1950 ಸೆಪ್ಟೆಂಬರ್ 17 ರಂದು ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ವಡನಗರದಲ್ಲಿ ಅತ್ಯಂತ ಬಡ ಹಿಂದುಳಿದ ಕುಟುಂಬದಲ್ಲಿ ದಾಮೋದರದಾಸ್ ಮತ್ತು ಹೀರಾಬೆನ್ ದಂಪತಿಯ ಮೂರನೇ ಮಗನಾಗಿ ಹುಟ್ಟಿದ ನರೇಂದ್ರ, ಬಾಲ್ಯದಲ್ಲೇ ಜೀವನದ ಕಷ್ಟವನ್ನು ಕಂಡವರು. ತಂದೆಯೊಂದಿಗೆ ವಡನಗರ ರೈಲ್ವೆ ನಿಲ್ದಾಣದಲ್ಲಿ ಚಾಯ್ ಮಾರುತ್ತಾ, ತಾಯಿ ಇತರರ ಮನೆಯಲ್ಲಿ ಪಾತ್ರೆ ತೊಳೆಯುತ್ತಾ ಕುಟುಂಬ ಸಾಗಿಸುತ್ತಿದ್ದ ಆ ದಿನಗಳೇ ಇಂದು ಅವರನ್ನು ಬಡವರ ನೋವು ಅರ್ಥ ಮಾಡಿಕೊಳ್ಳುವ ನಾಯಕನಾಗಿ ಮಾಡಿದೆ.
8ನೇ ವಯಸ್ಸಿನಲ್ಲೇ RSS ಶಾಖೆಗೆ ಹೋಗುತ್ತಿದ್ದ ಆ ಪುಟ್ಟ ಬಾಲಕನಿಗೆ ದೇಶವೇ ದೇವರು ಎಂಬ ಮಂತ್ರ ಅಂದೇ ಕರಗತವಾಗಿತ್ತು. ಶಾಲೆಯಲ್ಲಿ ಚರ್ಚೆ, ನಾಟಕಗಳಲ್ಲಿ ಮುಂಚೂಣಿಯಲ್ಲಿದ್ದ ಮೋದಿ, ವಿವೇಕಾನಂದರ ಜೀವನದಿಂದ ಪ್ರಭಾವಿತರಾಗಿ ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ತುಡಿತ ಬೆಳೆಸಿಕೊಂಡರು. ಆ ತುಡಿತವೇ ಅವರನ್ನು ಮನೆ ತೊರೆದು ಹಿಮಾಲಯದತ್ತ ಕರೆದೊಯ್ದಿತು.

ಯೌವನದಲ್ಲಿ ಸನ್ಯಾಸಿಯಾಗಿ ಹಿಮಾಲಯದಲ್ಲಿ ಎರಡು ವರ್ಷ ಅಲೆದಾಟ ನಡೆಸಿದ ಮೋದಿ ರಾಮಕೃಷ್ಣ ಆಶ್ರಮ ಸೇರಿದಂತೆ ಹಲವು ಆಶ್ರಮಗಳಲ್ಲಿ ಸಾಧನೆ ಮಾಡಿ, ಅಂತಿಮವಾಗಿ ದೇಶಸೇವೆಗಾಗಿ ಸಂಸಾರ ತ್ಯಜಿಸಿ RSS ಪ್ರಚಾರಕರಾಗಿ ಬದುಕನ್ನು ಸಮರ್ಪಿಸಿಕೊಂಡರು. ವೈಯಕ್ತಿಕ ಸುಖ, ಕುಟುಂಬ, ಆಸ್ತಿ ಎಲ್ಲವನ್ನೂ ತ್ಯಜಿಸಿ ದೇಶವೇ ಕುಟುಂಬ ಎಂದು ಬದುಕಿದ ತ್ಯಾಗಮಯಿ ಅವರು.
ಸಂಘಟನೆಯಲ್ಲಿ ಬೆವರಿಳಿಸಿ ಪಕ್ಷ ಕಟ್ಟಿದ ನಾಯಕ ಮೋದಿಜಿ, 80-90ರ ದಶಕದಲ್ಲಿ BJP ಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ, ಗುಜರಾತ್ ಮತ್ತು ದೇಶದ ಮೂಲೆ ಮೂಲೆಗಳಲ್ಲಿ ಪಕ್ಷವನ್ನು ಸಂಘಟಿಸಿದರು. ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆಯ ರೂವಾರಿಯಾಗಿ, ಪಕ್ಷಕ್ಕೆ ಅಡಿಪಾಯ ಹಾಕಿದ ಶಿಲ್ಪಿ. ಅಧಿಕಾರಕ್ಕಾಗಿ ಅಲ್ಲ, ಸಿದ್ಧಾಂತಕ್ಕಾಗಿ ದುಡಿದ ನಾಯಕ.

2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಗುಜರಾತ್ ಭೂಕಂಪ, ಗಲಭೆ, ಬರಗಾಲದಿಂದ ನಲುಗಿತ್ತು. ಆದರೆ 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮೋದಿಜಿ ಗುಜರಾತ್ ಅನ್ನು ಭಾರತದ ಅಭಿವೃದ್ಧಿ ಮಾದರಿ (Gujarat Model) ಆಗಿ ಪರಿವರ್ತಿಸಿದರು. 24 ಗಂಟೆ ವಿದ್ಯುತ್, ಕೃಷಿ ಕ್ರಾಂತಿ, ಕೈಗಾರಿಕಾ ಹೂಡಿಕೆ, ಸಬರಮತಿ ರಿವರ್ ಫ್ರಂಟ್ – ಇಂದು ಗುಜರಾತ್ ಭಾರತದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯ.
2014 ಮೇ 26 – ಭಾರತದ ಇತಿಹಾಸದಲ್ಲಿ ಹೊಸ ಯುಗ ಆರಂಭವಾಯಿತು, 30 ವರ್ಷಗಳ ನಂತರ ಪೂರ್ಣ ಬಹುಮತದೊಂದಿಗೆ ನರೇಂದ್ರ ಮೋದಿ ಪ್ರಧಾನಿಯಾದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮಂತ್ರದೊಂದಿಗೆ ನವ ಭಾರತ ನಿರ್ಮಾಣ ಆರಂಭವಾಯಿತು. ಭ್ರಷ್ಟಾಚಾರ ಮುಕ್ತ, ಕುಟುಂಬ ರಾಜಕಾರಣ ಮುಕ್ತ ಆಡಳಿತಕ್ಕೆ ನಾಂದಿ ಹಾಡಿದರು.
ಬಡವರ ಬದುಕಿಗೆ ಬೆಳಕಾದ ಮೋದಿಜಿಯವರ ಯೋಜನೆಗಳು ವಿಶ್ವದಲ್ಲೇ ಮಾದರಿ, 50 ಕೋಟಿಗೂ ಹೆಚ್ಚು ಜನರಿಗೆ ಜನ್ ಧನ್ ಖಾತೆ, 12 ಕೋಟಿ ಮನೆಗಳಿಗೆ ಶೌಚಾಲಯ (ಸ್ವಚ್ಛ ಭಾರತ್), 4 ಕೋಟಿ ಬಡವರಿಗೆ ಪಕ್ಕಾ ಮನೆ, 10 ಕೋಟಿ ತಾಯಂದಿರಿಗೆ ಉಜ್ವಲಾ ಉಚಿತ ಗ್ಯಾಸ್, 80 ಕೋಟಿ ಜನರಿಗೆ ಉಚಿತ ಪಡಿತರ, ಮತ್ತು ಆಯುಷ್ಮಾನ್ ಭಾರತ್ ಮೂಲಕ 50 ಕೋಟಿ ಬಡವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ – ಇವು ಕೇವಲ ಯೋಜನೆಗಳಲ್ಲ, ಕೋಟಿ ಕಣ್ಣೀರು ಒರೆಸಿದ ಮಾನವೀಯ ಕಾರ್ಯಗಳು.

ಡಿಜಿಟಲ್ ಮತ್ತು ಆತ್ಮನಿರ್ಭರ ಭಾರತದ ಹರಿಕಾರ ಮೋದಿಜಿ, ಅವರ ಕನಸಿನ UPI ಇಂದು ವಿಶ್ವದ ಶೇ. 46% ಡಿಜಿಟಲ್ ವಹಿವಾಟು ಹೊಂದಿದೆ. ಇಂದು ತರಕಾರಿ ಮಾರುವವನಿಂದ ಹಿಡಿದು ಮಾಲ್ ವರೆಗೆ UPI ಬಳಕೆಯಾಗುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ಮೊಬೈಲ್ ಉತ್ಪಾದನೆಯಲ್ಲಿ ವಿಶ್ವದ ನಂ.2, ಚಂದ್ರಯಾನ-3 ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ, ವಂದೇ ಭಾರತ್ ರೈಲು, 220 ಕೋಟಿ ಉಚಿತ ಕೋವಿಡ್ ಲಸಿಕೆ – ಇವೆಲ್ಲವೂ ಹೊಸ ಭಾರತದ ಹೆಮ್ಮೆ.
ಭದ್ರತೆ ಮತ್ತು ಸಾಂಸ್ಕೃತಿಕ ಭಾರತವನ್ನು ಮರಳಿ ಕಟ್ಟಿದ ಧೀರ ನಾಯಕ, 70 ವರ್ಷಗಳಿಂದ ಯಾರೂ ಮುಟ್ಟಲು ಹೆದರುತ್ತಿದ್ದ ಆರ್ಟಿಕಲ್ 370 ಅನ್ನು ರದ್ದು ಮಾಡಿ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಬೆಸೆದರು, 500 ವರ್ಷದ ಕನಸಿನ ಅಯೋಧ್ಯೆ ರಾಮ ಮಂದಿರವನ್ನು ನಿರ್ಮಿಸಿದರು, CAA ಜಾರಿಗೆ ತಂದರು, ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ಮನೆಯಲ್ಲಿ ಹೊಕ್ಕಿ ಹೊಡೆಯುವ ಹೊಸ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿದರು.

ವಿಶ್ವಗುರುವಾಗಿ ಭಾರತವನ್ನು ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲಿಸಿದ ನಾಯಕ, ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಘೋಷಿಸುವಂತೆ ಮಾಡಿದರು, G20 ಶೃಂಗಸಭೆಯನ್ನು ಅದ್ಧೂರಿಯಾಗಿ ಆಯೋಜಿಸಿ ವಸುಧೈವ ಕುಟುಂಬಕಂ ಸಂದೇಶವನ್ನು ಜಗತ್ತಿಗೆ ಸಾರಿದರು. ಇಂದು ಅಮೇರಿಕಾ, ರಷ್ಯಾ, ಫ್ರಾನ್ಸ್ ಎಲ್ಲ ದೇಶಗಳ ಅಧ್ಯಕ್ಷರು ಮೋದಿಜಿಯವರ ಮಾತಿಗೆ ಕಿವಿಗೊಡುತ್ತಾರೆ. ಇದು 140 ಕೋಟಿ ಭಾರತೀಯರ ಹೆಮ್ಮೆ.
ಇಂತಹ ಧೀಮಂತ, ನಿಸ್ವಾರ್ಥ, 24×7 ದೇಶಕ್ಕಾಗಿಯೇ ದುಡಿಯುವ ನಾಯಕನನ್ನು ಪಡೆದ ನಾವು ಭಾರತೀಯರು ನಿಜಕ್ಕೂ ಧನ್ಯರು, ಅವರಿಗೆ ಸ್ವಂತ ಮನೆ ಇಲ್ಲ, ಕಾರು ಇಲ್ಲ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲ, ಕುಟುಂಬದ ವ್ಯಾಮೋಹ ಇಲ್ಲ – ಇರುವುದು ಒಂದೇ ಒಂದು ಕನಸು – ಭಾರತವನ್ನು ವಿಶ್ವಗುರುವಾಗಿ ಮಾಡಬೇಕು, 2047 ರ ವೇಳೆಗೆ ವಿಕಸಿತ ಭಾರತ ಕಟ್ಟಬೇಕು ಎಂಬ ಧ್ಯೇಯ. ಅಂತಹ ತಪಸ್ವಿಗೆ ನಾವು ಏನು ಕೊಡಲು ಸಾಧ್ಯ?

ಇಂತಹ ಧೀಮಂತ ನಾಯಕನ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷ ಇಂದು ವಿಶ್ವದ ಅತಿದೊಡ್ಡ ಪಕ್ಷವಾಗಿ ಮುನ್ನಡೆಯುತ್ತಿದೆ, ಇಂತಹ ಪಕ್ಷದ ಕಾರ್ಯಕರ್ತರಾಗಿರಲು ನಾವೆಲ್ಲರೂ ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿರಬೇಕು. ಮೋದಿಜಿಯವರಂತಹ ನಮ್ಮ ಕಣ್ಣ ಮುಂದೆಯೇ ನಡೆಯಾಡುವ ಜೀವಂತ ದೇವರನ್ನು ನಮ್ಮ ಜನ್ಮದಲ್ಲಿ ನೋಡುತ್ತಿರುವುದೇ ನಮ್ಮ ಸೌಭಾಗ್ಯ. ಇಂತಹ ಸಿದ್ಧಾಂತ, ಇಂತಹ ನಾಯಕತ್ವವನ್ನು ಬಿಟ್ಟು ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋಗುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು – ಅಧಿಕಾರ ಶಾಶ್ವತವಲ್ಲ, ಆದರೆ ಮೋದಿಜಿಯವರಂತಹ ನಾಯಕನ ಜೊತೆಗಿನ ನಿಷ್ಠೆ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ.
ಸೆಪ್ಟೆಂಬರ್ 17 ಮೋದಿಜಿಯವರ ಹುಟ್ಟುಹಬ್ಬವನ್ನು ನಾವೆಲ್ಲರೂ ಸಂಕಲ್ಪ ದಿನವನ್ನಾಗಿ ಆಚರಿಸೋಣ – ಪ್ರತಿಯೊಬ್ಬ ದೇಶಭಕ್ತ ಭಾರತೀಯನು ಸಂಜೆ 6 ರಿಂದ 7 ಗಂಟೆಯ ಒಳಗಡೆ ತಮ್ಮ ಮನೆಯಲ್ಲಿ ಒಂದು ದೀಪ ಬೆಳಗಿಸಿ, ಭಗವಂತನಲ್ಲಿ ಪ್ರಾರ್ಥಿಸೋಣ – ಭಗವಂತ ಮೋದಿಜಿಯವರಿಗೆ ದೇಶ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ, ಅವರ ಆಯುಷ್ಯ ಇನ್ನೂ ವೃದ್ಧಿಯಾಗಲಿ, ಅವರ ಕನಸಿನ 2047ರ ವಿಕಸಿತ ಭಾರತದ ಸಂಕಲ್ಪ ನನಸಾಗಲಿ ಎಂದು. ಒಂದು ದೀಪ, ಒಂದು ಸಂಕಲ್ಪ, ಒಂದು ಭಾರತ – ಬನ್ನಿ, ನಾವೆಲ್ಲರೂ ಈ ದೀಪ ಬೆಳಗುವ ಅಭಿಯಾನದಲ್ಲಿ ಭಾಗಿಯಾಗಿ ಮೋದಿಜಿಯವರಿಗೆ ನಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ಸಲ್ಲಿಸೋಣ!







