ArticlesLatest

ಅರಣ್ಯ ಸುಡಬೇಡ ಮರವನ್ನು ಕಡಿಯಬೇಡ… ಧೂಮಪಾನ ಬೇಡ.. ಮದ್ಯಪಾನ ಬೇಡವೇ ಬೇಡ

ಡಿವಿಜಿ ಅವರ ಮಂಕುತಿಮ್ಮನ ಕಗ್ಗವು ಎಲ್ಲ ಕಾಲಕ್ಕೂ ಸಲ್ಲುವಂತಹದ್ದು, ಅಂತಹ ಪ್ರಯೋಗಗಳನ್ನು ಹಲವು ಕವಿ, ಸಾಹಿತಿಗಳು ಮಾಡಿದ್ದಾರೆ. ತಮ್ಮದೇ ವಚನ, ಕವನದ ಮೂಲಕ ಹಲವರು ಸಮಾಜವನ್ನು ತಿದ್ದುವ, ಉಪದೇಶವನ್ನು ಮಾಡಿದ್ದಾರೆ. ಅದನ್ನರಿತು ಮುನ್ನಡೆದರೆ ಬದುಕು ಸುಗಮವಾಗುವುದರಲ್ಲಿ  ಎರಡು ಮಾತಿಲ್ಲ… ಇಲ್ಲಿ ಕುಮಾರಕವಿ ನಟರಾಜ್ ಅವರು ತಮ್ಮದೇ ಆದ ಕುಕನರಾ ವಚನಾಮೃತದ ಮೂಲಕ ಕಿವಿ ಮಾತು ಹೇಳಿದ್ದಾರೆ…

ರಣ್ಯ ಸುಡಬೇಡ ಮರವನ್ನು ಕಡಿಯಬೇಡ

ಧೂಮಪಾನ ಬೇಡ ಮದ್ಯಪಾನ ಬೇಡವೇಬೇಡ

ಮಾದಕದ್ರವ್ಯ ಬೇಡ ಕಳ್ಳಭಟ್ಟಿ ಕುಡಿಯಬೇಡ

ಜೂಜುಮೋಜು ಬೇಡ ಪರಸ್ತ್ರೀಸಂಗ ಬೇಡವೇಬೇಡ

ನಿದ್ದೆ ಕೆಡಬೇಡ ಬುದ್ಧಿಹೀನನೂ ಆಗಬೇಡ

ಕೊಟ್ಟಮಾತು ತಪ್ಪಬೇಡ ಆಲಸ್ಯ ಬೇಡವೇಬೇಡ

ಅಹಂಕಾರ ಬೇಡ ಅನುಮಾನ ಪಡಲೇಬೇಡ

ಅನಾರೋಗ್ಯ ಬೇಡ ಅದೃಷ್ಟವನ್ನ ತಡೆಯಬೇಡ

ಅತಿ ಆಹಾರ ಬೇಡ ಉಪವಾಸವೂ ಇರಬೇಡ

ಅವಾಚ್ಯಪದ ಬೇಡ ಅಶ್ಲೀಲಚಿತ್ರವೂ ಬೇಡ

ಅತೀಶತೃ-ಮಿತ್ರ ಬೇಡ ಹಿತಶತ್ರುವೂ ಬೇಡ

ಮೊಬೈಲ್-ವ್ಯಸನ ಬೇಡ ಟೀವೀ ಹುಚ್ಚೂ ಬೇಡ

ಬರುವ ಎಲ್ಲವನು ಎದುರಿಸುವ ಧೀರನ

ಸಮರ್ಥ ಸಾಧನ ಉತ್ತಮ ಜೀವನ

ಸುರಾಸುರ ದೇವಿ ದೇವರ ಆಜ್ಞಾಪನ

ಸತ್ಯಸುಂದರ ನಿತ್ಯನಿರಂತರ ಪರಮ ಪಾವನ

ಇದೇ ಸಹಜಗುಣ ಇದೇ ಮಾನವಗುಣ

ಇದೇ ಕುಕನರಾ ವಚನಾಮೃತಸಾರ ಕಾಣ

admin
the authoradmin

17 Comments

  • Extraordinary poetry, poet Natraj sir is really caretaker for the nature as well as for the humanity, Thanksgiving writings. Bhuvanajyoti, ex-principal, government first grade college

  • ಕುಮಾರಕವಿಯವರ ಹೆಸರು ಅನ್ವರ್ಥ, ಏಕೆಂದರೆ ಇಂದಿನ ನಿಸರ್ಗ ಮತ್ತು ಜನತೆ ಬಗ್ಗೆ ಎಚ್ಚರಿಕೆ ವಹಿಸುವ ಕಾಳಜಿಹೊಂದಿರುವ ಕವಿತೆ. ಅನಂತಾನಂತ ಧನ್ಯವಾದ.

  • ಕುಮಾರಕವಿಯವರ ಹೆಸರು ಅನ್ವರ್ಥ, ಏಕೆಂದರೆ ಇಂದಿನ ನಿಸರ್ಗ ಮತ್ತು ಜನತೆ ಬಗ್ಗೆ ಎಚ್ಚರಿಕೆ ವಹಿಸುವ ಕಾಳಜಿಹೊಂದಿರುವ ಕವಿತೆ. ಅನಂತಾನಂತ ಧನ್ಯವಾದ. ಅಧೀಕ್ಷಕ (ನಿವೃತ್ತ)

  • ನನ್ನ ಭಾವನೆಗೆ ಶ್ರೇಷ್ಠ ರೂಪು ನೀಡಿದ ಸಂಪಾದಕ, ಉತ್ತಮ ಪತ್ರಿಕೋದ್ಯಮಿ ಹಾಗೂ ಆತ್ಮೀಯ ಲವಕುಮಾರ್ ಸರ್ ಗೆ ಕುಮಾರಕವಿಯ ಕೃತಜ್ಞತೆಗಳು thank you so much Lava sir

  • Extraordinary poetry, poet Natraj sir is really caretaker for the nature as well as for the humanity, Thanksgiving writings. Bhuvanajyoti, ex-principal, government first grade college, chikkaballapur

  • ಮನುಷ್ಯನ ದೌರ್ಬಲ್ಯ ಮತ್ತು ಪ್ರಕೃತಿಯ ಶಕ್ತಿಯ ಬಗ್ಗೆ ಕುಮಾರಕವಿಯವರ
    ಉತ್ತಮ ಕವನ, ರವಿರಾವ್, ಬಿಡದಿ

  • ಮನುಷ್ಯನ ದೌರ್ಬಲ್ಯ ಮತ್ತು ಪ್ರಕೃತಿ ಶಕ್ತಿಯ ಬಗ್ಗೆ ಕುಮಾರಕವಿಯವರ
    ಉತ್ತಮ ಕವನ, ರವಿರಾವ್, ಬಿಡದಿ

  • ನನ್ನ ಆತ್ಮೀಯ ಮಿತ್ರರಾದ ನಟರಾಜರವರು ತಮ್ಮ ಕವನದ ಮೂಲಕ ಸತ್ಯವನ್ನೇ ಪ್ರತಿಪಾದಿಸುತ್ತ ಎಳೆಎಳೆಯಾಗಿ ಮಾರ್ಗದರ್ಶನ ಮಾಡಿದ್ದಾರೆ, ಇದು ಇವತ್ತಿನ ಕಾಲಕ್ಕೆ ಪ್ರಸ್ತುತ, ಹೀಗಾಗಿ ಕುಮಾರಕವಿಯವರು ಎಲ್ಲರೀತಿಯಲ್ಲೂ ಪ್ರಶಂಸೆಗೆ ಅರ್ಹರು. ಕೆ.ಎಸ್. ನಾರಾಯಣಗೌಡ, ವಿಶ್ರಾಂತ ಕುಲಪತಿ, ಕೃಷಿ ವಿ.ವಿ., ಬೆಂಗಳೂರು.

  • Arthapoorna VACHANAMRUTA. JANAMANAKANNADA
    e-newsletter patrikege mattu kumarakavi nataraja avarige thanks.
    Pruthvi, Shirkey, Bengaluru

  • ಕುಮಾರಕವಿಯವರ ವಚನಾಮೃತಸಾರ, ಸೊಗಸಾಗಿದೆ ಮತ್ತು ಉಪಯುಕ್ತ ಮಾಹಿತಿಯೂ ಆಗಿದೆ, ಧನ್ಯವಾದ, ನಮಸ್ಕಾರ

  • ಕುಮಾರಕವಿಯವರ ವಚನಾಮೃತಸಾರ, ಸೊಗಸಾಗಿದ್ದು ಉಪಯುಕ್ತ ಮಾಹಿತಿಯೂ ಆಗಿದೆ, ಧನ್ಯವಾದ ಸರ್

  • Aranya samrakhane bagge uttama kavana barediruva kumarakavi nataraja ravarige namaskara, K.R.Ramalinge gowda, rtd.forest guard, Yelandur, Chamarajanagar

  • Aranya samrakshane mattu manushyana oxygen arogyada bagge uttama kavana barediruva kumarakavi nataraja ravarige namaskara, K.R.Ramalinge gowda, rtd.forest guard, Yelandur, Chamarajanagar

Leave a Reply

Translate to any language you want