ಜಯಲಲಿತಾ…. ಕನ್ನಡದ ನಟಿ ತಮಿಳುನಾಡಿನಲ್ಲಿ ಮಿಂಚಿ ಸಿಎಂ ಆಗಿದ್ದೇಗೆ? ಸಿನಿಮಾ, ರಾಜಕೀಯ ಬದುಕು ಹೇಗಿತ್ತು?

ಕರ್ನಾಟಕದಲ್ಲಿ ಹುಟ್ಟಿ ಸಿನಿಮಾ ರಂಗ ಸೇರಿ ತಮಿಳುನಾಡಲ್ಲಿ ಮೆರೆದು ಸಿಎಂ ಆಗಿ ಇತಿಹಾಸದ ಪುಟಗಳಲ್ಲಿ ಛಾಪು ಮೂಡಿಸಿ ಮರೆಯಾದ ಜಯಲಲಿತಾ ಅವರನ್ನು ಮರೆಯಲು ಯಾರಿಗೂ ಸಾಧ್ಯವಿಲ್ಲ… ಅವರ ತಾಯಿ ಕಲಾವಿದೆಯಾಗಿದ್ದರಿಂದ ಮಗಳು ಜಯಲಲಿತಾ ಅವರಿಗೆ ಕಲೆ ಒಲಿದು ಬಂದಿತ್ತು… ಮೊದಲಿಗೆ ನೃತ್ಯಗಾರ್ತಿಯ ಚಿಕ್ಕ ಪಾತ್ರ ಮಾಡುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ಮತ್ತೆ ತಿರುಗಿ ನೋಡಲಿಲ್ಲ… ಅವರ ಸಿನಿಮಾ ಬದುಕಿನ ಕುರಿತಂತೆ ಕುಮಾರಕವಿ ನಟರಾಜ್ ಅವರು ಇಲ್ಲಿ ಮೆಲುಕು ಹಾಕಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…
ಇದನ್ನೂ ಓದಿ: ಸಿನಿಮಾರಂಗದಲ್ಲಿ ವೇದವಲ್ಲಿ ನಟಿ ಎನ್.ಆರ್.ಸಂಧ್ಯಾ ಆಗಿ ಮಿಂಚಿದ್ದು ಹೇಗೆ?
ಇದು ಒಂಥರಾ ಕುತೂಹಲದ ಸ್ಟೋರಿ.. ಸಿನಿಮಾರಂಗದಲ್ಲಿ ನಟಿಯರ ಬಗ್ಗೆ ನೋಡುತ್ತಾ ಹೋದರೆ ಈ ಹಿಂದೆ ತೆರೆಯಲ್ಲಿ ಮಿಂಚಿ ನಮ್ಮಿಂದ ದೂರ ನಟಿಯರ ಬದುಕು ಮತ್ತು ಸಿನಿಮಾರಂಗದ ಅವರ ಸಾಧನೆಯನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಇಂತಹ ಹೆಮ್ಮೆ ಪಡುವ ನಟಿಯರಲ್ಲಿ ಜಯಲಲಿತಾ ಒಬ್ಬರಾಗಿದ್ದಾರೆ. ರಾಜಕೀಯದಾಚೆಗೆ ನಟಿಯಾಗಿ ನೋಡುವುದಾದರೆ ಅವರ ಸಾಧನೆ ಗಮನಾರ್ಹವೇ…

ವೇದವಲ್ಲಿ ಉರುಫ್ ಸಂಧ್ಯಾ ಮತ್ತು ಕೋಮಲವಲ್ಲಿ ಉರುಫ್ ಜಯಲಕ್ಷ್ಮಿ ಅಲಿಯಾಸ್ ಜಯಲಲಿತ ಇವರಿಬ್ಬರೂ ತಾಯಿ ಮತ್ತು ಮಗಳು. ಈ ಇಬ್ಬರೂ ಮಂಡ್ಯ ಜಿಲ್ಲೆ ಮೇಲುಕೋಟೆ ವಾಸವೂ ಸೇರಿದಂತೆ ಮೈಸೂರು ಹಾಗೂ ಬೆಂಗಳೂರು ನಗರ ಗಳಲ್ಲೂ ಸಹ ಅನೇಕ ವರ್ಷ ಕಾಲ ವಾಸವಿದ್ದರು, ಬದುಕು ಕಟ್ಟಿಕೊಂಡರು. ಜಯಲಲಿತಾ ಮೂಲ ಹೆಸರು ಕೋಮಲವಲ್ಲಿ ಉರುಫ್ ಮಾಧವಿಲತಾ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಮೇಲೆ ಜಯಲಲಿತ/ಜಯಲಕ್ಷ್ಮಿ ಎಂದು ಪುನರ್ ನಾಮಕರಣ ಮಾಡಲಾಯಿತು!
ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
ಕನ್ನಡದ ಮೊಟ್ಟಮೊದಲ ಸಂಪೂರ್ಣ ಕಲರ್ ಸಿನಿಮಾ ಅಮರಶಿಲ್ಪಿ ಜಕಣಾಚಾರಿ ಚಿತ್ರದಲ್ಲಿ ನೃತ್ಯಗಾರ್ತಿಯ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಯಲಲಿತಾ ಉರುಫ್ ಜಯಲಕ್ಷ್ಮಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕಲ್ಯಾಣಕುಮಾರ್ ಜತೆಗೆ ಹೀರೋಯಿನ್ ಆಗಿ ನಟಿಸಿದ ಪ್ರಥಮ ಕನ್ನಡ ಫಿಲಂ ಚಿನ್ನದಗೊಂಬೆ. ಕಲ್ಯಾಣ್‍ಕುಮಾರ್ ಜತೆಗೆ ಹತ್ತಾರು ಕನ್ನಡ ಚಿತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು.

ಆ ನಂತರ ಕಲ್ಯಾಣಕುಮಾರ್ ಚಿತ್ರಗಳಲ್ಲದೇ ಇತರೆ ನಾಯಕ ನಟರ ಜತೆ ಹೀರೋಯಿನ್ ಮತ್ತು ಪೋಷಕ ಪಾತ್ರದಲ್ಲಿ ಅಭಿನಯಿಸಿ ಖ್ಯಾತ ನಟಿ ಎನಿಸಿದರು. ಹಲವಾರು ಚಿತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಕೆಲವಾರು ಪ್ರಶಸ್ತಿಯನ್ನೂ ಪಡೆದರು. ಜಯಲಲಿತಾರ ತಾಯಿ ಹಿರಿಯ ನಟಿ ಸಂಧ್ಯಾ ರಣಧೀರ ಕಂಠೀರವ ಮುಂತಾದ ರಾಜ್‌ಕುಮಾರ್ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಜಯಲಲಿತಾ ಮತ್ತು ಇವರ ತಾಯಿ ಸಂಧ್ಯಾ ಇಬ್ಬರೂ ಒಟ್ಟಿಗೇ ನಟಿಸಿದ್ದ ರಾಜ್‍ಕುಮಾರ್ ಅಭಿನಯದ ಏಕೈಕ ಚಿತ್ರ ಶ್ರೀಶೈಲಮಹಾತ್ಮೆ!
ಇದನ್ನೂ ಓದಿ: ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ…
ದಕ್ಷಿಣ ಭಾರತದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾದ ರಮೇಶ್ ಮೂವೀಸ್ ರವರ ಬ್ಯಾನರ್ ಅಡಿಯಲ್ಲಿ ಟಿ.ಪಿ. ವೇಣುಗೋಪಾಲ್ ನಿರ್ಮಾಪಕರಾಗಿ, ದಿಗ್ಗಜ ಸಿದ್ಧಲಿಂಗಯ್ಯ ನಿರ್ದೇಶಕರಾಗಿ ತೆರೆಗೆ ಬರಬೇಕಾಗಿದ್ದ ಒಂದು ಸಿನಿಮಾದ ಘಟನೆ ಇಲ್ಲಿದೆ.. ಚೆಲ್ಲಿದರಕ್ತ ಕಲರ್ ಚಿತ್ರದಲ್ಲಿ ರಾಜ್‍ಕುಮಾರ್ ಜಯಲಲಿತಾ, ಹೀರೊ-ಹೀರೊಯಿನ್ ಆಗಿ ಅಭಿನಯಿಸುವ ಬಗ್ಗೆ ಪಕ್ಕಾ ತೀರ್ಮಾನವಾಗಿ ಅಂತಿಮ ಮಾತುಕತೆ ಮುಗಿದಿತ್ತು. ಈ ಬಗ್ಗೆ ಇಬ್ಬರಿಂದಲು ಕಾಲ್ ಶೀಟ್ ಪಡೆದು ಮುಹೂರ್ತ ದಿನವನ್ನೂ ಗೊತ್ತುಪಡಿಸಿ ಪಬ್ಲಿಸಿಟಿಯೂ ಸಹ ಜಬರ್ರಾಗಿ ನಡೆದಿತ್ತು! ಆದರೆ (ದುರ)ಅದೃಷ್ಟವಶಾತ್ ಈ ಸಿನಿಮಾ ನಿರ್ಮಾಣ ಕಾರ್ಯವು ಯಶಸ್ವಿ ಆಗದೆ ಚಿತ್ರದ ಮುಹೂರ್ತ ನಡೆಯಲೇ ಇಲ್ಲ. ಹೀಗಾಗಿ “ಚೆಲ್ಲಿದರಕ್ತ”ಸಿನಿಮ ಸೆಟ್ ಏರಲಿಲ್ಲ! ಬಿಡುಗಡೆಯೂ ಆಗಲಿಲ್ಲ?

ಜಯಲಲಿತಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಹೀರೋಯಿನ್. ದಕ್ಷಿಣ ಭಾರತದ ಐದು ಭಾಷೆಗಳ 200ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತರಾದರು. ತಮಿಳುನಾಡಿನ ಜನಪ್ರಿಯ ಸಿ.ಎಂ.ಎನಿಸಿದ್ದ ಖ್ಯಾತ ನಟ MGR ಜತೆ 25ಕ್ಕೂ ಹೆಚ್ಚಿನ ತಮಿಳು ಚಿತ್ರಗಳಲ್ಲಿ ನಟಿಸಿ ಧೂಳೆಬ್ಬಿಸಿದ್ದ ಪುರಚ್ಚಿ ತಲೈವಿ ಬಿರುದಾಂಕಿತ ಡಾ.ಜಯಲಲಿತಾ MGR ನಂತರ ತಮಿಳುನಾಡು ಮುಖ್ಯಮಂತ್ರಿಯಾಗಿ ಯಶಸ್ವಿ ಆಡಳಿತ ನೀಡುವ ಮೂಲಕ ರಾಜಕೀಯವಾಗಿ ಜನಪ್ರಿಯ ಮುತ್ಸದ್ಧಿ ಎನಿಸಿದ್ದರು!
ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
ಇವತ್ತಿಗೂ ದಾಖಲೆಯಾಗಿ ಉಳಿದಿರುವ ಇವರ ಉಡುಗೆ ತೊಡುಗೆ ಬಗ್ಗೆ ಒಂದು ಕಿರುನೋಟ ಹೀಗಿದೆ… ಅಂದಾಜು10,000ಕ್ಕೂ ಹೆಚ್ಚಿನ ರೇಷ್ಮೆ ಸೀರೆ, 700 ಜೊತೆ ಪಾದರಕ್ಷೆ, 300 ಕ್ಕೂ ಹೆಚ್ಚಿನ ಕೈಗಡಿಯಾರ, ಚಿನ್ನ ಬೆಳ್ಳಿ ವಜ್ರ ನವರತ್ನಖಚಿತ ಆಭರಣಗಳು ಒಡವೆಗಳು ಕಿಲೋಗಟ್ಟಲೆ ಇತ್ತಂತೆ?! ಜೀವ-ಜೀವನ ತೊರೆದು ಹೊರಟುಹೋದ ಈಕೆ ತಮ್ಮ ಹಿಂದೆ ಬಿಟ್ಟು ಹೋಗಿದ್ದೇನು ಗೊತ್ತೇ? ಇಲ್ಲಿದೆ ಓದಿ… ಮದುವೆಇಲ್ಲ ಮಕ್ಕಳಿಲ್ಲ ಇದ್ದ ಒಬ್ಬಳೇ ದತ್ತುಪುತ್ರಿಯ ಸುದ್ದಿಯಂತೂ ಇಲ್ಲವೇ ಇಲ್ಲ.ತನ್ನ ಹೊರತು ಬೇರೆಯವರ ಮಾತುಕೇಳದ ಸರ್ವಾಧಿಕಾರ? (ದುರ್)ಆಸೆಯಿಂದ ಸಂಪಾದಿಸಿದ ಸಾವಿರಾರು ಕೋಟಿ ಧನಕನಕ ಎಕರೆಗಟ್ಟಲೆ ಭೂಮಿ ಇವೆಲ್ಲಾ ಇವರೊಂದಿಗೆ ಹೋಗಲೇ ಇಲ್ಲ?!

ರಾಜಕೀಯದಲ್ಲಿ ಜನರ ಹಣದಿಂದ ಅನೇಕ ಉತ್ತಮ ಜನಕಲ್ಯಾಣ ಯೋಜನೆಗಳನ್ನು ಮಾಡಿದ್ದರು. ಆದರೆ ತನ್ನ ಸ್ವಂತ ಸಂಪಾದನೆಯ ಒಂದು ರೂಪಾಯನ್ನೂ ಜನರಿಗೆ ನೀಡಿರಲಿಲ್ಲ. ಸಮಾಜ ಕಲ್ಯಾಣ ಕಾರ್ಯಕ್ಕಾಗಿ ಉಪಯೋಗಿಸಲೂ ಇಲ್ಲ.. ಜಯಲಲಿತ ಸಂಪಾದಿಸಿದ ಆಸ್ತಿ/ಸಾಮ್ರಾಜ್ಯವನ್ನು ನೋಡುತ್ತಾ ಹೋದರೆ.. ತಿರುನೆಲ್ವೇಲಿ – 1260 ಎಕರೆ, ವಾಲಾಜಾ ಪೇಟೆ – 200 ಎಕರೆ, ಉತ್ತುಕೋಟೆ – 100 ಎಕರೆ, ಸಿರುತ್ತವೂರ್ – 25 ಎಕರೆ, ಕಾಂಚೀಪುರಂ – 300 ಎಕರೆ, ಜೀಡಿಮೆಟ್ಲ ದ್ರಾಕ್ಷಿ ತೋಟ – 14.5 ಎಕರೆ, ಕೊಡನಾಡ್ ಟೀ ಎಸ್ಟೇಟ್ – 1600ಎಕರೆ+ಬಂಗಲೆಗಳು,
ಇದನ್ನೂ ಓದಿ:ಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮ…
ವೇದಾ ನಿಲಯಂ(ಪೋಯಸ್ ಗಾರ್ಡನ್) ₹100 ಕೋಟಿ ಮೌಲ್ಯದ ಅರಮನೆ. ಚೆನ್ನೈ ಮತ್ತು ಹೈದರಾಬಾದ್ ನಗರದಲ್ಲಿ ಇರುವ ವಾಣಿಜ್ಯ ಕಟ್ಟಡಗಳು, ಬೆಳ್ಳಿ – 800+ ಕೆಜಿ, ಬಂಗಾರ – 82 ಕೆಜಿ, ಸೀರೆಗಳು 10,500, ಚಪ್ಪಲಿಗಳು 750 ಜೋಡಿ, ವಾಚುಗಳು/ಕೈಕಡಗಗಳು/ಬ್ರೇಸ್ಲೆಟ್ 190+ ಟೊಯೋಟಾ ಪ್ರಾಡೊ, ಜೀಪುಗಳು, ಟೆಂಪೋ ಟ್ರಾವೆಲರ್ ಇತ್ಯಾದಿ 25+ ಕಾರುಗಳು *ಬೇನಾಮಿಆಸ್ತಿಗಳು ಇಲ್ಲಿ ಸೇರಿಲ್ಲ! ಇವೆಲ್ಲವನ್ನೂ ಬಿಟ್ಟು ಕೊನೆಗೆ ಸಾಧಾರಣ ಶವದ ವಾಹನದಲ್ಲಿ ಪ್ರಯಾಣಿಸಿ 6×3 ಅಡಿ ಜಾಗದ ಸಾರ್ವಜನಿಕ ರುದ್ರಭೂಮಿಯಲ್ಲಿ ಶಾಶ್ವತ ಸ್ಥಾನ ಪಡೆದರು?!

ತನ್ನಲ್ಲಿದ್ದ ಸಾವಿರಾರು ಎಕರೆ ಸ್ವಯಾರ್ಜಿತ ಭೂಮಿಯ ಆಸ್ತಿಗಳನ್ನು ಬಿಟ್ಟುಹೋದ ನತದೃಷ್ಟ ಸರ್ವಾಧಿಕಾರಿ? ಈಗ ಕೇವಲ ನೆನಪಾಗಿ ಮಾತ್ರ ಉಳಿದಿದ್ದಾರೆ. ನಮಗೆ ಇವರ ಜೀವನದ ಪಾಠ ಕಲಿಸುವುದಿಷ್ಟೆ: ನಮ್ಮ ಪ್ರಾಣ ಇರುವಾಗ ನಾವೇ ದೊಡ್ಡವರೆಂದು ಭಾವಿಸುತ್ತೇವೆ ಆದರೆ ಭಗವಂತ ಕರೆದಾಗ ಒಂದು ಕ್ಷಣದಲ್ಲಿ ಎಲ್ಲವೂ ಅಂತ್ಯ. ವೈದ್ಯರು ಸಂಪತ್ತು ಅಧಿಕಾರ ಬಂಧು-ಬಳಗ ಸ್ನೇಹಿತರು ಅನುಯಾಯಿಗಳು ಯಾರೂ ಇರುವುದಿಲ್ಲ, ಕೊನೆಯ ಕ್ಷಣದಲ್ಲಿ ಸಹಾಯಕ್ಕೆ ಯಾವುದೂ ಬರುವುದಿಲ್ಲ…?!
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ…
ಜಯಲಲಿತ ನಟಿಸಿರುವ ಕನ್ನಡ ಫಿಲಂಸ್ ಹೀಗಿದೆ… ರಾಣಿಹೊನ್ನಮ್ಮ(ಬಾಲನಟಿ-1960) ಶ್ರೀಶೈಲಮಹಾತ್ಮೆ(ಕುಮಾರಿ ಜಯಲಕ್ಷ್ಮಿಹೆಸರಿಂದ) ಅಮರಶಿಲ್ಪಿಜಕಣಾಚಾರಿ, ಚಿನ್ನದಗೊಂಬೆ, ಮನೆಅಳಿಯ, ಮಾವನಮಗಳು, ನನ್ನಕರ್ತವ್ಯ, ಬದುಕುವದಾರಿ (ಅಂತಿಮ ಕನ್ನಡ ಫಿಲಂ) ಮೊದಲಾದವುಗಳಾಗಿವೆ..








