ಹೊಸೂರು(ಸಂಘಟನೆ ಮಂಜುನಾಥ್): ಅಕ್ಷರ ದಾಸೋಹದ ಜತೆಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸುತ್ತೂರು ಸೇರಿದಂತೆ ಹಲವಾರು ಮಠಗಳು ತಮ್ಮದೇ ಕೊಡುಗೆ ನೀಡಿ ಸರ್ಕಾರದ ಜೊತೆ ಕೈ ಜೋಡಿಸಿವೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಮಹದೇಶ್ವರ ಜೀರ್ಣೋದ್ಧಾರಿತ ನೂತನ ದೇವಾಲಯದ ಪ್ರವೇಶೋತ್ಸವ ಮತ್ತು ನೂತನ ವಿಗ್ರಹ ಗೋಪುರದ ಬ್ರಹ್ಮ ಕಲಶ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮೈಸೂರು ಭಾಗದಲ್ಲಿ ಹತ್ತಾರು ಶಿಕ್ಷಣ ಕೇಂದ್ರಗಳನ್ನ ಅರಂಭಿಸಿ ಲಕ್ಷಾಂತರ ಮಂದಿಗೆ ಶಿಕ್ಷಣ ಕೊಟ್ಟ ಕೀರ್ತಿ ಸೂತ್ತೂರು ಮಠಕ್ಕೆ ಸಲ್ಲಲಿದ್ದು ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳು ರಾಜ್ಯ, ದೇಶ, ವಿದೇಶದಲ್ಲಿ ಉದ್ಯೋಗ ದೊರೆಯಲು ಸುತ್ತೂರು ಶ್ರೀಗಳ ದೂರ ದೃಷ್ಠಿಯೇ ಕಾರಣ ವಾಗಿದೆ ಎಂದು ಹೇಳಿದರು.

ಗ್ರಾಮಗಳಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮತ್ತು ಜೀರ್ಣೋದ್ಧಾರ ಮಾಡುವುದರಿಂದ ಎಲ್ಲಾ ಸಮುದಾಯಗಳ ನಡುವೆ ಸಹೋದರತ್ವ ನಿರ್ಮಾಣವಾಗಿ ಗ್ರಾಮಗಳಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಲಿದ್ದು ಮಹದೇಶ್ವರ ದೇವಾಲಯದ ರಕ್ಷಣೆಗೆ ತಡೆಗೋಡೆ ನಿರ್ಮಿಸಲು 60 ಲಕ್ಷ ರೂ ಅನುದಾನವನ್ನು ನೀಡಿರುವುದಾಗಿ ತಿಳಿಸಿದರು.

ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಆಶೀರ್ವಚನ ನೀಡಿದರೆ, ದೇವಾಲಯದ ಕಳಸಾರೋಹಣವನ್ನು ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳು ಮಾಡಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಬೆಟ್ಟದಪುರದ ಸಲೀಲಾಖ್ಯ ಮಠದ ಚೆನ್ನಬಸವದೇಶಿ ಕೇಂದ್ರ ಶ್ರೀ, ಗಾವಡಗೆರೆ ಜಂಗಮ ಮಠದ ನಟರಾಜ ಶ್ರೀ,ರಾವಂದೂರು ಮುರುಘ ಮಠದ ಮೋಕ್ಷಪತಿ ಶ್ರೀ, ಉಕ್ಕಿನಕಂತೆ ಮಠದ ಸಾಂಬಸದಾಶಿವ ಶ್ರೀ,ಈಶಾನೇಶ್ವರ ಮಠದ ಬಸವರಾಜ ಶ್ರೀ, ಬಸವ ಕಲ್ಯಾಣ ಮಠದ ವಿಜಯ ಕುಮಾರ ಶ್ರೀ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಎ.ಎಸ್ ಅಧಿಕಾರಿ ಡಿ.ಭಾರತಿ ವಹಿಸಿ ಮಾತನಾಡಿ ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಡಿ ರವಿಶಂಕರ್, ಮಾಜಿ ಸಚಿವ ಸಾ.ರಾ.ಮಹೇಶ್, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ವಕೀಲ ಎಚ್.ಪಿ.ಮಹದೇವಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಪ್ರಾಂಶುಪಾಲ ಶ್ರೀನಿವಾಸ್, ಮಾಜಿ ಗ್ರಾ.ಪಂ.ಸದಸ್ಯ ಆಶಿ ಮಲ್ಲಿಕಾರ್ಜುನ

ಎನ್ ಸಿ ಪ್ರಸಾದ್, ಹಾಡ್ಯಾ ನಾಗೇಶ್, ರಘು,ಬಸವ ಕಿರಣ, ರಘು, ಶಿವನಂದ್, ಅಂಕನಹಳ್ಳಿ ಯತೀಶ್, ಎಂ.ಎನ್.ಮಹದೇವ, ದಶರಥ, ಷಣ್ಮುಖ ಅಂಕನಹಳ್ಳಿ ಪವನ್, ಹರೀಶ್ ರಾಜೇಂದ್ರ, ಸೋಮಶೇಖರಪ್ಪ, ರಾಜಣ್ಣ, ಎಪಿ ಹರೀಶ್, ಯಾಚನಹಳ್ಳಿ ವಿಜಯ್, ಚೇತನ ಮೈಸೂರು, ರುದ್ರೇಶ ಅಂಕನಹಳ್ಳಿ, ಹಾಡ್ಯ ಮಲ್ಲಿಕಾ, ಸೇರಿದಂತೆ ಮತ್ತಿತರರು ಹಾಜರಿದ್ದರು,








