Latest

ಇಂದಿನ (30-07-2026 ಗುರುವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಸಂವತ್ಸರ: ಶ್ರೀ ಪರಾಭವ ನಾಮ ಅಯನ: ದಕ್ಷಿಣಾಯಣ ಋತು:ಗ್ರೀಷ್ಮ ಮಾಸ: ಆಷಾಢ ಪಕ್ಷ:ಕೃಷ್ಣ ಸೂರ್ಯೋದಯ: 5:58 ಸೂರ್ಯಾಸ್ತ: 6:46  ತಿಥಿ: ಪಾಡ್ಯ ನಕ್ಷತ್ರ: ಶ್ರವಣ ಯೋಗ: ಆಯುಷ್ಮಾನ್  ಕರಣ:ಕೌಲವ ರಾಹು ಕಾಲ:1:58-3:34 ಯಮಗಂಡ:5:58-7:34 ಗುಳಿಕ ಕಾಲ:9:10-10:46

ದ್ವಾದಶ ರಾಶಿಗಳ ಫಲಾಫಲಗಳು ಹೇಗಿವೆ?

ಮೇಷ

ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಭೂಮಿಯ ಉತ್ಪನ್ನವನ್ನು ತಯಾರಿಸುತ್ತಿದ್ದರೆ ಉತ್ತಮ‌ ಲಾಭವಿದೆ. ಸಾಲಬಾಧೆಯಿಂದ ಕೆಟ್ಟ ಕೆಲಸವನ್ನು ಮಾಡಲು ಪ್ರೇರಣೆಯಾಗಬಹುದು. ಇದರಿಂದ ಇನ್ನಷ್ಟು ಇಂದು ಹೊಸ ಕೆಲಸಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳು ಶುಭವಾಗಲಿದೆ. ಇಲ್ಲವಾದರೆ ನಷ್ಟವಾಗಬಹುದು. ಯಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡುವಿರಿ. ಬೇಡವೆನಿಸಿದ್ದನ್ನು ಯಾವ ಕಾಲಕ್ಕೂ ಪಡೆಯಲಾರಿರಿ.

ವೃಷಭ

ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಇಂದು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯ ಸಿಗಲಿದೆ.‌ ಹಿರಿಯರ ಜೊತೆ ನಿಷ್ಠುರ ಏರ್ಪಡಬಹುದು. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನಿಮ್ಮನ್ನು ನೀವೇ ನೋಡಿಕೊಳ್ಳುವಿರಿ.

ಮಿಥುನ

ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು.‌ ಇಂದು ನಿಮಗೆ ಕುಟುಂಬ ಜೊತೆ ಸಲುಗೆಯಿಂದ ಕಾಲವನ್ನು ಕಳೆಯುವ ಮನಸ್ಸಿರುವುದು. ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ಈ‌ ಮೊದಲೇ ನೀವು ನಿಲ್ಲಿಸಿದ ಯಾ ಕೆಲಸವು ಇಂದು ಪೂರ್ಣವಾಗುವುದು. ಮುಂದೆ ನಿಮ್ಮ ಹಣಕ್ಕೆ ತೊಂದರೆ ಬರಲಿದೆ. ಭೂ ವ್ಯವಹಾರದಲ್ಲಿ ಕೈ ಹಾಕಲು ಹೋಗಲೇಬೇಡಿ. ಹಣವನ್ನು ಹೊಂದಿಸುವುದು ಇಂದು ಸುಲಭದ ಕೆಲಸವಲ್ಲ‌. ಅನ್ಯರ ಕಾರಣದಿಂದ ತಾಳ್ಮೆಯ ಕಟ್ಟೆ ಒಡೆಯಬಹುದು.

ಕರ್ಕಾಟಕ

ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಇಂದು ನಿಮ್ಮ ಮಾತಿನ ಮೃದುತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ದುರಭ್ಯಾಸದಿಂದ ಗೊತ್ತಾಗದಂತೆ ಹಣವು ಖರ್ಚಾಗುವುದು. ಇಂದು ನಿಮ್ಮ ಸಹನೆಯ ಪರೀಕ್ಷೆಯೂ ಆಗಬಹುದು.‌ ಉತ್ತಮ ಫಲಿತಾಂಶ ಇದರಿಂದ ಹೊರಬರಲಿದೆ. ಬೇಕಾದವರನ್ನು ಮಾತಿನಿಂದ ದೂರ ಮಾಡಿಕೊಳ್ಳುವಿರಿ. ನಿಮ್ಮ ಅತಿಯಾದ ಮಾತು ಕಿರಿಕಿರಿ‌ ಮಾಡೀತು.

ಸಿಂಹ

ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆ ಶತ್ರುಗಳೂ ಉಂಟಾಗುವರು. ನಿಮ್ಮ ಮುಂಗೋಪವು ಸಂಗಾತಿಗೆ ಮುಜುಗರ ಆಗುವುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ಇಂದು ನೀವು ಜೀವನೋಪಾಯಕ್ಕೆ ತೋಚಿದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ವಿಳಂಬದಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಧನ ಮತ್ತು ಮಾನಗಳನ್ನು ಕಳೆದುಕೊಳ್ಳಬೇಕಾಗುವುದು. ಸ್ಥಾನವು ಕೈ ತಪ್ಪುವುದು ಎಂಬ ಭೀತಿ ಇರಲಿದೆ.

ಕನ್ಯಾ

ಸ್ನೇಹಿತರ ಒತ್ತಾಯಕ್ಕೆ ಮೋಜಿಗಾಗಿ ಹಣವನ್ನು ಹಾಕಿ ಕಳೆದುಕೊಳ್ಳುವಿರಿ. ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ಸಮಯಕ್ಕೆ ಸರಿಯಾಗಿ ನಿಮ್ಮ ಜವಾಬ್ದಾರಿಯನ್ನು ಮುಗಿಸುವಿರಿ. ನಿಮ್ಮ ಶತ್ರುಗಳ ಸಂಖ್ಯೆಯು ಇಂದು ಹೆಚ್ಚಾಗಬಹುದು. ರಾಜಕೀಯದಲ್ಲಿ ತೊಡಗಿರುವ ಜನರಿಗೆ ಒಳ್ಳೆಯ ಅನುಕೂಲವಿರಲಿದೆ. ಹಣದ ಅಪವ್ಯಯವು ಆಗದಂತೆ ನೋಡಿಕೊಳ್ಳಿ. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ.

ತುಲಾ

ಇಂದು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಇಂದು ಹಣದ ವಿಷಯದಲ್ಲಿ ಅನುಕೂಲವಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯು ಬರಲಿದೆ. ಸ್ನೇಹಿತನ ಭೇಟಿಯಿಂದ ಮನಸ್ಸು ತುಂಬಾ ಸಂತೋಷವಾಗುವುದು. ಅವರ ಎಲ್ಲಾ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಬಹುದು.

ವೃಶ್ಚಿಕ

ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಹೂಡಿಕೆಯಿಂದ ವ್ಯರ್ಥ ಓಡಾಟವಾಗಬಹುದು. ಯಾರನ್ನೋ ಅವಲಂಬಿಸಿ ನೀವು ಕೆಲಸ ಮಾಡುವುದು ಬೇಡ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ.

ಧನು

ಯಾರಿಗೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ಅನಿರೀಕ್ಷಿತವಾಗಿ ವೈವಾಹಿಕ ಸಂಬಂಧವು ಕೂಡಿ ಬರಬಹುದು. ಬಂದ ಯೋಗವನ್ನು ಬಿಡುವುದು ಬೇಡ. ಇಂದು ಏನನ್ನೂ ಸಾಲವಾಗಿ ಕೊಡುವುದು ಬೇಡ. ಅಧಿಕ ಖರ್ಚೇ ನಿಮ್ಮ ಅಶಾಂತಿಗೆ ಕಾರಣವಾಗುವುದು. ಮನೆ ಸದಸ್ಯರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಸೌಹಾರ್ದತೆ ಮೂಡಲಿದೆ. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ವ್ಯಾಪಾರಕ್ಕೆ ಯೋಗ್ಯವಾದ ಮಾತು ಇರಲಿ.

ಮಕರ

ಇಂದು ದೇವರ ಮೇಲೆ‌ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ನಿಮ್ಮ ಅತ್ಯುತ್ಸಾಹಕ್ಕೆ ದೇಹವು ಸಹಕರಿಸದೇ ಇರಬಹುದು. ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ. ಇಂದು ಕಲೆಗೆ ಸಂಬಂಧಿಸಿ ಮಾಡುತ್ತಿರುವ ಸುಖಾಂತ್ಯವಾಗುವುದು. ಪಾಲುದಾರರ ಜೊತೆಗಿನ ಒಪ್ಪಂದವು ಅಂತ್ಯವಾಗಬಹುದು. ಉದ್ಯಮದಲ್ಲಿ ನಿಮಗೆ ಪ್ರಗತಿ ಕಾಣಿಸುವುದು.

ಕುಂಭ

ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಇಂದು ಹಣಕಾಸಿನ ವಿಚಾರದಲ್ಲಿ ಮಾಡಿದ ಪ್ರಯತ್ನಗಳು ಸಫಲವಾಗುವುವು. ಕಲೆಗೆ ಸಂಬಂಧಿಸಿದವರಾಗಿದ್ದರೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಮರ್ಯಾದೆಯನ್ನು ಮೀರಿ‌ ನೀವು ವರ್ತಿಸುವುದು ಕಷ್ಟವಾಗುವುದು. ದೇಹಕ್ಕೆ ಆಯುಧದಿಂದ ಘಾಸಿಯಾಗಬಹುದು. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು.

ಮೀನ

ನಿಮ್ಮೊಳಗೆ ಅತೃಪ್ತಭಾವವು ಇರಲಿದೆ‌. ಇಂದು ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಬಹುದು. ಇದು ನಿಮಗೆ ಬಹಳ ದಿನಗಳ ಅನಂತರದ ಸಂತೋಷ ನೀಡುವ ಸಂಗತಿಯಾಗಲಿದೆ. ಇಂದು ಮಾಡುವ ಸ್ವಯಂ ಸೇವೆಯ ಕೆಲಸ ಹೆಮ್ಮೆಯಾಗುವುದು. ಸಾಮರಸ್ಯವನ್ನು ಉಂಟುಮಾಡುವುದು ಸುಲಭದ ಕಾರ್ಯವಲ್ಲ. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಹಣವನ್ನು ಹೂಡುವುದು ಬೇಡ.

admin
the authoradmin

Leave a Reply