ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸುವಲ್ಲಿ ಡಿ.ದೇವರಾಜ ಅರಸು ಕೊಡುಗೆ ಅಪಾರ ಎಂದು ತಹಶೀಲ್ದಾರ್ ಮಂಜುನಾಥ್ ಹೇಳಿದರು.
ನಗರದ ಹೊರ ವಲಯದಲ್ಲಿನ ದೇವರಾಜ ಅರಸು ಜಯಂತಿ ಕಾರ್ಯಕ್ರಮದ ಅಂಗವಾಗಿ ಗಣ್ಯರು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ರಾಜ್ಯದಲ್ಲಿ ಹೊಸತನ ತಂದುಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ಆಡಳಿತದಲ್ಲಿ ಹಿಂದುಳಿದ ವರ್ಗಕ್ಕೆ ವಿಶೇಷ ಕಾಳಜಿ ನೀಡಿ ಹಾವನೂರು ವರದಿ ಆಧರಿಸಿ ಧ್ವನಿ ಇಲ್ಲದ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮೊದಲಿಗರಾಗಿದ್ದರು ಎಂದರು.
ರಾಜ್ಯದಲ್ಲಿ ಸಂಚಲನ ಮೂಡಿಸಿದ ಉಳುವವನೆ ಭೂಮಿ ಒಡೆಯ ಕ್ರಾಂತಿಕಾರಿ ಕಾರ್ಯಕ್ರಮ ಜಾರಿಗೊಳಿಸಿ ದೇಶದ ಗಮನ ಸೆಳೆದ ಮುಖ್ಯಮಂತ್ರಿ. 1974ರಲ್ಲಿ ಭೂ ಸುಧಾರಣೆ ಕಾಯ್ದೆ ಸಂಬಂಧಿಸಿದಂತೆ ಗೇಣಿದಾರಿಕೆ ಪದ್ಧತಿಯನ್ನು ರದ್ದುಗೊಳಿಸಿ ದುಡಿಯುವ
ಬಡವರ ಕೈಗೆ ಭೂಮಿ ಮಾಲಿಕತ್ಮ ನೀಡಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಭೂಮಿ ಹಕ್ಕು ನೀಡಿದರು. 1978ರ ಭೂ ಸುಧಾರಣೆ ಕಾಯ್ದೆ ಅಡಿಯಲ್ಲಿ ಭೂಮಿ ಮಾಲೀಕರಾದವರ ಕೈ ಬಲಪಡಿಸುವಲ್ಲಿ ಭೂನ್ಯಾಯ ಮಂಡಳಿ ಸ್ಥಾಪಿಸಿ ಬಡವರಿಗೆ ಭೂಮಿ ಹಕ್ಕು ಪತ್ರ ವಿತರಿಸುವಲ್ಲಿ ಮೊದಲಿಗರಾದರು. ರಾಜ್ಯದಲ್ಲಿ ಹಿಂದುಳಿದ ವರ್ಗದವರ ಅಭಿವೃದ್ಧಿಗೆ ದೇವರಾಜ ಅರಸು ಹೆಸರಿನಲ್ಲಿ ಕಲ್ಯಾಣ ಇಲಾಖೆ ಆರಂಭಿಸಿ ಹಲವು ಸೇವೆಗಳನ್ನು ಸರ್ಕಾರ ನೀಡುತ್ತಿದೆ ಎಂದರು.
ನಗರಸಭೆ ಆಯುಕ್ತೆ ಮಾನಸ ಮಾತನಾಡಿ, ಕರ್ನಾಟಕ ರಾಜ್ಯದ ಹರಿಕಾರರಾಗಿ ಇಂದಿರಾಗಾಂಧಿ ಅವರು ಜಾರಿಗೊಳಿಸಿದ 20 ಅಂಶ ಕಾರ್ಯಕ್ರಮ-ವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ. ಇವರ ಅವಧಿಯಲ್ಲಿ ಹತ್ತು ಹಲವು ಅಭಿವೃದ್ಧಿ ಕಂಡು ಮೈಸೂರು ನಾಡನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ರಾಷ್ಟ್ರಕ್ಕೆ ತಮ್ಮ ಸಮಾನತೆ ಆಡಳಿತ ಜಾರಿಗೊಳಿಸಿ ಮಾದ-ರಿಯಾಗಿದ್ದರು ಎಂದು ತಿಳಿಸಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ದೇವರಾಜ ಅರಸು ಅವರ ಶತಮಾನೋತ್ಸವ ಕಾರ್ಯಕ್ರಮದ ಸಮಯದಲ್ಲಿ ಸರ್ಕಾರದ ಅನುದಾನದಲ್ಲಿ ಅರಸು ಹುಟ್ಟೂರು ಕಲ್ಲಹಳ್ಳಿ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರಾದರೂ, ಸಮರ್ಪಕವಾಗಿ ಲ್ಲ. ಅರಸು ಅವರ ಮನೆ ಸಂಪೂರ್ಣ ಶಿಥಿಲವಾಗಿದ್ದು, ಜೀರ್ಣೋದ್ಧಾರಗೊಳಿ-ಸಿ ಸಾರ್ವಜನಿಕರ ಆಸ್ತಿಯನ್ನಾಗಿಸಿ ವಸ್ತು ಸಂಗ್ರಹವನ್ನಾಗಿ ಮಾಡಬೇಕು ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಆದಿಜಾಂಬ ಸಮುದಾಯದ ಕಾರ್ಯದರ್ಶಿ ಡಿ.ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ರೈತ ಸಂಘದ ಸದಸ್ಯರು ಭಾಗವಹಿಸಿದ್ದರು.








