ಹುಣಸೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರ ಬಂಧಿಸಿದ ಪೊಲೀಸರು
ಹುಣಸೂರು ಡ್ರಗ್ಸ್ ದಂಧೆಗೆ ಅಂತರಾಜ್ಯಗಳ ಸಂಪರ್ಕ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಇತ್ತೀಚೆಗೆ ಭಾರೀ ಸುದ್ದಿ ಮಾಡಿದ್ದ ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಪತ್ತೆ ಪ್ರಕರಣ ಸಂಬಂಧ ಮೈಸೂರು ಜಿಲ್ಲಾ ಪೊಲೀಸರು, ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಸದ್ಯ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಐದಕ್ಕೇರಿದೆ. ಹುಣಸೂರಿನ ರತ್ನಪುರಿ ಬಳಿಯ ದಾಸನಪುರ ತೋಟದ ಮನೆಯ ಮೇಲೆ ದಾಳಿ ನಡೆಸಿದ್ದ ಜಿಲ್ಲಾ ಪೊಲಿಸರ ತಂಡ ಅಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಲ್ಲದೆ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ನಂತರ ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳ ಪಡಿಸಲಾಗಿತ್ತು.
ಈ ವೇಳೆ ಆರೋಪಿಗಳ ಸಿಮ್ ಕಾರ್ಡ್ಗಳ ಪರಿಶೀ ಲನೆ ನಡೆಸಿದ ವೇಳೆ ಆರೋಪಿಗಳ ಸಂಪರ್ಕದಲ್ಲಿ ಇದ್ದ ಮತ್ತಿಬ್ಬರು ಮುಂಬೈ ಹಾಗೂ ಒಡಿಸ್ಸಾದಲ್ಲಿ ನೆಲೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿತ್ತು. ಹೀಗಾಗಿ ಜಿಲ್ಲಾ ಎಸ್ಪಿ ಸೂಚನೆ ನೇರೆಗೆ ಐದು ಮಂದಿ ಪೊಲೀಸ್ ಅಧಿಕಾರಿಗಳ ತಂಡ ಮುಂಬೈ ಹಾಗೂ ಒಡಿಸ್ಸಾಗೆ ತೆರಳಿತ್ತು. ನಂತರ ಅಲ್ಲಿನ ಪೊಲೀಸ್ ನೆರವಿನೊಂದಿಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಉಳಿದ ಓರ್ವನ ವಿಳಾಸ ಪತ್ತೆಗೆ ಜಾಲ ಬೀಸಿದ್ದರು.
ಯುವಜನತೆ ಮೇಲೆ ಡ್ರಗ್ಸ್ ಅಸ್ತ್ರ… ಇದು ಭಯೋತ್ಪಾದನೆಯ ತಂತ್ರ… ಪೋಷಕರೇ ಹುಷಾರ್!
ಹುಣಸೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಇಬ್ಬರು ಆರೋಪಿಗಳು ಒಡಿಶಾದಲ್ಲಿ ಕೂಡ ಓರ್ವ ಜಾಲದಲ್ಲಿ ಇದ್ದ ಬಗ್ಗೆ ಬಾಯ್ದಿಟ್ಟಿದ್ದರು. ಈ ಸಂಬಂಧ ಅಲ್ಲಿಗೆ ತೆರಳಿದ್ದ ಪೊಲೀಸರು, ಸ್ಥಳೀಯ ಪೊಲೀಸರ ನೆರವಿನಿಂದ ಮಾದಕ ವಸ್ತು ಸಾಗಾಣೆ ಮಾಡುತ್ತಿದ್ದ ರಾಜಾ ಸಹಾನಿ ಎಂಬಾತನನ್ನು ಬಂಧಿ ಸಿದ್ದು, ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೈಸೂರಿಗೆ ಕರೆ ತರುತ್ತಿದ್ದಾರೆ.
ಹಣಸೂರಿನಲ್ಲಿ ವಶಕ್ಕೆ ಪಡೆಯಲಾಗಿದ್ದ 7.35 ಕೆಜಿ ಮೆಫಡೋನ್, 41 ಕೆ.ಜಿ. ಮಾದಕ ವಸ್ತು ತಯಾರಿಕೆಯ ಕಚ್ಚಾ ವಸ್ತು ಸೇರಿದಂತೆ ಸುಮಾರು 48 ಕೆಜಿ ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸರು ನ್ಯಾಯಾಲಯಕ್ಕೆ ತೆರಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವುಗಳನ್ನು ಎಫ್ಎಸ್ಎಲ್ ವಿಭಾಗಕ್ಕೆ ರವಾನಿಸಿದ್ದರು.
ಈಗಾಗಲೇ ಮೈಸೂರು ಪೊಲೀಸರು ಡ್ರಗ್ ವಿರುದ್ಧ ಸಮರ ಸಾರಿದ್ದು, ಡ್ರಗ್ ಪೆಡ್ಲರ್ ಗಳನ್ನು ಹುಡುಕಿ ಜೈಲಿಗೆ ತಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಡ್ರಗ್ಸ್ ಗಾಂಜಾ ಇನ್ನಿತರ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಬಂದರೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಸಾರ್ವಜನಿಕರು ಅಗತ್ಯವಾಗಿದೆ.
ಈಗಾಗಲೇ ಡ್ರಗ್ಸ್ ಮಾಫಿಯಾ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದ್ದು ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಯುವ ಜನತೆಯನ್ನೇ ಟಾರ್ಗೆಟ್ ಮಾಡಿಕೊಂಡು ಆ ಮೂಲಕ ವ್ಯಸನಿಗಳನ್ನಾಗಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.
ಹುಣಸೂರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಪತ್ತೆ.. ಇಬ್ಬರ ಬಂಧನ… ಹೆಚ್ಚಿದ ಆತಂಕ







