ArticlesLatest

ಮಕ್ಕಳ ಯುಗಾದಿ- ಚಿಣ್ಣರ ತಗಾದಿ… ಹಬ್ಬಹಬ್ಬ, ಯುಗಾದಿಹಬ್ಬ ಹಟ್ಟಿಗೆ ಬಂತು ಹಳ್ಳಿಗೆ ಬಂತು

ಯುಗಾದಿ ಎಂದರೆ ಸಂಭ್ರಮ.. ಸಡಗರ.. ಮರಗಿಡಗಳು ಹೊಸ ಚಿಗುರಿನೊಂದಿಗೆ ಹೂಬಿಟ್ಟು ಸ್ವಾಗತಿಸುವ  ಕಾಲ.. ವರುಣ ಕೃಪೆ ತೋರಿ ಸುಡುವ ವಾತಾವರಣವನ್ನು ತಂಪಾಗಿಸುವ ಸಮಯ… ಮನೆಯಲ್ಲಿ ಮಕ್ಕಳಿಗೆ ಹಬ್ಬದ ಹಿಗ್ಗು.. ಹೀಗೆ ಎಲ್ಲವನ್ನೂ ಪದಗಳಲ್ಲಿಯೇ ಜೋಡಿಸಿ ಕವನವಾಗಿಸಿ ನಮ್ಮ ಮುಂದಿಟ್ಟಿದ್ದಾರೆ ಕುಮಾರಕವಿ ನಟರಾಜ್ ಅವರು…

ಹಬ್ಬಹಬ್ಬ, ಯುಗಾದಿಹಬ್ಬ

ಹಟ್ಟಿಗೆ ಬಂತು ಹಳ್ಳಿಗೆ ಬಂತು

ನಾಡಿಗೆ ಬಂತು ದೇಶಕೆ ಬಂತು

ಬಂತೋ ಬಂತು ಎಲ್ರಿಗು ಬಂತು

ಹಬ್ಬಹಬ್ಬ, ಯುಗಾದಿಹಬ್ಬ

ಅವ್ವನು, ಎಣ್ಣೆಸ್ನಾನ ಮಾಡಿಸಿದಳು

ಅಕ್ಕನು, ಹೊಸಾಬಟ್ಟೆ ತೊಡಿಸಿದಳು

ಅಪ್ಪನು, ಮಾವುತೋರಣ ಕಟ್ಟಿದನು

ಅಣ್ಣನು, ಕಾಯಿಬೆಲ್ಲವ ತಂದಿಟ್ಟನು

ಎಲ್ಲಾಸೇರಿ ದೇವರಪೂಜೆ ಮಾಡಿದೆವು

ಬೇವು-ಬೆಲ್ಲ ಒಟ್ಟಿಗೇ ತಿಂದು

ಸಿಹಿ-ಕಹಿ ಜೀವನಕೆ ಸಿದ್ಧರಾದೆವು!

….   ……  …….

ತಿಂದೋತಿಂದೆವು ಘಢದ್ದಾಗಿ

ಹುಳಿಯನ್ನ ಹೋಳಿಗೆ, ಕೋಸಂಬ್ರಿ ಶಾವಿಗೆ

ಕುಡಿದೋ ಕುಡಿದೆವು ಸುಸ್ತಾಗಿ

ಕುಡಿಕೆ ಪಾನಕ, ಮಡಕೆ ಮಜ್ಜಿಗೆ

ಕುಣಿದು ಕುಣಿದು ಕುಪ್ಪಳಿಸಿದೆವು

ನಲಿದು ನಲಿದು ನಕ್ಕುನಗಿಸಿದೆವು

….   ……  …….

ಕವಡೇಪಗಡೆ ಗಟ್ಟಾಮನೆಯಾಟ

ಹುಣಿಸೇಬೀಜದ ಅಳಿಗುಳಿಮನೆಯಾಟ

ಒಂಟಿಕಾಲಿನ ಕುಂಟಾಬಿಲ್ಲೆಯಾಟ

ಅವಲಕ್ಕಿಪವಲಕ್ಕಿ ಕಣ್ಣಮುಚ್ಚಾಲೆಯಾಟ

ಇವರ್ಬಿಟ್ ಅವರ್ಬಿಟ್ ಇವರ್ಯಾರು?

ಕೋಲಾಟ ಚೆಂಡಾಟ, ಬರಿಆಟವೋಆಟ

ಕೇಕೇಹಾಕುತ ಕುಣಿದೂ ಕುಪ್ಪಳ್ಳಿಸಿದೆವು

ಯುಗಾದಿಹಬ್ಬ ಹೊಸವರ್ಷ ದಿನವಿಡೀ

ಮಜವೋ ಮಜಾದ ಬೊಂಬಾಟ

….   ……  …….

ಇಂದಿನ ಯುಗಾದಿ ಹಬ್ಬವು

ಮುಂದಿನ ಯುಗಾದಿ ಹಬ್ಬದವರೆಗು

ತರಲೀ ತರಲಿ ಸಮೃದ್ಧಿ ತರಲಿ

ತರಲೀ ತರಲಿ ಸಂತಸ ತರಲಿ

ತರಲಿ ತರಲಿ ನೆಮ್ಮದಿ ತರಲಿ

ತರಲಿ ತರಲಿ ಆರೋಗ್ಯ ತರಲಿ

ಸ್ನೇಹ ವಿಶ್ವಾಸ ಎಲ್ಲರಲ್ಲು ಇರಲಿ

admin
the authoradmin

13 Comments

  • Makkala Ugadi Chinnara Tagadi, superrrrrrr for children.
    Sathyanarayana rtd. Superintendent, uom, residing at Kuvempu Nagar Mysore

  • Makkala Ugadi padyavu tumba chennagide, idannu bareda kavi Natraj avarige dhanyavadagalu sir. Indra, Mandya

  • Natraj kavigalu rachisida Kannada padya tumba chennagide makkalige bahala ishtavayitu. Prema d/o Thimmegowda, Mandya city

  • Natraj kavigalu rachisida Kannada padya tumba chennagide makkalige bahala ishtavayitu. Thanks 👍 sir
    Prema d/o Thimmegowda, Mandya city

  • Makkala Ugadi Chinnara Tabadi emba padya Nanage mattu Namma makkalige bahala ishtavayitu, dhanyavadagalu. Makkaloo kooda nimage illi barediddaare nodi……. tumba tumba chennagide makkalige ishtavayitu ee padya 😀😁⚘👏👏👏🌾😊 🙏 thank you very much uncle…..

    • ಮಕ್ಕಳ ಬಗ್ಗೆಯೂ ಪ್ರೀತಿ ಇರುವ ಕವಿ ನಟರಾಜರು ಬರೆದ ಈ ಪದ್ಯ “ಮಕ್ಕಳಯುಗಾದಿ ಚಿಣ್ಣರತಗಾದಿ” ಬಹಳಚನ್ನಾಗಿದೆ.ಧನ್ಯವಾದ ಸರ್. ವಸಂತಮ್ಮ, ಮಳವಳ್ಳಿ.

  • MAKKALA UGADI CHINNARA TAGADI poetry is really an
    Excellent exciting 👏 fantastic poems for children 😀 👏 thanks, Pruthvi, Bengaluru

  • ಮಕ್ಕಳ ಬಗ್ಗೆಯೂ ಪ್ರೀತಿ ಇರುವ ಕವಿ ನಟರಾಜರು ಬರೆದ ಈ ಪದ್ಯ “ಮಕ್ಕಳಯುಗಾದಿ ಚಿಣ್ಣರತಗಾದಿ” ಬಹಳಚನ್ನಾಗಿದೆ.ಧನ್ಯವಾದ ಸರ್. ವಸಂತಮ್ಮ, ನಿವೃತ್ತ ರಾಜ್ಯ ಸರ್ಕಾರದ ಉದ್ಯೋಗಿ, ಮಳವಳ್ಳಿ.

  • ಮಕ್ಕಳ ಯುಗಾದಿ – ಚಿಣ್ಣರ ತಗಾದಿ ಎಂಬ 2026ಯುಗಾದಿ ಹಬ್ಬದ ಮಕ್ಕಳ ಪದ್ಯ ನಿಜವಾಗಿಯೂ ಕನ್ನಡ ಮಕ್ಕಳಿಗೆ ವಿಶೇಷವಾಗಿದೆ. ನಮಸ್ಕಾರ
    ಯಶೋಧ ಮೇಡಂ (ನಿವೃತ್ತ ಶಿಕ್ಷಕಿ), ರಾಮನಗರ.

  • Children’s poetry is really enjoyable and message oriented one, congratulations 🎊 👏 💐 💖. Happy(new year) UGADI to all of you and Kannada JANAMANA e-news.
    Raghavendra, Avenue road, Bengaluru

  • Children’s poetry is really enjoyable and message oriented one, congratulations 🎊 👏 💐 💖. Happy(new year) UGADI to all of you and Kannada JANAMANA e-news. Yours sincerely Raghavendra, Avenue road, Bengaluru 560009

  • 2026 UGADI SPECIAL “CHILDREN’S POETRY” is really enjoyable and super-duper for all the children 😄.
    -Preethu S., Mandi Mohalla, Mysore 570001

Leave a Reply

Translate to any language you want