಎಂಬುದು ವೇದ್ಯವಾಗಿದ್ದರೂ ಸಹ ಸಮಾಜದ ಸೇವೆಗೆ ನ್ಯಾಯಯುತವಾಗಿ ದೊರೆಯಬೇಕಾದ ಮಾನ್ಯತೆ, ವೃತ್ತಿ ಗೌರವ ದೊರೆಯುತ್ತಿಲ್ಲವೆಂಬುದು ದುರ್ದೈವದ ಸಂಗತಿ… ರಾಜಕೀಯವಾಗಿಯೂ ಈ ಸಮಾಜ ಹಿಂದುಳಿದಿದೆ. ಹೀಗಿರುವಾಗಲೇ ಸಮಾಜವನ್ನು ರಾಜಕೀಯವಾಗಿ ಎತ್ತಿಹಿಡಿದವರು ಕರ್ಪೂರಿ ಠಾಕೂರ್. ಸವಿತಾ ಸಮಾಜದ ಮಹಾಪುರುಷರನ್ನು ನೆನಪಿಸಿಕೊಳ್ಳುತ್ತಾ ಕರ್ಪೂರಿ ಠಾಕೂರ್ ಅವರ ರಾಜಕೀಯ ಬದುಕಿನಾಚೆಗೂ ಬೆಳಕು ಚೆಲ್ಲುವ ಕಾರ್ಯವನ್ನು ಬರಹಗಾರರಾದ ಮೈ.ನಾ.ಲೋಕೇಶ್ ಮಾಡಿದ್ದಾರೆ.

ಇನ್ನು ಸವಿತಾ ಸಮಾಜವನ್ನು ಪ್ರತಿನಿಧಿಸಿದ ಮಹಾಪುರುಷರು ಇಲ್ಲದಿಲ್ಲ. ಹಾಗೆನೋಡಿದರೆ ಸವಿತಾ ಸಮಾಜದ ಮೂಲಪುರುಷರು ಶ್ರೀ ಸವಿತಾ ಮಹರ್ಷಿಗಳು. ಪುರಾಣಗಳ ಪ್ರಕಾರ ಗಾಯತ್ರಿ ದೇವಿಯು ವೇದಮಾತೆ  ಶಕ್ತಿ ಸ್ವರೂಪಿಣಿ ಗಾಯತ್ರಿ ಮಾತೆಯು ಸವಿತಾ ಮಹರ್ಷಿಗಳ ಮಗಳಾದ್ದರಿಂದ ಸಾವಿತ್ರಿ ಎಂದು ಕರೆಯಲಾಗಿದೆ. ಗಾಯಿತ್ರಿ ಮಂತ್ರವು ಹಿಂದೂ ಧರ್ಮದ ಶ್ರೇಷ್ಠ ಮಂತ್ರಗಳಲ್ಲಿ ಒಂದೆನಿಸಿದೆ. ಶಿವನಿಗೆ ಆಯುಷ್ಕರ್ಮವನ್ನು ಪೂರೈಸಿ ಸಂತೃಪ್ತಿಗೊಳಿಸಿದ್ದರಿಂದ ಸವಿತಾ ಮಹರ್ಷಿಗಳಿಗೆ ಶಿವನಿಂದ ಆಯುರ್ವೇದ ಹಾಗೂ ಸಂಗೀತ ಪರಿಕರಗಳನ್ನು ಬಹುಮಾನವಾಗಿ ಪಡೆದಿರುವ ಜನಾಂಗ ಎಂದು ನಂಬಲಾಗಿದೆ‌ ಆದ್ದರಿಂದ ಅಂದಿನಿಂದಲೂ ಇಂದಿನವರೆಗೂ ಸವಿತಾ ಸಮಾಜದವರು ಕಲೆ, ಲಲಿತ ಕಲೆಗಳಲ್ಲಿ ಸಂಗೀತ ವಾದ್ಯಗಳಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದಾರೆ.

ಜೊತೆಗೆ ಆಯುರ್ವೇದ ಪದ್ಧತಿಯಲ್ಲೂ ಸಹ ತಮ್ಮ ಪಾಂಡಿತ್ಯವನ್ನು ಮೆರೆದಿದ್ದಾರೆ ವೇದಗಳಲ್ಲಿ ಒಂದಾದ ಸಾಮವೇದವನ್ನು ರಚಿಸಿದ ಕೀರ್ತಿ ಸಹ ಶ್ರೀ ಸವಿತಾ ಮಹರ್ಷಿಗಳಿಗೆ ಸಲ್ಲುತ್ತದೆ. ಇನ್ನು ಇತಿಹಾಸದ ಪುಟಗಳನ್ನು ತಿರುವಿದಾಗ ನಂದ ಸಾಮ್ರಾಜ್ಯದ ಮಹಾಪದ್ಮನಂದ, ಕಳುಚೂರಿ ರಾಜವಂಶದ ರಾಜ ಇಮ್ಮಡಿ ಬಿಜ್ಜಳ ಹಾಗೂ ಗೌತಮ ಬುದ್ಧನ ಆಪ್ತ ಶಿಷ್ಯನಾಗಿದ್ದ ಆಚಾರ್ಯ ಉಪಲಿ ಸಹ ಕ್ಷೌರಿಕ ಸಮುದಾಯಕ್ಕೆ ಸೇರಿದವರು ಎಂಬುದು ಹೆಮ್ಮೆಯ ವಿಚಾರವಾಗಿದೆ. ಇನ್ನು 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಭಕ್ತಿ ಭಂಡಾರಿ ಬಸವಣ್ಣನವರ ಆಪ್ತರಲ್ಲಿ ಹಡಪದ ಅಪ್ಪಣ್ಣನವರ ಹೆಸರು ಚರಿತ್ರಾರ್ಹವಾಗಿದೆ.

ಬಹುಪಾಲು ಕಾಯಕ ಸಮುದಾಯವೇ ಪ್ರತಿನಿಧಿಸಿದ ಜಗತ್ತಿನ ಮೊದಲ ಪ್ರಜಾಸತ್ತಾತ್ಮಕ ಪರಿಷತ್, ಅನುಭವ ಮಂಟಪ ಸಾಮಾಜಿಕ  ಅಸಮಾನತೆಯನ್ನು ಹೋಗಲಾಡಿಸುವಲ್ಲಿ, ಬಸವಣ್ಣನವರಿಗೆ ಹೆಗಲು ಕೊಟ್ಟು ಶ್ರಮಿಸಿದವರಲ್ಲಿ ಹಡಪದ ಅಪ್ಪಣ್ಣನವರ ಕಾಣಿಕೆ ಅಮೂಲ್ಯವಾದದ್ದು

ನಾವು ಸ್ವಾತಂತ್ರ್ಯ ನಂತರದ ರಾಜಕೀಯವಾಗಿ ಸಮಾಜವನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳಲ್ಲಿ ಕರ್ಪೂರಿ ಠಾಕೂರ್ ಪ್ರಮುಖ ಸ್ಥಾನವನ್ನು ಪಡೆಯುತ್ತಾರೆ. ಅವರ ಜೀವನಗಾಥೆಯನ್ನು ನೋಡಿದ್ದೇ ಆದರೆ ಎರಡು ಬಾರಿ ಬಿಹಾರದ ಮುಖ್ಯಮಂತ್ರಿ ಮತ್ತು ಹಿರಿಯ ಸಮಾಜವಾದಿ ನಾಯಕರಾಗಿದ್ದು, ಅವರ ಪ್ರಭಾವ ಇಂದಿಗೂ ಪ್ರತಿಧ್ವನಿಸುತ್ತಿದೆ. ಮೀಸಲಾತಿಯ ಪ್ರಬಲ ಪ್ರತಿಪಾದಕರಾಗಿ ,ಮದ್ಯಪಾನ ನಿಷೇಧದಂತಹ ಹಲವಾರು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಂಡ ಠಾಕೂರ್, ತಮ್ಮ ಸರಳ ಜೀವನದಿಂದ ಇಂದಿನ ರಾಜಕಾರಣಿಗಳಿಗೆ ಮಾದರಿ ಎನಿಸಿದ್ದಾರೆ. ಪ್ರಾಸಂಗಿಕವಾಗಿ ಜನನಾಯಕ ಎಂದು ಪ್ರೀತಿಯಿಂದ ಕರೆಯಲ್ಪಡುವ ಕರ್ಪೂರಿ, ಬಿಹಾರದ ಇಂದಿನ ತಲೆಮಾರಿನ ಎಲ್ಲಾ ರಾಜಕಾರಣಿಗಳ ಮಾರ್ಗದರ್ಶಕರಾಗಿದ್ದರು ಎಂಬುದು ಉಲ್ಲೇಖನಿಯ.

ಈಗ ಕರ್ಪೂರಿ ಸ್ಮೃತಿ ಸಮುದಾಯಕ್ ಭವನ್, ಕರ್ಪೂರಿ ಸ್ಮಾರಕ ಸಮುದಾಯ ಭವನ ಎಂದು ಮರುನಾಮಕರಣಗೊಂಡಿರುವ ಕರ್ಪೂರಿಯವರ  ಪೂರ್ವಜರ ಹೆಂಚಿನ ಮನೆಯೊಳಗಿನ ಒಂದು ತ್ವರಿತ ನೋಟವು ಇಂದಿನ ನಾಯಕರ ಪ್ರಸ್ತುತ, ಆಡಂಬರ, ಅದ್ದೂರಿ ಜೀವನದ  ವೈರುಧ್ಯತೆಯ  ಸಂಪೂರ್ಣ ಚಿತ್ರಣವನ್ನು  ನೀಡುತ್ತದೆ.  ಇಂದಿಗೂ ಕರ್ಪೂರಿ ಅವರ ಸೋದರ ರಾಮ್ ಶುಗನ್ ಠಾಕೂರ್ ಅವರ ಸೊಸೆ ನಿಶಾ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ ನಿತ್ಯಾನಂದ ಠಾಕೂರ್ ಸ್ಥಳೀಯ ಕಾಲೇಜು ಒಂದರಲ್ಲಿ ಗುಮಾಸ್ತರಾಗಿ ದುಡಿಯುತ್ತಿದ್ದಾರೆ ಎಂಬುದು ತಿಳಿದರೆ ಅವರ ಕುಟುಂಬದ ಸರಳತೆ, ಪ್ರಾಮಾಣಿಕತೆಯ ಪರಿಚಯವಾಗುತ್ತದೆ.

ಸರಳತೆಗೆ ಹಾಗೂ ಪ್ರಾಮಾಣಿಕತೆಗೆ ಹಾಗೂ ಕಾರ್ಯನಿಷ್ಠೆಗೆ ಹೆಸರುವಾಸಿಯಾಗಿದ್ದ ಕರ್ಪೂರಿ ಠಾಕೂರ್ , ಸಾಮಾಜಿಕ ನ್ಯಾಯದ ಸಾರಾಂಶವಾಗಿದ್ದರು. ಮೂಲತಃ ಪಿತಾಂಜಿಯ ಎಂದು ಕರೆಯಲ್ಪಡುವ ಈ ಕುಗ್ರಾಮವನ್ನು 80ರ ದಶಕದ ಉತ್ತರಾರ್ಧದಲ್ಲಿ, ಹಿರಿಯ ಸಮಾಜವಾದಿಯ ನಿಧನದ ನಂತರ ಕರ್ಪೂರಿ ಗ್ರಾಮ ಎಂದು ಮರುನಾಮಕರಣ ಮಾಡಲಾಯಿತು. ಅವರು ನಿಧನರಾದಾಗ ಅವರದೆನ್ನುವ ಒಂದು ಪುಟ್ಟ ಹಂಚಿನ ಮನೆಯನ್ನು ಹೊರತುಪಡಿಸಿ ಮತ್ತ್ಯಾವ ಆಸ್ತಿಯೂ ಅವರಿಗೆ ಇರಲಿಲ್ಲ, ಆದರೆ ಅವರ ಆದರ್ಶಗಳು ಇಂದಿಗೂ ಭಾರತೀಯ ರಾಜಕೀಯದಲ್ಲಿ ಚಿರಸ್ಥಾಯಿಯಾಗಿದೆ.

ಅವರು ಕೇವಲ ಪ್ರಬುದ್ಧ ರಾಜಕಾರಣಿ ಅಷ್ಟೇ ಅಲ್ಲದೆ ಸಾಹಿತ್ಯ ಕಲೆಗಳಲ್ಲೂ ಸಹ ಅಪಾರ ಆಸಕ್ತಿ ಪರಿಶ್ರಮ ಹೊಂದಿದ್ದರು ಪುಲೆ, ಅಂಬೇಡ್ಕರ್ ಪೆರಿಯಾರ್ ರವರ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಅವರು ಶಾಲಾ ಶಿಕ್ಷಣ ಕ್ರಮದಲ್ಲಿ ಅಮೂಲ್ಯ ಬದಲಾವಣೆಯನ್ನು ತಂದು ಬಿಹಾರದ ರಾಜಕೀಯಲ್ಲಿ ತಮ್ಮದೇ ಛಾಪು ಮೂಡಿಸಿದರು. ಶೇ.26  ಮೀಸಲಾತಿ ಅವರ ಕನಸಿನ ಕೂಸು. ಅವರ ಧ್ಯೇಯ ಹಿಂದುಳಿದ ವರ್ಗಗಳ, ಅಶಕ್ತರ ದುರ್ಬಲರ, ಸರ್ವಾಂಗೀಣ ಅಭಿವೃದ್ಧಿಯಾಗಿದ್ದರು, ಸಹ ಅವರು ಸರ್ವರ ಜನನಾಯಕರಾಗಿ ಹೊರಹೊಮ್ಮಿದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸ್ವತ, ಕರ್ಪೂರಿ ಠಾಕೂರ್ ರವರೆ “ಹಂಸೇ ವತನ್ ಕೋ ಜಗಾನೆ ಛಲ ಛೈ’ ಎಂಬ ಗೀತೆಯನ್ನು ರಚಿಸಿ ದೇಶಪ್ರೇಮವನ್ನು ಬಡಿದಬ್ಬಿಸಿದರು

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಸೇವೆಯಲ್ಲಿ ಮೀಸಲಾತಿ ಜಾರಿಗೆ ಕಟ್ಟಿಬದ್ಧರಾಗಿದ್ದ ಕರ್ಪೂರಿ, ಅವರು ತಾವು ಮುಖ್ಯಮಂತ್ರಿಯಾದ ಕೂಡಲೇ ಮುಂಗೇರಿ ಲಾಲ್ ವರದಿಯ ಜಾರಿಗೆ  ಕಾರ್ಯತತ್ಪರ ರಾದರು. ಆದರೆ ಅವರು ಸ್ವಪಕ್ಷೀಯರಿಂದಲೇ ಇದಕ್ಕೆ ವಿರೋಧವನ್ನು ಎದುರಿಸಬೇಕಾಯಿತು.  ಈ ನಿರ್ಧಾರದಲ್ಲಿ ಸರ್ಕಾರಿ ಸೇವೆಯಲ್ಲಿ ಅತಿ ಹಿಂದುಳಿದ ವರ್ಗಕ್ಕೆ ಶೇ. 12 ಹಿಂದುಳಿದ ವರ್ಗಕ್ಕೆ   ಶೇ.8ರಷ್ಟು  ಮಹಿಳೆಯರಿಗೆ ಶೇ.3ರಷ್ಟು ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ಶೇ.3ರಷ್ಟು ಮೀಸಲಾಗೆ ಯೋಜಿಸಲಾಗಿತ್ತು. ತುಳಿತಕ್ಕೊಳದಾದ ಸಮಾಜಗಳ ಪರವಾಗಿ ಸದಾ ತುಡಿಯುತ್ತಿದ್ದ ಕರ್ಪೂರಿ ಠಾಕೂರ್ ತಮ್ಮ ಇಡೀ ಜೀವನವನ್ನು ಅವರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು.

ಕರ್ಪೂರಿ ಠಾಕೂರ್ ರವರ ಜೀವನ ಮತ್ತು ರಾಜಕೀಯ ಪ್ರಯಾಣವನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಬಹುದು. ಮೊದಲನೆಯದು ಸಮಾಜವಾದಿ ಸಿದ್ಧಾಂತಕ್ಕೆ ಅವರ ಒಡ್ಡುವಿಕೆ. ಎರಡನೆಯದಾಗಿ ಅವರು ಸಮುದಾಯಗಳಾದ್ಯಂತ ಬೆಂಬಲವನ್ನು ಪಡೆದು ಸಾಮಾಜಿಕ ನಾಯಕರಾಗಿ ಹೊರಹೊಮ್ಮನ ಬಗ್ಗೆ.. ಅವರ ಸ್ವೀಕಾರ, ಮೂರನೆಯದಾಗಿ ಬಿಹಾರ ರಾಜ್ಯಕ್ಕೆ ಅವರ ಕೊಡುಗೆ ಹಾಗೂ ನಾಲ್ಕನೆಯದಾಗಿ ಅತ್ಯಂತ ಹಿಂದುಳಿದ ಜಾತಿಗಳ ಮೋಸ್ಟ್ ಬ್ಯಾಕ್ವರ್ಡ್ ಕ್ಯಾಸ್ಟ್ (ಎಂ ಬಿ ಸಿ) ಆತ್ಮಸಾಕ್ಷಿಗೆ ಮನವಿ ಮಾಡುವಲ್ಲಿ ಹೋರಾಟಕ್ಕೆ ಅವರ ಕೊಡುಗೆ.

ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಅವರ ಯಶಸ್ವಿ ಪ್ರಯತ್ನಗಳ ಜೊತೆ ಜೊತೆಗೆ ಶಾಸಕಾಂಗ ದಲ್ಲಿ ಅವರ ಮನಸ್ಥಿತಿ ಪ್ರಭಾವಶಾಲಿಯಾಗಿದೆ. ಅವರ ಶಾಸಕಾಂಗ ಮಧ್ಯಸ್ಥಿಕೆಗಳ ಮತ್ತು ಚರ್ಚೆಗಳ ಎರಡು ಬೃಹತ್ ಸಂಪುಟಗಳನ್ನು ಪ್ರಕಟಿಸಲಾಗಿದ್ದು ಇದೊಂದು ಅಪರೂಪದ ಸಾಧನೆ ಎನ್ನಬಹುದು. ವಿರೋಧ ಪಕ್ಷದ ನಾಯಕನಾಗಿ ಅವರ ಪಾತ್ರವನ್ನು ಈ ಸಂಪುಟಗಳಲ್ಲಿ ದಾಖಲಿಸಲಾಗಿದೆ ಹಾಗೂ ವಿಶ್ಲೇಷಿಸಲಾಗಿದೆ. ಸದನಗಳಲ್ಲಿ ಹಾಜರಾತಿ ಕರುಣಾಜನಕವಾಗಿ ಹಿಂದುಳಿದಿರುವ ಪ್ರಸಕ್ತ ಕಾಲಮಾನದಲ್ಲಿ  ಇದು ಬೋಧಪ್ರಧವಾಗಬೇಕು.

ಇಂಗ್ಲೀಷ್ ಕಡ್ಡಾಯ ರದ್ದತಿಯ ಕರ್ಪೂರಿ, ವಿಚಾರ ಬಹಳಷ್ಟು ವಿವಾದಗಳಿಗೆ ವಿರೋಧಕ್ಕೆ ಕಾರಣವಾದರೂ ವಂಚಿತ ವಿಭಾಗಗಳು ಮೇಲಕ್ಕೆ ಚಲಿಸಲು ಅನುವು ದೊರೆಯಿತು ಎಂಬುದು ಸತ್ಯ 1970 -71 ರಲ್ಲಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅವರು ತಮ್ಮ ಸಂಕ್ಷಿಪ್ತ ಅಧಿಕಾರ ಅವಧಿಯಲ್ಲಿ ಕಡಿಮೆ ಫಲವತ್ತಾದ ಉಳುಮೆ ಮಾಡದ ಜಮೀನುಗಳ ಮೇಲಿನ ಆದಾಯವನ್ನು ಕಡಿತಗೊಳಿಸುವಂತಹ ಕೆಲವು ಮಹತ್ವದ ಕ್ರಮಗಳನ್ನು ಕೈಗೊಂಡರು. ದುರ್ಬಲ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಅವರ ಮೀಸಲಾತಿ ನಿರ್ಧಾರವನ್ನು ಕರ್ಪೂರಿ ಫಾರ್ಮಲಾ ಎಂದೇ ಕರೆಯಲಾಯಿತು.

ಅಷ್ಟೇ ಅಲ್ಲದೆ ಗ್ರಾಮೀಣ ಅಧಿಕಾರ ರಚನೆಯಲ್ಲಿ ಮೇಲ್ಜಾತಿ ಪ್ರಾಬಲ್ಯವನ್ನು ಪುನರ್ಚಿಸಲು 1978ರಲ್ಲಿ ಪಂಚಾಯತ್ ರಾಜ್ ಚುನಾವಣೆಗಳನ್ನು ನಡೆಸಿದರು ‌ಠಾಕೂರ್ ಅವರ ಕ್ರಾಂತಿಕಾರಿ ನಿರ್ಧಾರಗಳ ವಿರುದ್ಧ ಅವರ ರಾಜಕೀಯ ವಿರೋಧಿಗಳು ಪಿತೂರಿಗಳನ್ನು ನಡೆಸಿದರು. 1979ರಲ್ಲಿ ಜಂಶೆಡ್ ಪುರದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಲಾಯಿತು. ಅವರು ಅಧಿಕಾರ ತ್ಯಜಿಸುವ ಕೆಲ ದಿನಗಳ ಮೊದಲು ನ್ಯಾಯಮೂರ್ತಿ ಜಿತೇಂದ್ರನಾರಾಯಣ್ ನೇತೃತ್ವದಲ್ಲಿ ಮೂರು ಸದಸ್ಯರ ವಿಚಾರಣಾ ಆಯೋಗವನ್ನು ನೇಮಿಸಿದ ಸರಳ ಸಂತ ಕರ್ಪೂರಿ ಠಾಕೂರ್.

ಇಂಗ್ಲೀಷ್ ಕಡ್ಡಾಯ ರದ್ದತಿಯ  ವಿಚಾರ ಬಹಳಷ್ಟು ವಿವಾದಗಳಿಗೆ, ವಿರೋಧಕ್ಕೆ ಕಾರಣವಾದರೂ ವಂಚಿತ ವಿಭಾಗಗಳು ಮೇಲಕ್ಕೆ ಚಲಿಸಲು ಅನುವು ದೊರೆಯಿತು ಎಂಬುದು ಸತ್ಯ 1970- 71ರಲ್ಲಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅವರು ತಮ್ಮ ಸಂಕ್ಷಿಪ್ತ ಅಧಿಕಾರ ಅವಧಿಯಲ್ಲಿ ಕಡಿಮೆ ಫಲವತ್ತಾದ ಉಳುಮೆ ಮಾಡದ ಜಮೀನುಗಳ ಮೇಲಿನ ಆದಾಯವನ್ನು ಕಡಿತಗೊಳಿಸುವಂತಹ ಕೆಲವು ಮಹತ್ವದ ಕ್ರಮಗಳನ್ನು ಕೈಗೊಂಡರು.  ಕರ್ಪೂರಿ ಠಾಕೂರ್ ಅವರ ನಿರಂತರವಾದ ಕಾಂಗ್ರೆಸ್ ವಿರೋಧಿತ್ವ, ಹಿಂದುಳಿದ ಜಾತಿಗಳ ಸಬಲೀಕರಣ ಮತ್ತು ಪ್ರೌಢಶಾಲಾ ಪರೀಕ್ಷೆಗಳಲ್ಲಿ ಇಂಗ್ಲೀಷನ್ನು ಕಡ್ಡಾಯ ಭಾಷೆಯಾಗಿ ವೃದ್ಧಿಗೊಳಿಸುವುದು.

ಆ ಮೂಲಕ ಹಿಂದಿ ಮಾತನಾಡುವ ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಚಲನಶೀಲವಾಗಲು ಅನುವು ಮಾಡಿಕೊಟ್ಟ ವಿಷಯ ಈ ಸಕ್ರಿಯಗೊಳಿಸುವ ಕ್ರಿಯೆಗಳನ್ನು ಕರ್ಪೂರಿ ವಿಭಾಗ ಎಂದೇ ಕರೆಯಲಾಯಿತು. ಸಮಾಜವಾದಿ ನಂಬಿಕೆಯ ನಾಯಕರಾಗಿದ್ದರೂ ಸಹ ಭಾರತೀಯ ಜನಸಂಘ ದಂತಹ ಸೈದ್ಧಾಂತಿಕ ಪ್ರತಿಸ್ಪರ್ಧಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಅವರ ವಾಸ್ತವಿಕತೆ ,ಧಾರ್ಮಿಕ ಭಾಷಾ ಅಲ್ಪಸಂಖ್ಯಾತರನ್ನು ಸಬಲೀಕರಣ ಗೊಳಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಂಡಿತು.

ಅವರ ಸಂಪುಟದಲ್ಲಿ 1977 – 79ರವರೆಗೆ ಶಿಕ್ಷಣ ಮತ್ತು ಆರೋಗ್ಯದಂತಹ ಪ್ರಮುಖ ಖಾತೆಗಳನ್ನು ಮುಸ್ಲಿಮರು ಹೊಂದಿದ್ದರು. ಗುಲಾಂ ಸರ್ವರ್ 1926 ರಿಂದ 2014 ಪ್ರೊಫೆಸರ್ ಜಬಿನ್ ಹುಸೇನ್ ರವರು ಸಹ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದಿದ್ದರು ಅಷ್ಟೇ ಅಲ್ಲದೆ, ಅವರ ದೂರದೃಷ್ಟಿತ್ವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅವಕಾಶ ಬೆಂಬಲ ನೀಡಲಾಯಿತು. ಸರ್ಕಾರಿ ಶಾಲೆಗಳಲ್ಲಿ‌‌ ಕಛೇರಿಗಳಲ್ಲಿ  ಉರ್ದು ಭಾಷೆಗೆ ಹೆಚ್ಚಿನ ಮಹತ್ವ ನೀಡಲಾಯಿತು. ಎರಡನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ  ಸಂಖ್ಯಾತ್ಮಕ ಪ್ರಾಧಾನ್ಯತೆ ಜಾತಿಗೆ ಸೇರದಿದ್ದರೂ ರಾಜಕೀಯ ಮತ್ತು ಶಿಕ್ಷಣದಲ್ಲಿ ಮೇಲ್ಜಾತಿ ಪ್ರಾಬಲ್ಯಕ್ಕೆ ಪ್ರಬಲ ಸವಾಲು ಹಾಕಿದವರು ಕರ್ಪೂರಿ ಠಾಕೂರ್.

ಕರ್ಪೂರಿ ಅವರ ಜೀವನವನ್ನು ಮೂರು ಹಂತಗಳಲ್ಲಿ ಅವಲೋಕಿಸಬಹುದು. ಸ್ವಾತಂತ್ರ್ಯ ಹೋರಾಟಗಾರರಾಗಿ, ಸಾಮಾಜಿಕ ನ್ಯಾಯದ ಹರಿಕಾರರಾಗಿ ಹಾಗೂ ಮುಖ್ಯಮಂತ್ರಿಯಾಗಿ. ಕರ್ಪೂರಿ ಯವರನ್ನು ಜಾತಿ ರಾಜಕೀಯದ ವಿಶೇಷವಾಗಿ ಹಿಂದುಳಿದ ವರ್ಗಗಳ ಜಾತಿ ರಾಜಕೀಯದ ಪಿತಾಮಹ ಎನ್ನಲಾಗಿದೆ. ಅವರು ಲಾಲು ಯಾದವ್, ರಾಮ್ ವಿಲಾಸ್ ಪಾಸ್ವಾನ್, ನಿತೀಶ್ ಕುಮಾರ್ ಮುಂತಾದವರ ಸೈದ್ಧಾಂತಿಕ ಗುರುವಾಗಿದ್ದರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಸಮಾಜದ ಹಿಂದುಳಿದ ವರ್ಗ, ಜಾತಿಗಳಿಗೆ ಮೀಸಲಾತಿಯ ಅಗತ್ಯವನ್ನು ವಿಶ್ಲೇಷಿಸಲು ಮುಂಗೇರಿ ಲಾಲ್ ಆಯೋಗವನ್ನು ಸ್ಥಾಪಿಸಿದರು.

ಅನೇಕ ಕಾರಣಗಳಿಂದಾಗಿ ಆಯೋಗ ವರದಿಯನ್ನು ಜಾರಿಗೆ ತರಲು ಸಾಧ್ಯವಾಗದಿದ್ದರೂ ಇದು ಬಿಹಾರದಲ್ಲಿ ಮೂಲಭೂತ ಸಮಾಜವಾದ ಮತ್ತು ಜಾತೀಯ ರಾಜಕಾರಣದ ಪ್ರವೃತ್ತಿಯನ್ನು ಸ್ಥಾಪಿಸಿತು. ನಂತರ ರಾಜ್ಯವು ಬಿಹಾರ ಚಳುವಳಿ ಎಂದು ಕರೆಯಲ್ಪಡುವ ಕೇಂದ್ರ ಬಿಂದುವಾಯಿತು‌ .ಇದರಲ್ಲಿ ಜೆಪಿ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದರು.

ಈ ಕ್ರಾಂತಿಯು ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಯಿತು‌ ಮತ್ತು ನಂತರ 1977ರಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಇಂದಿರಾಗಾಂಧಿ ಸರ್ಕಾರವನ್ನು ಹೊರ ಹಾಕಲಾಯಿತು. ಇಷ್ಟೆಲ್ಲದರ ನಡುವೆ ಕರ್ಪೂರಿ ಠಾಕೂರ್ ರವರ ರಾಜಕೀಯ ನೀತಿ, ತೀರ್ಮಾನಗಳ ಬಗ್ಗೆ  ವಿರೋಧ ಬಂದಿತ್ತಾದರೂ, ಸಮ ಸಮಾಜ ನಿರ್ಮಾಣದ ಅವರ ಕನಸಿಗೆ ಪುಷ್ಟಿ ದೊರೆಯಿತು ಎಂಬುದು ನಿರ್ವಿವಾದ ಸಂಗತಿ. ಇನ್ನಾದರೂ ಶೋಷಿತ ವರ್ಗಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಮೀಸಲಾತಿ, ಸವಲತ್ತುಗಳು ದೊರೆಯಲಿ. ಹಿಂದುಳಿದ ವರ್ಗಗಳು ಅದರಲ್ಲೂ ಅತಿ ಹಿಂದುಳಿದ ವರ್ಗಗಳು, ಕಾಯಕ ಸಮಾಜ, ಸಂಘಟಿತರಾಗಲಿ, ಗೌರವದ ಬದುಕು ಬದುಕುವಂತಾಗಲಿ ಎಂಬ ಕರ್ಪೂರಿ ಠಾಕೂರ್ ರವರ ಆಶಯ ಈಡೇರಲಿ.

ಕರ್ಪೂರಿ ಠಾಕೂರ್ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2023-24ರ ಭಾರತ ರತ್ನವನ್ನು ಅವರಿಗೆ ನೀಡಿ ಗೌರವಿಸಿರುವುದು ಅವರಿಗೆ ನೀಡಿದ ಗೌರವವಾಗಿದೆ.

ಮೈ.ನಾ.ಲೋಕೇಶ್ ಅವರು ಬರೆದಿರುವ ಇನ್ನಿತರ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

 

admin
the authoradmin

Leave a Reply

Translate to any language you want