ArticlesLatest

ಶ್ರೀರಾಮನೇ ನಿನಗಿದೋ ನಮ್ಮ ಭಕ್ತಿಯ ನಮನ…  ಜೈ ರಾಮ ಜಯ ಜಯ ರಾಮ…

ನವಮಿಯ ಶ್ರೀರಾಮ

ಸಂವತ್ಸರ ನವಮಿ ಚಾಂದ್ರಮಾನ-

ದಂದು ವೈಕುಂಠದೊಡೆಯ ವಿಷ್ಣುವಿನ

ಏಳನೇ ಅವತಾರದ ಜನನ

ಅಯೋಧ್ಯೆ ದಶರಥ ನಂದನ

ಆಚರಣೆ ಇಂದು ನಿನ್ನಜನ್ಮದಿನ

 

ಪಿತೃವಾಕ್ಯದ ಪರಿಪಾಲಕ ರಾಮ

ಸೋದರಾಗ್ರಜ ಘನತೆವೆತ್ತ ಸೋಮ

ಆದರ್ಶಕ್ಕೆ ಅನ್ವರ್ಥವೀ ನಾಮ

ಮರ್ಯಾದಾ ಪುರುಷೋತ್ತಮ

ಜಯ ವಿಜಯ ಅಜೇಯ ರಾಮ

ಅಖಂಡ ಪ್ರಚಂಡ ಅಮೋಘ ರಾಮ

ಅದ್ಭುತ ಅದೃಶ್ಯ ಅನನ್ಯ ರಾಮ

ಅದ್ವಿತೀಯ ಅನಂತಾನಂತ ರಾಮ

ಅಷ್ಟಾವಧಾನ ಅನುಪಮ ರಾಮ

ಅಪೂರ್ವಮೂರ್ತ ಅಪ್ರತಿಮ ರಾಮ

ಅಮಿಥ್ಯ ಅಪಥ್ಯ ನೇಪಥ್ಯ ರಾಮ

ಅಭೀಷ್ಟ ಅಷ್ಟಶಕ್ತ ಅಚಲ ರಾಮ

ಸುಂದರ ಸುಮುಖ ವಿರಳ ರಾಮ

ಅಭಯ ಹಸ್ತದ ಸಜ್ಜನ ರಾಮ

ದಾರಿದ್ರ್ಯರಹಿತ ಅಕ್ಷಯ ರಾಮ

ದಶಕಂಠನ ಗೌರವಿಸಿದ ದಯಾಳರಾಮ

 

ಅಧರ್ಮ ರಹಿತ ಸಕ್ರಮ ರಾಮ

ಅಸಹ್ಯ ರಹಿತ ಅನೃತ ರಾಮ

ಅಹಂ ರಹಿತ ಸರಳ ರಾಮ

ಆಶ್ರಯ ಉಲ್ಲಾಸ ಆನಂದ ರಾಮ

ಕನಕಾಭಿಷಕ್ತಾ ಕನಕಾಂಬರ ರಾಮ

ಕಣ್ಮನ ತಣಿಸೊ ಕಸ್ತೂರಿ ರಾಮ

ನಂಬಿದರೆ ಕೈಬಿಡದ ಕಲ್ಯಾಣ ರಾಮ

ಕೋಟಿಗೊಬ್ಬ ಕೋಟೆಗೆದ್ದ ರಾಮ

ಕೋಟ್ಯಂತರ ಪೂಜಿತ ಕೌಸಲ್ಯ ರಾಮ

ರಘುಕುಲ ತಿಲಕ ರಘುವಂಶ ರಾಮ

ತ್ರೇತಾಯುಗದ ಕ್ಷಾತ್ರವರಿಷ್ಠ ರಾಮ

ಸೂರ್ಯವಂಶಿ ಶ್ರೇಷ್ಠಜೇಷ್ಠ ರಾಮ

ಪಿತೃವಾಕ್ಯದ ಪರಿಪಾಲಕ ರಾಮ

ಏಕಪತ್ನೀವ್ರತದ ಸರಿಪಾಲಕ ರಾಮ

ಸೀತಾರಾಮ ಕೋದಂಡ ರಾಮ

ಜಯರಾಮ ವಿಜಯಶ್ರೀ ರಾಮ

ಪಟ್ಟುಬಿಡದ ಪಕ್ಕಾ ಪರಂಧಾಮ

ಸಚಲ ಸಂಚಲನ ಪಟ್ಟಾಭಿ ರಾಮ

ಅಚಲ ಬಲಛಲ ಪ್ರಬಲ ರಾಮ

ಭಕ್ತರಭಕ್ತ ಭಕ್ತಿಪ್ರಧಾನ ರಾಮ

ಯೋಗಾಯೋಗ ಶಕ್ತಯುಕ್ತ ರಾಮ

 

ಹನುಮ ಸುಗ್ರೀವನ ವಾಲ್ಮೀಕಿರಾಮ

ನರವಾನರ ಕ್ಷೇಮದ ಹವ್ಯಕ ರಾಮ

ಕೃಷ್ಣವರ್ಣ ಸುಂದರ ಸುಗುಣ ರಾಮ

ಆಚಂದ್ರಾರ್ಕ ಅಜರಾಮರ ಮಾಮ

ಸುರಾಸುರ ಪೂಜಿತ ಪಾವನ ರಾಮ

ಹೇ..ರಾಮ ಓ..ರಾಮ ಜಯರಾಮ

ಆಪ್ಯಾಯಮಾನ ರಾಮನ ನಾಮ

ಸಕಲಲೋಕ ವಂದ್ಯ ಜೈ ಶ್ರೀರಾಮ

ಧನ್ಯೋಸ್ಮಿ ನನ್ನ ಮಾನವ ಜನುಮ?!

admin
the authoradmin

13 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ