ಹೊಸೂರು(ಸಂಘಟನೆ ಮಂಜುನಾಥ್): ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಹುಂಡಿಯಲ್ಲಿನ ಭಕ್ತರ ಕಾಣಿಕ ಹಣ ಎಣಿಕೆ ಕಾರ್ಯ ಸಾಂಗವಾಗಿ ನಡೆದಿದ್ದು, 5.68 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಸಾಲಿಗ್ರಾಮ ತಹಸೀಲ್ದಾರ್ ರುಕಿಯಾ ಬೇಗಂ ಹಾಗೂ ಉಪ ತಹಸೀಲ್ದಾರ್ ಮಹೇಶ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಹುಂಡಿಯಲ್ಲಿನ ಭಕ್ತರ ಕಾಣಿಕೆ ಹಣದ ಎಣಿಕೆ ಕಾರ್ಯ ನಡೆಸಿದ್ದು ಈ ಬಾರಿ 5.68.100 ಲಕ್ಷರೂ.ಗಳ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಜನವರಿ ತಿಂಗಳಲ್ಲಿ ನಡೆದ ಜಾನುವಾರು ಜಾತ್ರೆ ಹಾಗೂ ಶ್ರೀರಾಮ ದೇವರ ಬ್ರಹ್ಮರಥೋತ್ಸವ ನಡೆದ ಹಿನ್ನಲೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ದೇಗುಲಕ್ಕೆ ಹೆಚ್ಚು ಭೇಟಿ ನೀಡಿದ್ದ ಕಾರಣ ಹುಂಡಿಯಲ್ಲಿ ಕಾಣಿಕೆ ಹಣ ಈ ಬಾರಿ ಏರಿಕೆಯಾಗಿದೆ. ಕಾಣಿಕೆ ಹಣವನ್ನು ದೇಗುಲದ ಎಸ್ ಬಿ ಐ ಖಾತೆಗೆ ಜಮಾ ಮಾಡಲಾಗುವುದು ಎಂದು ಉಪ ತಹಸೀಲ್ದಾರ್ ಮಹೇಶ್ ತಿಳಿಸಿದರು.

ಎಣಿಕೆ ಕಾರ್ಯ ವೇಳೆ ಆರ್.ಐ ಚಿದಾನಂದ ಬಾಬು, ಪಾರುಪತ್ತೆದರ ವಿನಯ್, ಗ್ರಾಮ ಲೆಕ್ಕಿಕರಾದ ಮೇಘನಾ, ಸುನಿಲ್, ಪ್ರೀಯ, ಕಾವೇರಿ, ಗ್ರಾಮ ಸಹಾಯಕರಾದ ತೇಜು, ರವೀಂದ್ರ, ಸುಮಿತ್ರಾ, ಕೃಷ್ಣಮೂರ್ತಿ, ವಸಂತ, ಅರ್ಚಕರಾದ ನಾರಾಯಣಅಯ್ಯಂಗಾರ್, ವಾಸುದೇವನ್, ಎಸ್. ಬಿ. ಐ ಬ್ಯಾಂಕ್ ಸಿಬ್ಬಂದಿ, ಹಾಗೂ ಮುಖ್ಯಪೇದೆ ದೊರೆಸ್ವಾಮಿ ಸೇರಿದಂತೆ ಹಲವರು ಇದ್ದರು.
ಇಂದು ಸಾಲಿಗ್ರಾಮದಲ್ಲಿ ಅಭಿಮಾನಿಗಳಿಂದ ದೊಡ್ಡಸ್ವಾಮೇಗೌಡರಿಗೆ ಅಭಿನಂದನಾ ಸಮಾರಂಭ..








