ArticlesLatest

ಅರಣ್ಯ ಸುಡಬೇಡ ಮರವನ್ನು ಕಡಿಯಬೇಡ… ಧೂಮಪಾನ ಬೇಡ.. ಮದ್ಯಪಾನ ಬೇಡವೇ ಬೇಡ

ಡಿವಿಜಿ ಅವರ ಮಂಕುತಿಮ್ಮನ ಕಗ್ಗವು ಎಲ್ಲ ಕಾಲಕ್ಕೂ ಸಲ್ಲುವಂತಹದ್ದು, ಅಂತಹ ಪ್ರಯೋಗಗಳನ್ನು ಹಲವು ಕವಿ, ಸಾಹಿತಿಗಳು ಮಾಡಿದ್ದಾರೆ. ತಮ್ಮದೇ ವಚನ, ಕವನದ ಮೂಲಕ ಹಲವರು ಸಮಾಜವನ್ನು ತಿದ್ದುವ, ಉಪದೇಶವನ್ನು ಮಾಡಿದ್ದಾರೆ. ಅದನ್ನರಿತು ಮುನ್ನಡೆದರೆ ಬದುಕು ಸುಗಮವಾಗುವುದರಲ್ಲಿ  ಎರಡು ಮಾತಿಲ್ಲ… ಇಲ್ಲಿ ಕುಮಾರಕವಿ ನಟರಾಜ್ ಅವರು ತಮ್ಮದೇ ಆದ ಕುಕನರಾ ವಚನಾಮೃತದ ಮೂಲಕ ಕಿವಿ ಮಾತು ಹೇಳಿದ್ದಾರೆ…

ರಣ್ಯ ಸುಡಬೇಡ ಮರವನ್ನು ಕಡಿಯಬೇಡ

ಧೂಮಪಾನ ಬೇಡ ಮದ್ಯಪಾನ ಬೇಡವೇಬೇಡ

ಮಾದಕದ್ರವ್ಯ ಬೇಡ ಕಳ್ಳಭಟ್ಟಿ ಕುಡಿಯಬೇಡ

ಜೂಜುಮೋಜು ಬೇಡ ಪರಸ್ತ್ರೀಸಂಗ ಬೇಡವೇಬೇಡ

ನಿದ್ದೆ ಕೆಡಬೇಡ ಬುದ್ಧಿಹೀನನೂ ಆಗಬೇಡ

ಕೊಟ್ಟಮಾತು ತಪ್ಪಬೇಡ ಆಲಸ್ಯ ಬೇಡವೇಬೇಡ

ಅಹಂಕಾರ ಬೇಡ ಅನುಮಾನ ಪಡಲೇಬೇಡ

ಅನಾರೋಗ್ಯ ಬೇಡ ಅದೃಷ್ಟವನ್ನ ತಡೆಯಬೇಡ

ಅತಿ ಆಹಾರ ಬೇಡ ಉಪವಾಸವೂ ಇರಬೇಡ

ಅವಾಚ್ಯಪದ ಬೇಡ ಅಶ್ಲೀಲಚಿತ್ರವೂ ಬೇಡ

ಅತೀಶತೃ-ಮಿತ್ರ ಬೇಡ ಹಿತಶತ್ರುವೂ ಬೇಡ

ಮೊಬೈಲ್-ವ್ಯಸನ ಬೇಡ ಟೀವೀ ಹುಚ್ಚೂ ಬೇಡ

ಬರುವ ಎಲ್ಲವನು ಎದುರಿಸುವ ಧೀರನ

ಸಮರ್ಥ ಸಾಧನ ಉತ್ತಮ ಜೀವನ

ಸುರಾಸುರ ದೇವಿ ದೇವರ ಆಜ್ಞಾಪನ

ಸತ್ಯಸುಂದರ ನಿತ್ಯನಿರಂತರ ಪರಮ ಪಾವನ

ಇದೇ ಸಹಜಗುಣ ಇದೇ ಮಾನವಗುಣ

ಇದೇ ಕುಕನರಾ ವಚನಾಮೃತಸಾರ ಕಾಣ

admin
the authoradmin

Leave a Reply

Translate to any language you want