ಮೈಸೂರು: ಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ 33ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ವಿಭಿನ್ನ ಮತ್ತು ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಿಸ್ಟರ್ ತೆರೆಸಾ, ಸಿಸ್ಟರ್ ಗ್ರೇಟಾ, ಸಿಸ್ಟರ್ ಅಲ್ಫೋನ್ಸಾ, ಡಾ. ಸಬಿಹಾ ಭೂಮಿ ಗೌಡ, ಸೇಂಟ್ ಜೋಸೆಫ್ ನರ್ಸಿಂಗ್ ಕಾಲೇಜ್ ಪ್ರಾಂಶುಪಾಲರಾದ ಮಮತಾ, ಮಹಾದೇವ ಸ್ವಾಮಿ, ಚಿಕ್ಕಜವರಯ್ಯ ಆಗಮಿಸಿ ಕಳೆಕಟ್ಟಿದರು.

ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ವಿವಿಧ ಸಾಂಸ್ಕೃತಿಕ ಮನೋರಂಜನೆಯ ಕಾರ್ಯಕ್ರಮ ಗಳನ್ನು ನಡೆದು ನೆರೆದವರ ಮನರಂಜಿಸಿತು.

ಸಿಸ್ಟರ್ ಶಾಂತಿರವರು ಜ್ಯೋತಿ ಸಮಾಜ ಕಲ್ಯಾಣ ಕೇಂದ್ರದಲ್ಲಿ ನಡೆದಂತಹ ಒಂದು ವರ್ಷದ ವರದಿಯನ್ನು ಅಚ್ಚುಕಟ್ಟಾಗಿ ಮಂಡಿಸಿದರೆ, ಮುಖ್ಯ ಅತಿಥಿ ಸಿಸ್ಟರ್ ಗ್ರೇಟಾ ರವರು ಮಾತನಾಡಿ ಮಹಿಳೆಯರ ಉತ್ತಮ ಮತ್ತು ಗೌರವಯುತ ಜೀವನದ ಕುರಿತು ಮಾತನಾಡಿದರು ಮಹಿಳಾ ದಿನವೂ ಕೇವಲ ಒಂದು ದಿನದ ಆಚರಣೆ ಮಾತ್ರವಲ್ಲ ಮಹಿಳೆಯರನ್ನು ಪ್ರತಿದಿನವೂ ಅಮೂಲ್ಯವಾಗಿ ಗೌರವದಿಂದ ನಡೆಸಬೇಕೆಂದು ತಿಳಿಸಿಕೊಟ್ಟರು .

ಡಾ.ಮಮತಾ ರವರು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು ಆರೋಗ್ಯವೇ ನಮ್ಮ ಜೀವನದ ಅಮೂಲ್ಯ ಸಂಪತ್ತು ಎಂಬುದನ್ನು ನೆನಪಿಸಿ ನಿಯಮಿತ ವ್ಯಾಯಾಮ ಸರಿಯಾದ ಆಹಾರ ಮತ್ತು ವಿಶ್ರಾಂತಿಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ಡಾ. ಸಬಿಹಾ ಭೂಮಿಗೌಡ ಅವರು ಇಂದಿನ ಜಗತ್ತಿನಲ್ಲಿ ಮಹಿಳೆಯರ ಸ್ಥಿತಿಗತಿಗಳ ಕುರಿತು ಮಾತನಾಡಿ ಸಮಾಜದಲ್ಲಿ ಇನ್ನೂ ಕೆಲವು ಕಡೆಗಳಲ್ಲಿ ಮಹಿಳೆಯರನ್ನು ಹೇಗೆ ವರ್ತಿಸಿಕೊಳ್ಳಲಾಗುತ್ತದೆ ಎಂಬುದನ್ನು ತಿಳಿಸಿದರು.

ಚಿಕ್ಕಜವರಯ್ಯ ಅವರು ಎರಡು ಬಡ ಮಹಿಳೆಯರನ್ನು ಗುರುತಿಸಿ ಅವರಿಗೆ ಹೊಲಿಗೆ ಯಂತ್ರಗಳನ್ನು ಪ್ರಾಯೋಜಿಸಿದರು ತಮ್ಮ ಭಾಷಣ ದಲ್ಲಿ ಅವರು ಎಲ್ಲಾ ಮಹಿಳೆಯರು ಸಹ ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಬೇಕೆಂದು ಪ್ರೇರಣೆ ನೀಡಿದರು.

ಹೊಲಿಗೆ ತರಬೇತಿಯ ವಿದ್ಯಾರ್ಥಿನಿಯರು ತಮ್ಮ ನಾಟಕದ ಮೂಲಕ ಸಮಾಜದಲ್ಲಿ ನಡೆಯು ತ್ತಿರುವ ಮಾನವ ಕಳ್ಳ ಸಾಗಣಿಕೆಯ ಅಪಾಯಗಳನ್ನು ತಿಳಿಸಿ ಮಹಿಳೆ ಯರು ಜಾಗೃತರಾಗಿರಬೇಕು ಎಂಬ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದಂತಹ ಮಹಿಳೆಯರಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಮಹಿಳೆಯರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಚ್ಚುಕಟ್ಟಾಗಿ ಕಾರ್ಯಕ್ರಮವು ಮೂಡಿಬರಲು ಜ್ಯೋತಿ ಸಮಾಜ ಕಲ್ಯಾಣ ಕೇಂದ್ರದ ಕೋ ಆರ್ಡಿನೆಟ್ ರಾದ ಸಿಸ್ಟರ್ ಶಾಂತಿ, ಸಿಸ್ಟರ್ ಸೌಜನ್ಯ ಹಾಗೂ ಅವರ ತಂಡ ಶ್ರಮವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.








