Articles

ಮನುಷ್ಯನಲ್ಲಿರುವ ನಾಲ್ಕು ಲಕ್ಷಣಗಳು ಯಾವುದು ಗೊತ್ತಾ? ಅವಲಕ್ಷಣಗಳಾಗದಂತೆ ಎಚ್ಚರವಿರಲಿ!

ಮನುಷ್ಯ ತನ್ನ ಮುಖಚರ್ಯೆ, ರೂಪ, ನಡೆನುಡಿ ಹೀಗೆ ಎಲ್ಲದರಲ್ಲೂ ತನ್ನದೇ ಆದ ಲಕ್ಷಣವನ್ನು ಹೊಂದಿದ್ದಾನೆ. ಆ ಲಕ್ಷಣದಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾನೆ. ಆದರೆ ಈ ಲಕ್ಷಣಗಳಲ್ಲಿ ಸ್ವಲ್ಪ ಎಡವಟ್ಟಾದರೂ ಅದು ಅವಲಕ್ಷಣವಾಗಿ ಬಿಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದು ಆಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕಾಗುತ್ತದೆ. ಇದಕ್ಕೂ ಮುನ್ನ ಮನುಷ್ಯನಲ್ಲಿರುವ ಆ ನಾಲ್ಕು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಈ ಲಕ್ಷಣಗಳ ಕುರಿತಂತೆ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ವಿವರಿಸಿದ್ದಾರೆ ತಪ್ಪದೆ ಓದಿ ಬಿಡಿ…

ಲಕ್ಷಣದ ತದ್ವಿರುದ್ಧ ಅಸ್ತಿತ್ವವೇ ಅವಲಕ್ಷಣ… ಜಗತ್ತಿನಲ್ಲಿರುವ ನರ-ವಾನರ- ಅಸುರ (ರಾಕ್ಷಸ) ಈ ಮೂರು ಬಗೆಯ ಜೀವ ಜಂತುಗಳಲ್ಲಿ ಒಂದಲ್ಲೊಂದು ರೀತಿಯ ಲಕ್ಷಣ ಮತ್ತು ಅವಲಕ್ಷಣಗಳು ಇದ್ದೆ ಇರುತ್ತದೆ. ಅಂಕಿ-ಅಂಶ ಪ್ರಕಾರ ಸಿದ್ಧಾಂತ ಪಡಿಸಿದ ಫಲಿತಾಂಶವನ್ನು ನೋಡಿದ್ದೇ ಆದರೆ ನರ ಮಾನವ ವಿಭಾಗದಲ್ಲಿ ಶೇಕಡ 50:50 ಅನುಪಾತದಲ್ಲಿದ್ದರೆ, ಅದೇ ವಾನರ ಸಂತತಿ ಯಲ್ಲಿ ಶೇ.20:80 ಅನುಪಾತದಲ್ಲೂ ಹಾಗೂ ಅಸುರ ವಿಭಾಗದಲ್ಲಿ ಶೇ.10:90 ಅನುಪಾತದಲ್ಲಿ  ಇರುತ್ತದೆ! ಲಕ್ಷಣಾವಲಕ್ಷಣ ಸ್ಥಿತಿಯನ್ನ ತಲುಪಲು ಅಥವಾ ಪಡೆದುಕೊಳ್ಳಲು ನಾಲ್ಕು ಮುಖ್ಯಕಾರಣಗಳಿರುತ್ತವೆ.

ಈ ನಾಲ್ಕು  ಕಾರಣಗಳಲ್ಲಿ ಮೊದಲನೆಯದು.. ತಾಯಿ-ತಂದೆ, ಅನುವಂಶಿಕ, ವಂಶಪಾರಂಪರ್ಯ ಸಂಸ್ಕಾರ ಲಕ್ಷಣಾವಲಕ್ಷಣ, ಎರಡನೆಯದು..  ಪರಿಸರ, ಸ್ನೇಹ, ಸಹವಾಸ, ಸಂಗ, ಸಮಾಜ, ಅರಿಷಟ್ವರ್ಗ ಲಕ್ಷಣಾವಲಕ್ಷಣ, ಮೂರನೆಯದು…  ಗುರು-ಹಿರಿಯ, ಶಿಕ್ಷಣ-ಶಿಕ್ಷೆ, ವಿದ್ಯಾ-ಬುದ್ಧಿ, ಮಡದಿ-ಮಕ್ಕಳು, ಬಂಧು-ಬಳಗ, ಲಕ್ಷಣಾವಲಕ್ಷಣ, ನಾಲ್ಕನೆಯದು… ಆಧ್ಯಾತ್ಮಿಕ, ಸತ್ಸಂಗ, ಬ್ರಹ್ಮಚರ್ಯೆ, ಧ್ಯಾನ, ಭಕ್ತಿ, ಸಾತ್ವಿಕ, ಲಕ್ಷಣಾವಲಕ್ಷಣವಾಗಿದೆ.

ಲಕ್ಷಣವು  ಪ್ರಪಂಚದ ಯಾವುದೇ ಸ್ಥಳದಲ್ಲೂ ಎಂತಹ ಪರಿಸರದಲ್ಲೂ ಯಾವುದೇ ಕಾಲದಲ್ಲೂ ಅನವರತ ಸಹ್ಯ, ಪೂರಕ ಹಾಗೂ ಆಪ್ಯಾಯಮಾನ ಆಗಿರುತ್ತದೆ. ಪ್ರತಿಯೊಬ್ಬರಿಗು ಪ್ರತಿಕ್ಷಣದಲ್ಲೂ  ಇಷ್ಟವಾಗುವಂತೆ ಇರುತ್ತದೆ. ಸದಾಕಾಲ ಸಂತಸ ಮತ್ತು ತೃಪ್ತಿ ತರುತ್ತದೆ. ಅವಲಕ್ಷಣವು  ಪ್ರಪಂಚದ ಎಲ್ಲಾ ಸ್ಥಳ ಪರಿಸರ ಕಾಲದಲ್ಲೂ ಅನವರತ, ಅಸಹ್ಯ ಎನಿಸುತ್ತದೆ ಮಾತ್ರವಲ್ಲ ಮಾರಕವಾಗಿ ಪರಿಣಮಿಸಿ ಎಲ್ಲರಿಗು ಅನಿಷ್ಟವೆನಿಸಿ ಪ್ರತಿಕ್ಷಣವು ದುಃಖ ಮತ್ತು ಚಿಂತೆ ತರುತ್ತದೆ!

ಮನಸ್ಸು ಶಾಂತವಾಗಿ, ದೇಹವು ಆರೋಗ್ಯವಾಗಿ, ಸಮಾಜಕ್ಕೆ ಬೇಕಾದವರಾಗಿ, ಇರಬೇಕಾದರೆ ಲಕ್ಷಣ ಮತ್ತು ಅವಲಕ್ಷಣ ಇವೆರಡೂ ಸಹ ತಮ್ಮದೇ ಆದ ಪ್ರಮುಖ ಪಾತ್ರ ವಹಿಸುತ್ತವೆ. ಅಧಿಕಾರ ಅಂತಸ್ತು ಆಸ್ತಿ ಸಾಮ್ರಾಜ್ಯ ದೇಶ ಕೋಶ ಶಕ್ತಿ ಯುಕ್ತಿ ಭಕ್ತಿ ಸೇವೆ ಅದೆಷ್ಟೇ ಪ್ರಮಾಣದಲ್ಲಿ ಅಥವ ಸಂಖ್ಯೆಯಲ್ಲಿ ಇದ್ದರೂಸಹ ಸುಲಕ್ಷಣ ಇರದೇ ಹೋದಾಗ ಎಲ್ಲವೂ ವ್ಯರ್ಥವಾಗಿ ಹೋಗಿ ಅವಲಕ್ಷಣ ಎನಿಸುತ್ತದೆ. ಹೀಗಾಗಿ ಅಲ್ಪಾಯುಷ್ಯ ಇದ್ದಾಗಲೂ ಏನಿಲ್ಲದಿದ್ದರೂ ಎಲ್ಲರ ಬಳಿ ಕಡೇ ಪಕ್ಷ (ಸು)ಲಕ್ಷಣವಂತೂ ಇರಬೇಕು, ಆಗಮಾತ್ರ ಜನ್ಮ ಸಾರ್ಥಕ…

ಲಕ್ಷಣದ ಪ್ರಮುಖ ವಿಭಾಗಗಳನ್ನು ನೋಡಿದ್ದೇ ಆದರೆ ವರ್ಣ ಲಕ್ಷಣ, ಮುಖ ಲಕ್ಷಣ, ಹಸ್ತ ಲಕ್ಷಣ, ಪಾದ ಲಕ್ಷಣ, ಗುಣ ಲಕ್ಷಣ, ವಿದ್ಯಾ ಲಕ್ಷಣ, ವಿವೇಕ(ಬುದ್ಧಿ) ಲಕ್ಷಣ, ಧನಕನಕ ಲಕ್ಷಣ, ಮನೆತನ ಲಕ್ಷಣ, ಗ್ರಾಮೀಣ ಲಕ್ಷಣ, ನಗರ-ಮಹಾನಗರ(ಸ್ಥಳ) ಲಕ್ಷಣ, ನಕ್ಷತ್ರ ಲಕ್ಷಣ, ಸುಳಿ ಲಕ್ಷಣ, ವಾಕ್ಚಾತುರ್ಯ ಲಕ್ಷಣ, ರಾಶಿ-ಗ್ರಹ ಲಕ್ಷಣ, ಗೋತ್ರ ಲಕ್ಷಣ, ರಾಜ- ಮಹಾರಾಜ ಲಕ್ಷಣ, ಋತು (ಮಾನ) ಲಕ್ಷಣ, ಜ್ಞಾನ-ವಿಜ್ಞಾನ-ತಂತ್ರಜ್ಞಾನ ಲಕ್ಷಣ, ಭಯೋತ್ಪಾದಕ ಲಕ್ಷಣ,  ಶಿಕ್ಷಕ ಲಕ್ಷಣ,  ರಕ್ಷಕ ಲಕ್ಷಣ, ಇತ್ಯಾದಿ, ಇತ್ಯಾದಿ..

ಇಷ್ಟೇ ವಿಧಗಳಲ್ಲಿ ಅವಲಕ್ಷಣವೂ ಸಹ ಇರುತ್ತವೆ. ಯಾರೇನೆ ಹೇಳಲಿ ಬಿಡಲಿ, ಏನನ್ನಾದರೂ ನಂಬಲಿ ನಂಬದಿರಲಿ, ಅನಾದಿಕಾಲದಿಂದ ಸಂಪ್ರದಾಯ ಬದ್ಧವಾಗಿ ಆಯಾಯ ಪ್ರ-ದೇಶದ ಮನೆತನಕ್ಕೆ ತಕ್ಕಂತೆ ಅವರವರ ಅಪನಂಬಿಕೆ, ಮೂಢನಂಬಿಕೆ, ನಂಬಿಕೆಯಿಂದ ಇವತ್ತಿಗೂ ಚಾಲ್ತಿಯಲ್ಲಿ ಇರುತ್ತದೆ ಲಕ್ಷಣ ಮತ್ತು ಅವಲಕ್ಷಣ ಎಂಬ ಸಿದ್ಧಾಂತ, ವೇದಾಂತ ಪಠ್ಯಕ್ರಮ.

ಮನಸ್ಸು ಶಿಸ್ತು ಸಂಯಮ ಶ್ರದ್ಧೆ ಮತ್ತು ಇಚ್ಛಾಶಕ್ತಿ ಇದ್ದವರು ಯಾರೇ ಆಗಿರಲಿ ತಮ್ಮ ಲಕ್ಷಣವನ್ನು ಅವಲಕ್ಷಣವನ್ನಾಗಿಯೂ ಅಥವಾ ಅವಲಕ್ಷಣವನ್ನು ಲಕ್ಷಣವನ್ನಾಗಿಯೂ ಬದಲಾಯಿಸಿಕೊಳ್ಳ ಬಹುದಾದ ಅವಕಾಶ ಮತ್ತು ಸ್ವಾತಂತ್ರ್ಯ ಇದ್ದೆ ಇರುತ್ತದೆ. ಯಾರಿಂದ ಬೇಕಾದರೂ ಯಾವಾಗ ಬೇಕಾದರೂ ಲಕ್ಷಣಾವಲಕ್ಷಣ ಪೈಕಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವುದು ಅಥವಾ ಅದನ್ನು ಪಡೆದುಕೊಳ್ಳುವುದು ಅವರವರ ಇಷ್ಟಕ್ಕೆ ಬಿಟ್ಟದ್ದು!

admin
the authoradmin

21 ಪ್ರತಿಕ್ರಿಯೆಗಳು

  • ಆತ್ಮೀಯ ಲವ ಸರ್ you are simply 👍 GREAT.
    ಏಕೆಂದರೆ ಈ ಲೇಖನ ಕಳಿಸಿದ್ದು ಮರೆತೇಹೋಗಿತ್ತು…. ತುಂಬ ಸೊಗಸಾಗಿ
    ಮೂಡಿಸಿರುವ ಸಂಪಾದಕತ್ವದ ಏಕಲವ್ಯನಿಗೆ ಅನೇಕಾನೇಕ ಧನ್ಯವಾದಗಳು
    -ಕುಮಾರಕವಿ ನಟರಾಜ

  • 75 ವರ್ಷ ವಯೋಮಾನದ ಮೈಸೂರು ಗಂಧಧ (ಸೋಪು)ಕಾರ್ಖಾನೆ
    ನಿವೃತ್ತ ಅಧಿಕಾರಿ. ಸತ್ಯವಾಗಲೂ “ಲಕ್ಷಣ-ಅವಲಕ್ಷಣ” ಬರೆದಂಥ ಪುಣ್ಯಾತ್ಮ ನಟರಾಜ ಕವಿಯವರು ತಣ್ಣಗಿರಲಿ. ಸರಿಯಾಗೇ ಬರೆದಿದ್ದಾರೆ. ಕೆಟ್ಟ ಲಕ್ಷಣ ಇದ್ದವರೂ ಇದನ್ನು ಓದಿದ ನಂತರ ಒಳ್ಳೆಯ ಲಕ್ಷಣವಂತರಾಗಲು ಅಥವ ಒಳ್ಳೆಯ ಲಕ್ಷಣ ಗಳಿಸಲು ಪ್ರಯತ್ನ ಪಡುವಂತೆ ಪ್ರೇರೇಪಿತಗೊಳಿಸಿ ಮಾರ್ಗ ದರ್ಶನ ಮಾಡುತ್ತದೆ, ಸಾವಿರ ಧನ್ಯವಾದಗಳು

  • ಲಕ್ಷಣಾವಲಕ್ಷಣ ಸ್ಥಿತಿಯನ್ನು ಮತ್ತು ಅದರ ಲೋಪದೋಷ ಹಾಗೂ ಪ್ರಯೋಜನ ಮುಂತಾದವುಗಳನ್ನ ಚೆನ್ನಾಗಿಯೇ ಬರೆದಿದ್ದಾರೆ, ಪ್ರಕಟಿಸಿದ ಎಲ್ಲರಿಗೂ ಧನ್ಯವಾದ

  • 75 ವರ್ಷ ವಯೋಮಾನದ ಮೈಸೂರು ಗಂಧಧ (ಸೋಪು)ಕಾರ್ಖಾನೆ
    ನಿವೃತ್ತ ಅಧಿಕಾರಿ. ಸತ್ಯವಾಗಲೂ “ಲಕ್ಷಣ-ಅವಲಕ್ಷಣ” ಬರೆದಂಥ ಪುಣ್ಯಾತ್ಮ ನಟರಾಜ ಕವಿಯವರು ತಣ್ಣಗಿರಲಿ. ಸರಿಯಾಗೇ ಬರೆದಿದ್ದಾರೆ. ಕೆಟ್ಟ ಲಕ್ಷಣ ಇದ್ದವರೂ ಇದನ್ನು ಓದಿದ ನಂತರ ಒಳ್ಳೆಯ ಲಕ್ಷಣವಂತರಾಗಲು ಅಥವ ಒಳ್ಳೆಯ ಲಕ್ಷಣ ಗಳಿಸಲು ಪ್ರಯತ್ನ ಪಡುವಂತೆ ಪ್ರೇರೇಪಿತಗೊಳಿಸಿ ಮಾರ್ಗ ದರ್ಶನ ಮಾಡುತ್ತದೆ, ಸಾವಿರಾರು ಧನ್ಯವಾದಗಳು

  • ಲಕ್ಷಣ ಅವಲಕ್ಷಣ ಗುಣಾವಗುಣ ಬಗ್ಗೆ ಚಿಕ್ಕದಾಗಿ ಚೊಕ್ಕವಾಗಿ ಬರೆದ ಲೇಖಕ ನಟರಾಜ ಅವರಿಗೂ ಇಂಥ ಉತ್ತಮ ಉಪಯುಕ್ತ ಲೇಖನ ಪ್ರಕಟಿಸಿದ ತಮಗೂ ಅನಂತ ಧನ್ಯವಾದ,

    • ನಮಸ್ಕಾರ ಲಕ್ಷಣ ಅವಲಕ್ಷಣ ಎಂದರೆ ಸುಮಾರು ಜನರಿಗೆ ಗೊತ್ತೆ ಇರಲ್ಲ ಇದು ನಿಜವಾಗಲೂ ಒಂದು ಅಪರೂಪದ ಲೇಖನ, ಧನ್ಯವಾದ ಸರ್, ಮೈಸೂರು

  • ಬಹಳ ಪ್ರಯೋಜನಕಾರಿ ಬರವಣಿಗೆಯ ಉತ್ತಮ ಲೇಖನ, ನಮ್ಮ ಮನೆಯ ಎಲ್ಲರಿಗೂ ತುಂಬ ಹಿಡಿಸಿತು, ಧನ್ಯವಾದ ಸರ್
    ಸತ್ಯವತಿ ಶರಣ್ ಕುಮಾರ್, ಶಿವಮೊಗ್ಗ

  • ಬಹಳ ಪ್ರಯೋಜನಕಾರಿ ಬರವಣಿಗೆಯ ಉತ್ತಮ ಲೇಖನ, ನಮ್ಮ ಮನೆಯ ಎಲ್ಲರಿಗೂ ತುಂಬ ಹಿಡಿಸಿತು, ಧನ್ಯವಾದ ಸರ್
    ಸತ್ಯವತಿ ಶರಣ್ ಕುಮಾರ್, ಶಿವಮೊಗ್ಗ ನಗರ

  • ಪ್ರತಿಯೊಬ್ಬ ಮನುಷ್ಯನಲ್ಲೂ ಕೆಟ್ಟ ಲಕ್ಷಣ ಮತ್ತು ಒಳ್ಳೆಯ ಲಕ್ಷಣ ಎರಡೂ ಇದ್ದೇ ಇರುತ್ತೆ ಎಂಬುದರ ಬಗ್ಗೆ ಸೊಗಸಾದ ಲೇಖನ ಸರ್, ಥ್ಯಾಂಕ್ಸ್

  • ಪ್ರತಿಯೊಬ್ಬ ಜೀವ ಜಂತುವಿನಲ್ಲಿ ಕೆಟ್ಟ ಮತ್ತು ಒಳ್ಳೆ ಲಕ್ಷಣ ಎರಡೂ ಇರುತ್ತೆ ಎಂಬುದನ್ನು ನಾನೂ ಒಪ್ಪುತ್ತೇನೆ ಬಹುಶಃ ಎಲ್ಲರೂ ಒಪ್ಪಲೇಬೇಕು ಅಲ್ಲವೇ..??!!

  • ಪ್ರತಿಯೊಬ್ಬ ಜೀವ ಜಂತುವಿನಲ್ಲಿ ಕೆಟ್ಟ ಮತ್ತು ಒಳ್ಳೆ ಲಕ್ಷಣ ಎರಡೂ ಇರುತ್ತೆ ಎಂಬುದನ್ನು ನಾನೂ ಒಪ್ಪುತ್ತೇನೆ ಬಹುಶಃ ಎಲ್ಲರೂ ಒಪ್ಪಲೇಬೇಕು ಅಲ್ಲವೇ. ….??!!

  • ಪ್ರತಿಯೊಂದು ಜೀವ ಜಂತುವಿನಲ್ಲಿ ಕೆಟ್ಟ ಮತ್ತು ಒಳ್ಳೆ ಲಕ್ಷಣ ಎರಡೂ ಇರುತ್ತೆ ಎಂಬುದನ್ನು ನಾನೂ ಒಪ್ಪುತ್ತೇನೆ ಬಹುಶಃ ಎಲ್ಲರೂ ಒಪ್ಪಲೇಬೇಕು ಅಲ್ಲವೇ. ….??!!

  • ಭಾರತ ದೇಶದ ಅ-ವಿಭಜಿತ ಕುಟುಂಬದ ಪ್ರತಿಯೊಬ್ಬರೂ ಕಲಿತುಕೊಳ್ಳಲು ಹೊಸ ವಿಷಯ ವಿಚಾರ ಹೇಳುವಂಥ ಉತ್ತಮ ಲೇಖನ “ಲಕ್ಷಣ-ಅವಲಕ್ಷಣ”
    ಲೇಖಕ ಮಹಾಶಯರಾದ ಕುಮಾರಕವಿಯವರಿಗೆ ನಮಸ್ಕಾರ ಧನ್ಯವಾದ

ನಿಮ್ಮದೊಂದು ಉತ್ತರ

Translate to any language you want