LatestMysore

ಸ್ವಾತಂತ್ರ್ಯೋತ್ಸವದಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡರ ಕುಟುಂಬದಿಂದ ಲಾಡು ವಿತರಣೆ

ಕೆ.ಆರ್.ನಗರ(ಜಿಟೆಕ್ ಶಂಕರ್): 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ವಿದ್ಯಾರ್ಥಿಗಳಿಗೆ ನಮ್ಮ ಕುಟುಂಬದ ವತಿಯಿಂದ ವೈಯುಕ್ತಿಕವಾಗಿ ಸಿಹಿ ವಿತರಣೆ ಮಾಡಲಾಗುತ್ತಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಕರುಗಳಿಗೆ ಸಾಂಕೇತಿಕವಾಗಿ ಸಿಹಿ ವಿತರಣೆ ಮಾಡಿ ಮಾತನಾಡಿದ ಅವರು ಎರಡು ತಾಲೂಕುಗಳ ಅಂಗನವಾಡಿ ಮಕ್ಕಳಿಂದ ಆರಂಭಿಸಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳವರೆಗೆ 60 ಸಾವಿರ ಲಾಡು ನೀಡಲಾಗುತ್ತಿದೆ ಎಂದರು.

ಶಿಕ್ಷಕರುಗಳು ಸಿಹಿ ತಿಂಡಿಗಳ ಬಾಕ್ಸ್‌ ಗಳನ್ನು ಪಡೆದುಕೊಂಡು ಸಮಪರ್ಕವಾಗಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ಸಲಹೆ ನೀಡಿದ ಅವರು ಈ ವಿಚಾರದಲ್ಲಿ ಬಿಇಓ ಮತ್ತು ಸಿಆರ್‌ಪಿಗಳು ನಿಗಾ ವಹಿಸಿ ಸಿಹಿ ಸಾಲದಿದ್ದರೆ ಪಕ್ಷದ ಮುಖಂಡರುಗಳಿಗೆ ತಿಳಿಸಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಬಾರಿಯಿಂದ ಕ್ಷೇತ್ರದ ವ್ಯಾಪ್ತಿಯ ಪ್ರತಿ ಸರ್ಕಾರಿ ಕಛೇರಿಗಳು ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳಿಗೂ ನಾವು ಸಿಹಿ ನೀಡಲು ನಿರ್ಧರಿಸಿದ್ದು ಸಂಬಂಧ ಪಟ್ಟವರು ಸೂಕ್ತ ಮಾಹಿತಿ ನೀಡಿ ಸಿಹಿ ತಿಂಡಿಯ ಬಾಕ್ಸ್‌ಗಳನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಷಯ ಕೋರಿದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಯುವ ಜನತೆ ದೇಶ ಪ್ರೇಮ ಬೆಳೆಸಿಕೊಂಡು ನಾಡು ನುಡಿ ಭಾಷೆಯ ಬೆಳವಣಿಗೆಗೆ ಕಟಿ ಬದ್ದರಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಿಇಒ ಆರ್.ಕೃಷ್ಣಪ್ಪ ಮಾತನಾಡಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಶಾಸಕರು ಎರಡು ತಾಲೂಕಿನ ೬೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡುತ್ತಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆಯ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ನುಡಿದರು.

ಇಸಿಒ ದಾಸಪ್ಪ, ಜನಾರ್ಧನ್, ಪೂರ್ಣಿಮ, ಸಿಆರ್‌ಪಿ ಹೆಚ್.ಎಸ್.ಹರಿಪ್ರಸಾದ್, ರೇವಣ್ಣ, ರಮೇಶ್, ಸತೀಶ, ಇಂದ್ರಾಣಿ, ಗಿರೀಶ್, ನಂದಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯದ್‌ಜಾಬೀರ್, ಆಸರೆ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹೆಬ್ಬಾಳುಸ್ವಾಮಿ ಮತ್ತಿತರರು ಇದ್ದರು.

admin
the authoradmin

Leave a Reply