ArticlesLatest

ನಡೆದಾಡುವ ದೇವರು ಕರ್ನಾಟಕ ರತ್ನ ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿ..

(ಜನನ 1.4.1907-ನಿಧನ 21.1.2019)

ಪದ್ಮಭೂಷಣ ಡಾ.ಶಿವಕುಮಾರಸ್ವಾಮಿಜಿ

ಮಾಗಡಿ ತಾಲ್ಲೂಕಿನ ಗ್ರಾಮ ವೀರಾಪುರ

ಶ್ರೀಮತಿ ಗಂಗಮ್ಮಾ ಶ್ರೀ ಹೊನ್ನೇಗೌಡರ

ಪಟೇಲರ ರೈತ ಕುಟುಂಬದ ಕುಲಪುತ್ರ

ಬೆಂಗಳೂರ ಕಾಲೇಜ್ ಮೈವಿವಿ ಪದವೀಧರ

 

ತೋಟದಪ್ಪನ ಹಾಸ್ಟೆಲ್ ಬೆಸ್ಟ್ ಸ್ಟುಡೆಂಟ್

ಕನ್ನಡ ಇಂಗ್ಲಿಷ್ ಭಾಷಾ ಗ್ರ್ಯಾಜುಏಟ್

ಕ.ವಿ.ವಿ. ಪ್ರತಿಷ್ಠಿತ ಗೌರವ ಡಾಕ್ಟರೇಟ್

ಉದ್ಧಾನ ಶಿವಯೋಗಪ್ಪನವರು ಮೀಟ್

ಬಾಳದಾರಿಯಲ್ಲಿ ತನ್ನಷ್ಟಕ್ಕೆ ತಾನಿದ್ದ ಯೋಗ್ಯ

ಬಯಸದೇ ಬಂದಿತು ಉತ್ತರಾಧಿಕಾರಿ ಭಾಗ್ಯ

 

ಲಿಂಗಾಯತ ಮಠಕ್ಕೆ ಒಕ್ಕಲಿಗ ಪೀಠಾಧಿಪತಿ

ಅಳೆದು ಸುರಿದು ನೀಡಿದ ಅರ್ಹತಾ ಕುಲಪತಿ

ಅನ್ನ ಅಕ್ಷರ ಜ್ಞಾನ : ತ್ರಿವಿಧ ದಾಸೋಹ ಲಿಪಿ

ನೂರು ಸಾವಿರದಿಂದ ಲಕ್ಷ ಕೋಟಿ ತಲುಪಿ

ಸತ್ಸಂಗದ ಸಗ್ಗ ಸೃಜಿಸಿದ ಸತ್ಪುರುಷ ತಾಪಿ

ಸರಿಪೋಷಿಸಿ ಪಾಪಿಗೂ ಮಾಡುತೆ ಮಾಫಿ

 

ಸಕಲ ಜೀವರಾಶಿಯ ಸಲಹಿ ಸತ್ಕರಿಸಿದರು

ಸರ್ವಧರ್ಮ ಸಮನ್ವಯ ನಿತ್ಯ ಪಾಲಿಸಿದರು

ನಡೆದಂತೆ ನುಡಿದೂ ನುಡಿದಂತೆ ನಡೆದರು

ಅಕ್ಷರಶಃ ಆಧ್ಯತ್ಮಿಕ ಶ್ರೇಷ್ಠಜೇಷ್ಠ ಎನಿಸಿದರು

ಪಾಂಡಿತ್ಯ ಇರುವೆಡೆ ಪಾವಿತ್ರ್ಯ ಅಪರೂಪ

ಪ್ರತಿಭೆ ಇದ್ದೆಡೆ ಸರಳಸಜ್ಜನಿಕೆ ಅಪರೂಪ

 

ಪಾಂಡಿತ್ಯ ಪಾವಿತ್ರ್ಯಪ್ರತಿಭೆ ಸರಳಸಜ್ಜನಿಕೆ

ಎಲ್ಲವೂ ಪವಡಿಸಿಹ ಪರಶಿವನ ಪಾದುಕೆ

ನೀ,ಸಾರ್ಥಕ ಸಮರ್ಪಕ ಸಫಲ ಸದ್ಗುಣ

ನಿಸ್ವಾರ್ಥ ನಿಗರ್ವಿ ನಿರಂಜನ ನಿಜಗುಣ

ತ್ರಿಲೋಕ ಮೆಚ್ಚುವ ಪರಿಶುದ್ಧ ತ್ರಿಕರಣ

ಷಟ್ವರ್ಗಶತ್ರು ಸಂಹಾರಗೈದ ಬ್ರಹ್ಮಚಾರಣ

 

ಅನಂತಾನಂತ ಶಿವನ ಶರಣರ ವಚನ

ಅನೇಕಾನೇಕ ಜನನ ಮರಣ ಪ್ರವಚನ

ಅದಮ್ಯ ಚೇತನ ಅಗಣಿತ ಜೀವ-ಜೀವನ

ಅಸಂಖ್ಯಾತ ಶಿಷ್ಯಕೋಟಿ ಜನ್ಮ ಪಾವನ

ಇಲ್ಲಿಂದ ಸದ್ವಿದ್ಯಾಬುದ್ದಿ ಕಲಿತ ಶುಚಿವೀರರು

ಎಲ್ಲೆಯ ದಾಟಿ ಲೋಕದೆಲ್ಲೆಡೆ ಹೋದವರು

ಎಲ್ಲರಿಗಾಗಿ ಒಬ್ಬರೂ ಒಬ್ಬರಿಗಾಗಿ ಎಲ್ಲರೂ

ಎಂದೆನುತೆ ಉತ್ತಮದಿಂದೆತ್ತರಕ್ಕೆ ಬೆಳೆದಿಹರು

 

ಇದಕೆಲ್ಲ ಮೂಲಕಾರಣ ಮಹಾರೂವಾರಿ ಈತ

112ವರ್ಷ ಧೀರ್ಘಾಯು ಶತಮಾನದ ಈಶ

88ವರ್ಷಕಾಲ ನಿಷಕ್ಪಟ ಸೇವಾತ್ಮ ಸತ್ಪುರುಷ

ಶಿವಕುಮಾರಸ್ವಾಮಿ ಶ್ರೀ ವಿಖ್ಯಾತ ಸಂಗಮೇಶ

ಶಿರಸಾಷ್ಟಾಂಗ ವಂದನೆಅಭಿನಂದನೆ ಜಗದೀಶ

 

ಜೀವಾತ್ಮ ಪರಮಾತ್ಮ ಎಲ್ಲರದ್ದೊಂದೆ ಉದ್ದೇಶ

ಮತ್ತೆ ಹುಟ್ಟಿಬನ್ನಿ ಬೋಧಿಸಲು ದಿವ್ಯಸಂದೇಶ

ಕಾದು ಕುಳಿತಿದೆ ನಿಮಗಾಗಿ ಬನವಾಸಿ* ದೇಶ?

ಆತ್ಮತೊರೆದ ನೀವು ಆಚಂದ್ರಾರ್ಕ ಅಮರೇಶ!

admin
the authoradmin

10 Comments

  • Sri SHIVAKUMARA swamijiyavaru basically VOKKALIGAS family emba Sathya bahuteka janarige gottiralilla. Uttama mahitigaagi anantananta dhanyavadagalu sir.
    Vanajakshi, Shira, Tumkuru,

  • Padmabushan Dr.Shivkumarswamyjee katana kavana excellent 👌 👏 👍, Thanksgiving poem is written by NATRAJ sir 👏 👍 Siddalingaswamy S, Anubhava nagara, Nagarabhavi Bengaluru 560072

  • Namma naadina trivida dasoha shikamani nadedaduva devaru SriSriSri SHIVKUMARA SWAMIJEE Padya artapoorna.
    Nataraja kavigalige sharanu sharanarti. Om Namah Shivaya….. Shivalingappa, Avadaani & Ayurveda Pandit, RPC layout, near eeshwara temple, Bengaluru

  • Namma naadina trivida dasoha shikamani nadedaduva devaru SriSriSri SHIVKUMARA SWAMIJEE Padya artapoorna. Uttamavagi barediruva naaadina hiriya kavigalada Nataraja kavigalige sharanu sharanarti. Om Namah Shivaya….. Shivalingappa, Avadaani & Ayurveda Pandit, RPC layout, near eeshwara temple, Bengaluru

  • Dr.shivkumara swamiji yavara kuritu Natraj sir bareda kavana superb 👌 👏 👍 😀
    SMT.PRABHAVATHI, Bhyraveshwara nagara, Nagarabhavi main road, Bengaluru 560072

  • Dr.shivkumara swamiji yavara kuritu Natraj sir bareda kavana superb aagide.👌 👏 👍 SMT.PRABHAVATHI, Bhyraveshwara nagara, Nagarabhavi main road, Bengaluru 560072

  • Pushpa, Mahalakshmi, Akkamaadevi, Shivashree, Sridevi, Sowbhagya, Puttalakshmi and other friends. Nagarabhavi park, Bengaluru.Namagellarigoo tumba ishtavayitu
    Neevu publishe madiruva nammellara Aradhya daiva nadedaduva devaru bagge kumarakavi nataraja ravaru barediruva katana kavana. Dhanyavadagalu namaskara

  • Namaskara janamanakannada balagakke,…… naavugalu
    Sridevi, Pushpa, Mahalakshmi, Akkamaadevi, Shivashree, Sowbhagya, Puttalakshmi and other friends. Nagarabhavi park, Bengaluru.Namagellarigoo tumba ishtavayitu
    Neevu publishe madiruva nammellara Aradhya daiva nadedaduva devaru bagge kumarakavi nataraja ravaru barediruva katana kavana. Dhanyavadagalu namaskara

  • Sreeksetra siddaganga swamiji yavara kuritu Natraj sir bareda kavana superb. Smt.Manjulamma Sri G.B.Basavaraj GVRA layout,near BBMP HOSPITAL,Nagarabavi, Bengaluru

  • Sreeksetra siddaganga swamiji yavara kuritu Natraj sir bareda kavana superb. Smt.Manjulamma Sri G.B. Basavaraj GVRA layout,near BBMP HOSPITAL,Nagarabavi, Bengaluru.

Leave a Reply

Translate to any language you want