Latest

ಇಂದಿನ (25-08-2026 ಮಂಗಳವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಸಂವತ್ಸರ: ಶ್ರೀ ಪರಾಭವ ನಾಮ ಅಯನ: ದಕ್ಷಿಣಾಯಣ ಋತು: ವರ್ಷ ಮಾಸ: ಶ್ರಾವಣ  ಪಕ್ಷ: ಶುಕ್ಲ ಸೂರ್ಯೋದಯ: 6:04 AM ಸೂರ್ಯಾಸ್ತ: 6:31 PM ತಿಥಿ: ತ್ರಯೋದಶಿ  ನಕ್ಷತ್ರ: ಉತ್ತರಾಷಾಢ ಯೋಗ: ಆಯುಷ್ಮಾನ್  ಕರಣ: ಕೌಲವ  ಅಮೃತ ಕಾಲ: 3:48 – 5:33  ರಾಹು ಕಾಲ: 3:24- 4:58 ಯಮಗಂಡ: 9:11-10:44 ಗುಳಿಕ ಕಾಲ:12:18-1:51

ಇಂದಿನ ದ್ವಾದಶ ರಾಶಿಗಳ ಫಲಾಫಲಗಳು

ಮೇಷ

ಅತಿಯಾದ ಪ್ರಶಂಸೆಯಿಂದ ನಿಮಗೆ ಮುಜುಗರವಾಗುವುದು. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದಲೂ ಸೋಲುವರು. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ.‌ ಪ್ರೀತಿಯಲ್ಲಿ ನಿಮಗೆ ಬಯಸಿದ್ದು ಸಿಗದೇಹೋಗಬಹುದು. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ.

ವೃಷಭ

ಇಂದು ಕಾಯುತ್ತಿರುವ ನಿಮಗೆ ಒಳ್ಳೆಯ ವಾರ್ತೆ ಸಿಗಬಹುದು. ನಿಮ್ಮ ವೈಯಕ್ತಿಕ ಯೋಜನೆಗಳಿಗೆ ಯಾರೂ ಅಡ್ಡಿ ಮಾಡಲಾರರು. ಲಾಭ‌ವನ್ನು ಪಡೆಯಲು ಹೊಸ ಮಾರ್ಗಗಳು ಗೊತ್ತಾಗಬಹುದು. ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು. ಸೋಲಿನ ಯೋಚನೆ ಇಲ್ಲದೇ ನಿರಾತಂಕದಿಂದ ಇರುವಿರಿ. ಫಲಾಪೇಕ್ಷೆ ಇಲ್ಲದೇ ನಿಮಗೆ ಕಾರ್ಯವನ್ನು ಮಾಡಲುಬಾರದು. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ.

ಮಿಥುನ

ಅವಿವಾಹಿತರ ನಿರೀಕ್ಷೆ ಅಧಿಕವಾಗಿರುವುದು. ಬಹಳ ದಿನಗಳ ಅನಂತರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು. ನೀವು ಯಶಸ್ಸನ್ನು ಸಾಧಿಸಲು ಹಂಬಲಿಸುವಿರಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿ ಇತರರಿಂದ ದೂರಾಗಬಹುದು. ಬೇಕಾದಷ್ಟನ್ನು ಪಡೆದರೆ ಕೊಟ್ಟವರಿಗೂ ಪಡೆದವರಿಗೂ ಒಳ್ಳೆಯದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.

ಕರ್ಕಾಟಕ

ಇಂದು ಹಣವು ನಿಮ್ಮ ತುರ್ತು ಅವಶ್ಯಕತೆಯಾದ ಕಾರಣ ಅದನ್ನು ಗಳಿಸುವ ವಿಧಾನವನ್ನು ಯೋಚಿಸುವಿರಿ. ಇಂದಿನ‌ ನಿಮ್ಮ ಅಭಿಪ್ರಾಯವನ್ನು ಕುಟುಂಬ ಗೌರವಿಸುವುದು. ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತನ್ನು ಮಿತವಾಗಿ ಆಡಿ. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು.

ಸಿಂಹ

ನಿಮಗೆ ನೀವೇ ಉತ್ತೇಜನವನ್ನು ಕೊಟ್ಟುಕೊಳ್ಳಬೇಕಾಗುವುದು. ಇನ್ನೊಬ್ಬರಿಗೆ ಸಾಲವಾಗಿ ನೀಡಿದ ಹಣವನ್ನು ಸ್ವೀಕರಿಸಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ. ಅತಿಯಾದ ವಿಶ್ವಾಸವು ನಿಮಗೆ ಹಿನ್ನಡೆಯನ್ನು ತಂದೀತು. ನೀವಂದುಕೊಂಡಂತೆ ಇಂದಿನ‌ ಕೆಲಸವು ಸಾಗದು. ಬೇಡವೆನಿಸಿದ್ದನ್ನು ಒತ್ತಾಯಪೂರ್ವಕ ಪಡೆಯುವುದು ಬೇಡ. ಇಂದು ಸ್ವಲ್ಪ ಆಲಸ್ಯವೂ ಇರಬಹುದು. ಆರೋಗ್ಯವನ್ನು ದೈವಾನುಗ್ರಹದಿಂದಲೂ ಸರಿಮಾಡಿಕೊಳ್ಳಬಹುದು‌.

ಕನ್ಯಾ

ನಿಮಗೆ ಹಿರಿಯರಿಂದ ಪ್ರಶಂಸೆ ಸಿಗುವುದು. ಹಿರಿಯರ ಜೊತೆ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಯಾವುದನ್ನೂ ಗೊತ್ತಿಲ್ಲ ಎಂದು ಹೇಳುವುದನ್ನು ಬಿಡಬೇಕು. ಆರ್ಥಿಕ‌ ವ್ಯವಹಾರಗಳನ್ನು ಇಂದು ಸರಿಯಾಗಿ‌ ತಿಳಿದುಕೊಳ್ಳುವಿರಿ. ಅಶ್ಲೀಷಪದಗಳನ್ನು ಬಳಸಿ ಹಿರಿಯರಿಂದ ನಿಂದನೆಯಾಗಲಿದೆ. ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುವುದು ಉಚಿತ. ಆಪ್ತರ ಜೊತೆ ಹರಟೆ ಹೊಡೆಯುವಿರಿ. ಸಾಹಿತ್ಯ ಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ.

ತುಲಾ

ಹರಿತವಾದ ಕತ್ತಿ ಇದೆ ಎಂದು ಮೂಗನ್ನು ಕತ್ತರಿಸಲಾಗದು. ಅದರ ಉಪಯೋಗವನ್ನು ತಿಳಿದಿಕೊಂಡು ಅದನ್ನು ಮಾಡಬೇಕು. ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ‌ ಇರುವವರು ಮನೆಗೆ ಹೋಗಲಿದ್ದಾರೆ. ಹಳೆಯ ಪದ್ಧತಿಗಳ ಅನುಷ್ಠಾನಕ್ಕೆ ಒತ್ತುಕೊಡುವಿರಿ. ಸಂಗಾತಿಯೂ ನಿಮ್ಮ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಏಕಾಂತವಾಗಿ ಒಂದು‌ಕಡೆ ಕುಳಿತು ಚಿಂತಾಮಗ್ನರಾಗುವಿರಿ. ದೂರದ ಊರಿಗೆ ಹೋಗಬೇಕಾಗುವುದು.

ವೃಶ್ಚಿಕ

ಕ್ರೀಡೆಯಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಿಸುವಿರಿ. ಸ್ನೇಹಪರವಾಗಿ ಇದ್ದಷ್ಟು ನಿಮಗೆ ಅನುಕೂಲತೆಗಳು ಜಾಸ್ತಿ. ಇಂದು ನೀವು ಇನ್ನೊಬ್ಬರ ಶ್ರೇಯಸ್ಸಿಗೆ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕೆಲಸವು ನಿಮಗೆ ಪ್ರಿಯವಾದುದಾಗಿದೆ. ನಿಮ್ಮ ಮಾತು ತಪ್ಪಾಗಿ ಅರ್ಥವಾಗಬಹುದು. ಹೆಚ್ಚಿನ ದುಡಿಮೆಗೆ ಪ್ರತ್ನಿಸುವಿರಿ. ಅನ್ಯರನ್ನು ಅನುಸರಿಸಲು ನಿಮಗೆ ಇಷ್ಟವಾಗದು. ನಿಮ್ಮದೇ ಚಿಂತನೆಯನ್ನು ಬೆಳೆಸಿಕೊಳ್ಳಲು ಬಯಸುವಿರಿ. ನಿಮ್ಮದಲ್ಲದ ವಸ್ತುಗಳನ್ನು ಜೋಪಾನ ಮಾಡುವುದು ಅನಿವಾರ್ಯ.

ಧನು

ಎಲ್ಲವನ್ನೂ ಮರೆತು ಕುಳಿತುಕೊಳ್ಳಲು ಕಷ್ಟವಾಗುವುದು. ಇಂದು ನಿಮ್ಮ ಕೌಶಲದ ಬಗ್ಗೆ ಹಂಚಿಕೊಳ್ಳಿ. ನಿಮಗೆ ಮುಂದಿನ ಜೀವನೋಪಾಯಕ್ಕೆ ದಾರಿಯಾದೀತು. ಆರ್ಥಿಕವಾಗಿ ಸಬಲರಾಗುವ ಹಂಬಲವಿದ್ದರೂ ಆಲಸ್ಯದಿಂದ ಹೊರಬರದೇ ಇದು ಸಾಧ್ಯವಿಲ್ಲ. ಸ್ತ್ರೀಯರ ಕುರಿತ ನಿಮ್ಮ ಕಾಳಜಿ ಅತಿಯಾದೀತು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ.

ಮಕರ

ನೀವು ತೊಂದರೆಗೆ ಸಿಲುಕದಂತೆ ದಾಟಲು ನಿಮಗೆ ಯಾರಿಂದಲಾದರೂ ಸೂಚನೆ ಬರಬಹುದು. ಯಾವುದಾದರೂ ಜವಾಬ್ದಾರಿಯನ್ನು ಪಡೆದರೆ ಮುಂದಾಗುವ ಎಲ್ಲದೂ ನಿಮ್ಮ ಮೇಲೆ ಬರಬಲಿದೆ. ಆತ್ಮೀಯರಾದರೂ ಅವರ ಹಣಕಾಸಿನ ವಿಚಾರ ನಿಮಗೆ ಬೇಡದ್ದು. ಕಛೇರಿಯಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬೇಯಲಿದ್ದೀರಿ. ನಿರ್ಲಕ್ಷ್ಯದ‌ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಎಲ್ಲ ಸುದ್ದಿಗಳನ್ನೂ ಕೇಳುವ ಮನಃಸ್ಥಿತಿಯನ್ನು ಬಿಡಿಬೇಕಾದೀತು.

ಕುಂಭ

ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಸಾಲವು ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು. ಇಂದು ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವಿರಿ. ನಿಮ್ಮದೇ ತೀರ್ಮನದಿಂದ‌ ಹೊರಬರಲು ಪ್ರಯತ್ನಿಸಿ. ಸಹೋದರರ ಜೊತೆ ವಾಗ್ವಾದವು ಹೆಚ್ಚಾಗಲಿದೆ. ಒಂದು‌ ವಿಷಯಕ್ಕೆ ಅನೇಕ ಮುಖಗಳು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ಗ್ರಾಹಕರನ್ನು ಚನ್ನಾಗಿ ಇಟ್ಟುಕೊಂಡು ವ್ಯಾಪಾರದಲ್ಲಿ ಲಾಭವನ್ನು ಪಡೆಯಿರಿ. ಆರ್ಥಿಕ ಸಂಕಷ್ಟದಿಂದ ಬುದ್ಧಿಗೆ ಏನೂ ಸೂಚಿಸದೇ ಇರಬಹುದು.

ಮೀನ

ಹಿರಿಯರ ಬೇಸರವೇ ನಿಮಗೆ ಶಾಪದಂತೆ ಆಗಬಹುದು. ಇದು ನಿಮ್ಮ ಮನಸ್ಸಿಗೆ ಇಂದು‌ ನೀವು ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನವಾಗಲಿದೆ. ಪ್ರೀತಿಯಲ್ಲಿ ಬಿದ್ದು ನೀವು ಒದ್ದಾಡುವ ಸ್ಥಿತಿ ಎದುರಾಗಬಹುದು. ಕೆಲವೊಮ್ಮೆ ಸಹನೆ ಕಳೆದುಕೊಂಡು ಉಗ್ರವಾಗುವಿರಿ. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿ. ಒಳ್ಳೆಯ ಭೋಜನವನ್ನು ಸ್ವೀಕರಿಸುವಿರಿ. ಮಾತನಾಡುವ ಇಚ್ಛೆ ಇಂದು‌ ಕಡಿಮೆ ಇರಲಿದೆ

admin
the authoradmin

Leave a Reply