ಬಸವಣ್ಣ ಜಗತ್ತಿನ ಮಹಾ ಮಾನವತಾ ವಾದಿ … ಮಹಾ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಕಲ್ಮಳ್ಳಿ ನಟರಾಜು ಅಭಿಪ್ರಾಯ

ನಂಜನಗೂಡು: 12ನೆಯ ಶತಮಾನದಲ್ಲಿಯೇ ವೈದಿಕ ಸಂಸ್ಕೃತಿ ಯ ಮೂಲ ಮಂತ್ರವಾಗಿದ್ದ ವರ್ಣಶ್ರಮ ಪ್ರೇರಿತ ಜಾತಿ ಧರ್ಮ ವರ್ಗ ವರ್ಣ ಲಿಂಗ ಅಸಮಾನತೆ ತೊಡೆದು ಹಾಕಲು ಪ್ರಭುತ್ವ ವನ್ನೇ ಧಿಕ್ಕರಿಸಿ ನಿಂತ ಮನುಕುಲದ ಮಹಾ ಮಾನವತವಾದಿ ಬಸವಣ್ಣ ಎಂದರೆ ಅತಿಶಯೋಕ್ತಿ ಆಗಲಾರದು ಎಂದು ಮಹಾ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಕಲ್ಮಳ್ಳಿ ನಟರಾಜು ಹೇಳಿದರು.
ಶುಕ್ರವಾರ ಸಂಜೆ ನಂಜನಗೂಡಿ ನ ವಿದ್ಯಾ ನಗರದ ಅನುಭವ ಮಂಟಪ ಸಭಾಂಗಣದಲ್ಲಿ ವಿದ್ಯಾನಗರದ ಸಮೃದ್ಧಿ ಸಮಾನ ಮನಸ್ಕ ಗೆಳೆಯರ ಬಳಗದ ಮೊದಲ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಧರ್ಮಗಳ ಸಾರವೂ ದಯೆ ಪ್ರೀತಿ ಕರುಣೆ ಎನ್ನುವುದು ಕೇವಲ ಮನುಷ್ಯ ರಿಗೆ ಅಷ್ಟೇ ಅಲ್ಲ ಸೃಷ್ಟಿಯ ಸಕಲ ಜೀವ ರಾಶಿಗಳು ಮನುಷ್ಯ ಅಗೆಯೇ ಜೀವಿಸುವ ಪ್ರಾಣಿಗಳು ದಯವಿಲ್ಲದ ಧರ್ಮ ಅದಾವುದಯ್ಯ ದಯೆ ಇರಬೇಕು ಸಕಲ ಜೀವ ರಾಶಿಗಳಲ್ಲಿ ದಯವೇ ಧರ್ಮದ ಮೂಲ ಎನ್ನುವ ವಚನ ಅವರ ಜೀವ ಪರ ಕಾಳಜಿಯನ್ನು ಬಿಂಬಿಸುತ್ತದೆ ಅವರ ವ್ಯಕ್ತಿತ್ವಕ್ಕೆ ಮನ ಸೋತ ಅನೇಕರು ದೇಶ ವಿದೇಶಗಳಿಂದ ಕಲ್ಯಾಣ ಕ್ಕೆ ಬಂದು ತಮ್ಮೆಲ್ಲ ಜಾತಿ ಧರ್ಮ ಸಂಪ್ರದಾಯ ತೊರೆದು ಆತ್ಮ ಪರಿವರ್ತನೆ ಹೊಂದಿ ರಚಿಸಿರುವ ನೂರಾರು ವಚನೆಗಳೇ ಸಾಕ್ಷಿ ಇದಕ್ಕಿಂತ ಬೇರೊಂದು ಉದಾಹರಣೆ ಬೇಕಿಲ್ಲ ಎಂದರು

ಎಲ್ಲ ಕಾಲ ಘಟ್ಟದಲ್ಲೂ ಇರುವಂತೆ ಅಂದು ಬಸವಣ್ಣನವರ ಸಾಮಾಜಿಕ ಪರಿವರ್ತನೆ ಸಹಿಸದ ಕುಹಕಿಗಳು ಅವರ ಮೇಲೆ ಹೊರಿಸಿದ ಆರೋಪಗಳು ನೀಡಿದ ಯಾವ ತೊಂದರೆಗಳು ಅವರನ್ನು ವಿಚಲಿತಗೊಳಿಸಲು ಸಾಧ್ಯವಾಗದೆ ಇಂದಿಗೂ ಮತೀಯ ಹೀನ ಮನಸ್ಸುಗಳಿಗೆ ಬಸವಣ್ಣನ ವಿಚಾರ ಧಾರೆ ಕಹಿಯಾಗಿರುವ ಕಾರಣ ಅವರನ್ನು ತಮ್ಮ ಕಾಮಾಲೆ ಪೀಡಿತ ಕಣ್ಣುಗಳಿಂದ ನೋಡುವ ಪ್ರವೃತ್ತಿ ಆಗಾಗ್ಗೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವುದಕ್ಕೆ ಕಳೆದೆರಡು ದಿನಗಳ ಘಟನೆ ಸಾಕ್ಷಿಯಾಗಿದೆ.
ಯಾರು ಏನೇ ಪ್ರಯತ್ನ ನಡೆಸಿದರೂ ಸತ್ಯವನ್ನು ಎಂದಿಗೂ ಯಾರಿಂದಲೂ ಮರೆ ಮಾಚಲು ಸಾಧ್ಯವಿಲ್ಲ ಎನ್ನುವುದಕ್ಕೆ ಬಸವಣ್ಣ ಮತ್ತು ಸಮಕಾಲಿನ ಶರಣ ಶರಣೆಯರು ವಚನಗಳನ್ನು ನಾಶ ಮಾಡಲು ಯತ್ನಿಸಿದರು ಅವುಗಳ ರಕ್ಷಣೆಗಾಗಿ ಹೋರಾಡಿ ಮಾಡಿದ ಶರಣರು ಬಿಟ್ಟು ಹೋಗಿರುವ ವಚನಗಳನ್ನಪೂರ್ವಾಗ್ರಹ ವಿಲ್ಲದೆ ಮುಕ್ತ ಮನಸ್ಸಿನಿಂದ ಓದಿದರೆ ಖಂಡಿತ ಇದು ಜಾತಿ ಲಿಂಗ ವರ್ಣಗಳ ಚೌಕಟ್ಟಿಗೆ ಸೀಮಿತವಾಗಿರದೆ ಸರ್ವರ ಒಳಿತನ್ನು ಸಾರುವ ನಿಜಾರ್ಥದ ಮನುಷ್ಯ ಧರ್ಮ ಎಂದರು.
ಎಲ್ಲಿ ಮನುಷ್ಯತ್ವಇದೆ ಅಲ್ಲೆಲ್ಲ ದೇಶ ಭಾಷೆ ಜಾತಿ ಗಳ ಪರಿಮಿತಿ ಇಲ್ಲದೆ ಬಸವಣ್ಣನ ಎಂದೆಂದಿಗೂ ಪ್ರಸ್ತುತ ನಾಗುತ್ತಾನೆ ಅದು ವಿಶ್ವ ಧರ್ಮ ಎನಿಸಿ ಕೊಳ್ಳುತ್ತದೆ ಬಸವಣ್ಣನ ಚಿಂತನೆ ಕೇವಲ ಸ್ಮರಣೆ ಗೆ ಸೀಮಿತವಾಗದಗುಡಿ ಗುಂಡಾರಗಳಲ್ಲಿ ಜಪ ತಪ ಮಂತ್ರಗಳ ಮೂಲಕ ದೇವರನ್ನು ಹುಡುಕದೆ ಸತ್ಯ ಶುದ್ಧ ಕಾಯಕ ಮಾಡಿದಾಗ ಮಾತ್ರ ಮನುಷ್ಯನೆ ದೇವರಾಗುತ್ತಾನೆ ಎನ್ನುದನ್ನು ಇಷ್ಟ ಲಿಂಗವನ್ನು ನೀಡಿ ಪ್ರತಿಯೊಂದು ಜೀವಿಯಲ್ಲೂ ದೇವರನ್ನು ಕಂಡ ಕಾಯಕವೇ ಕೈಲಾಸ ಎನ್ನುವ ಬೀಜ ಮಂತ್ರ ಕೊಟ್ಟ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದೇ ದೇವರಿಗೆ ಸಲ್ಲಿಸುವ ನಿಜವಾದ ಪೂಜೆ
ಈ ಸಮೃದ್ಧಿ ಸಂಘಟನೆ ಕೇವಲ ಆರ್ಥಿಕವಾಗಿ ಅಷ್ಟ್ಟೇ ಅಲ್ಲದೆ ಸರ್ವ ರೀತಿಯಲ್ಲಿ ಇತರೆ ಸಂಘಟನೆಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಉಪಯುಕ್ತ ಸಮಾಜ ಮುಖಿ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿ ಎಂದು ಹಾರೈಸಿದರು
ಕಾರ್ಯಕ್ರಮದಲ್ಲಿ ಸಮೃದ್ಧಿ ಗೆಳೆಯರ ಬಳಗದ ಅಧ್ಯಕ್ಷರಾದ ಮಹೇಶ್, ಕಾರ್ಯದರ್ಶಿ ಮನೀಶ್ ಖಜಾಂಚಿ ಪ್ರಕಾಶ್, ಚಾಮರಾಜನಗರ ದ ವಿಶ್ವ ವಿದ್ಯಾನಿಲಯದ ಡೀನ್ ಡಾ.ಕೆ ಸಿ ಬಸವಣ್ಣ, ಶಿಕ್ಷಕರಾದ ವಿನೋದ್, ಮಹೇಶ್, ಪ್ರಾಣೇಶ್, ವೀರ ಭದ್ರ ಸ್ವಾಮಿ, ವಿಶ್ವ ಬಸವ ಸೇನೆ ಯ ಪದಾಧಿಕಾರಿಗಳಾದ ಮಹೇಶ್ ಕಲ್ಪುರ, ಅಶೋಕ್ ಮುದ್ದ ಹಳ್ಳಿ, ಶ್ರೀಮತಿ ಚಿನ್ನಮ್ಮ, ವೀರಭದ್ರಸ್ವಾಮಿ, ಕೆರೆ ಹುಂಡಿ ನಂಜುಂಡ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು







