ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯದಲ್ಲಿ ಮತ್ತೆ 50 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕಟ್ಟೆಮಳಲವಾಡಿ ಸಮೀಪ ಬರ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ಮೊದಲನೇ ಹಂತದ ವೀಕ್ಷಣೆ ಮಾಡಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಲಾಗಿದೆ ಕೇಂದ್ರ ಸರ್ಕಾರದ ನಿಯಮಾದಡಿ ಮಾಡಿದ್ದೇವೆ ರಾಜ್ಯ ಸರ್ಕಾರದ ಕಾನೂನಿನಲ್ಲಿ ಬರಪೀಡಿತ ಎಂದು ಘೋಷಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ ಕೇಂದ್ರ ಸರ್ಕಾರದ ಅದರ ನಿಯಮದಲ್ಲೇ ಮಾಡಬೇಕು ಆದ್ದರಿಂದ ಎರಡನೇ ಹಂತದ 50 ತಾಲೂಕುಗಳನ್ನು ಮತ್ತೆ ಸರ್ವೆ ಮಾಡಿಸಿ ಬರ ಬೇಡಿತ ಪ್ರದೇಶ ಎಂದು ಘೋಷಣೆ ಮಾಡಲು ಈ ತಿಂಗಳ ಎರಡನೇ ವಾರದಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ನೀಡಿ ಮನವಿ ಸಲ್ಲಿಸಲಾಗುವುದು.

ಕೇಂದ್ರ ಸರ್ಕಾರದಿಂದ ತಂಡ ವೀಕ್ಷಣೆ ಮಾಡಿದ ನಂತರ ಕೇಂದ್ರಕ್ಕೆ ವರದಿ ನೀಡಿ ನಂತರ ಅದರ ಸತ್ಯ ಸತ್ಯತೆಯನ್ನು ನೋಡಿ ಕೇಂದ್ರ ಸರ್ಕಾರ ಬರ ಪರಿಹಾರ ನೀಡುವುದು. ಸದ್ಯಕ್ಕೆ ರೈತರಿಗೆ ರಾಜ್ಯ ಸರ್ಕಾರ ಯಾವ ರೀತಿ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿಗಳು ಗದಗ ಜಿಲ್ಲಾ ಪ್ರವೇಶ ಕೈಗೊಂಡರೆ ನಾನು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ. ಇಡೀ ರಾಜ್ಯದಲ್ಲಿ ಎಲ್ಲಾ ಸಚಿವರು ಬರ ವೀಕ್ಷಣೆ ಮಾಡುವಂತೆ ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ ಅದರಂತೆ ವೀಕ್ಷಣೆ ಮಾಡಿ ಸಚಿವರ ಸಭೆಯಲ್ಲಿ ರೈತರಿಗೆ ಯಾವ ರೀತಿ ಸಹಾಯ ಮಾಡಬೇಕು ಬೆಳೆ ವಿಮೆಯ ಕಂಪನಿ ಗಳ ಜೊತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದರು.
ಮುಸುಕಿನ ಜೋಳಕ್ಕೆ ಬಿಳಿ ಸುಳಿರೋಗಕ್ಕೆ ವಿಮೆ ಪಾವತಿ ಮಾಡುವುದಿಲ್ಲ ಎಂದು ವಿಮಾ ಕಂಪನಿಗಳು ಹೇಳುತ್ತಿವೆ ಎಂದು ರೈತರ ಪ್ರಶ್ನೆಗೆ ಈ ಬಗ್ಗೆ ವಿಮಾ ಕಂಪನಿಗಳ ಜೊತೆ ಮಾತನಾಡಿ ರೈತರ ಸಮಸ್ಯೆ ಪರಿಹಾರಿಸುವಂತೆ ಸಲಹೆ ಸೂಚನೆ ನೀಡಲಾಗುವುದು. ಈಗಿನ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ ಗೆ ಮಳೆ ಬರುತ್ತಿತ್ತು ಮುಂಗಾರಿನ ಬೆಳೆ ಬೆಳೆಯುತ್ತಿದ್ದರು ಆದರೆ ಇಂಟರ್ನ್ಯಾಷನಲ್ ಹವಮಾನ ವರದಿ ಪ್ರಕಾರ ಸೆಪ್ಟೆಂಬರ್ ನ ಮೊದಲನೇ ಅಥವಾ ಎರಡನೇ ವಾರದಲ್ಲಿ ಸಂಪೂರ್ಣ ಮಳೆ ಭಾರದಿರುವ ಸಾಧ್ಯತೆಯಾಗಲಿದೆ

ಸೂಪರ್ ಎಲಿನೊ ಎಫೆಕ್ಟ್ ನಿಂದ ಮಳೆ ಬರುವ ನಿರೀಕ್ಷೆ ಇಲ್ಲ 125 ವರ್ಷದ ನಂತರ ಈ ಎಫೆಕ್ಟ್ ಆಗಿದೆ ಇದರಿಂದ ಮಳೆ ಬರುವ ಆಶ್ವಾಸನೆ ಇಲ್ಲ ಇದರಿಂದ ಮುಂದೆ ರೈತರಿಗೆ ಯಾವ ರೀತಿ ರಾಜ್ಯ ಸರ್ಕಾರ ಸಹಾಯ ಮಾಡಬೇಕು ಎಂಬುದನ್ನು ಸರ್ಕಾರ ತೀರ್ಮಾನ ಮಾಡಲಿದೆ. ಮೋಡ ಬಿತ್ತನೆಯಿಂದ ಎಷ್ಟರಮಟ್ಟಿಗೆ ಸಹಾಯವಾಗುತ್ತೆ ಎಂಬುದುನ್ನು ನೋಡಬೇಕು. ತಾಂತ್ರಿಕತೆಯಿಂದ ಹೆಚ್ಚು ಮಳೆ ಬಾರದಿದ್ದರೂ ತುಂತುರು ಮಳೆ ಬೀಳಬಹುದು ಇದರಿಂದ ಬೆಳೆಗೆ ಮಳೆ ನೀರು ಸಹಾಯವಾಗುತ್ತದೆ ಆದ್ದರಿಂದ ಸರ್ಕಾರ ಒಪ್ಪಿಗೆ ನೀಡಿದೆ.
ಮೈಸೂರು ಜಿಲ್ಲೆಯ ಹುಣಸೂರು ಸೇರಿದಂತೆ ಒಟ್ಟು ಆರು ತಾಲೂಕುಗಳಲ್ಲಿ ತಂಬಾಕು ಬೆಳೆ ಕುಂಠಿತಗೊಂಡಿದೆ ಹುಣಸೂರು ತಾಲೂಕಿನಲ್ಲಿ 16 ಸಾವಿರ ಹೇಕ್ಟರ್ ಪ್ರದೇಶದಲ್ಲಿ ತಂಬಾಕು ಕುಂಟಿತಗೊಂಡಿದ್ದು ಜಿಲ್ಲೆಯ ಒಟ್ಟು ತಂಬಾಕು ಬೆಳೆಯುವ ಪ್ರದೇಶದ ಕುಂಠಿತವಾಗಿರುವ ಬಗ್ಗೆ ರಾಜ್ಯ ಸರ್ಕಾರದಿಂದ ತಂಬಾಕು ರೈತರಿಗೆ ಏನು ಸಹಾಯ ಮಾಡಬಹುದು ಎಂಬುದನ್ನು ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಹುಣಸೂರಿನ ಕಂದಾಯ ಇಲಾಖೆಯ ಮಿನಿವಿಧಾನಸೌಧವು ಮಳೆಯಿಂದ ಸೋರುತ್ತಿರುವ ಬಗೆ ಪ್ರಶ್ನೆ ಮಾಡಿದಾಗ ಇದರ ಪ್ರಸ್ತಾವನೆ ಸಲ್ಲಿಸುವ ಬಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು ಸ್ಥಳದಲ್ಲೇ ಇದ್ದ ಶಾಸಕ ಜಿ.ಡಿ. ಹರೀಶ್ ಗೌಡ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರಿಗೆ ತಿಳಿಸಿದರು.

ಶಾಸಕ ಜಿ.ಡಿ. ಹರೀಶ್ ಗೌಡ, ಮಾಜಿ ಶಾಸಕ ಎಚ್ ಪಿ ಮಂಜುನಾಥ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮರ್, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ಹುಣಸೂರು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರ್ ಮಂಜುನಾಥ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹೊಂಗಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್, ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಇದ್ದರು.








