LatestMysore

ಕುಪ್ಪಳ್ಳಿ ಶ್ರೀ ಮಾದೇಶ್ವರ ದೇವಸ್ಥಾನದ 14ನೇ ವಾರ್ಷಿಕೋತ್ಸವ.. ಇಷ್ಟಾರ್ಥ ನೆರವೇರಲು ವಿಶೇಷ ಪೂಜೆ..

ಹೊಸೂರು (ಸಂಘಟನೆ ಮಂಜುನಾಥ್): ಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಕೆ.ಆರ್.ನಗರ ತಾಲೂಕಿನ ಕುಪ್ಪಳ್ಳಿ ಗ್ರಾಮದ ಶ್ರೀ ಮಾದೇಶ್ವರ ದೇವಸ್ಥಾನದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ನೆರದಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಇಷ್ಟಾರ್ಥ ಈಡೇರುವಂತೆ ಕೋರಿಕೊಂಡರು.

ಪೂಜಾ ಕಾರ್ಯಕ್ರಮಕ್ಕೆ ಸುತ್ತ ಮುತ್ತ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಮಾದೇಶ್ವರ ದೇವಸ್ಥಾನದಲ್ಲಿ ತಮ್ಮ ಇಷ್ಟಾರ್ಥ ನೆರವೇರಿಸಲು ವಿಶೇಷ ಪೂಜೆ ಸಲ್ಲಿಸಿದರು. ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದರು. ಇದಾದ ನಂತರ ದೇವಸ್ಥಾನ ಸಮಿತಿಯಿಂದ ಆಯೋಜಿಸಿದ್ದ ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಶ್ರೀ ಮಾದೇಶ್ವರನಿಗೆ ಬಿಲ್ವಪತ್ರೆ. ಮಲ್ಲಿಗೆ ಹಾರ ಹೂ ಗಳಿಂದ ಅಲಂಕರಿಸಲಾಯಿತು. ದೇವಸ್ಥಾನದ ಎದುರು ಹಸಿರು ಚಪ್ಪರ ಹಾಕಿ ಬಾಳೆ ಕಂದು ಮತ್ತು ಮಾವಿನ ತೋರಣಗಳಿಂದ ಸಿಂಗರಿಸಲಾಗಿತ್ತು. ರಾತ್ರಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನ ಮತ್ತು ಮಾದಪ್ಪ ಭಕ್ತಿಯ ಸ್ಮರಣೆ ನಡೆಯಿತು.  ಭಕ್ತರು ಜಾಗರಣೆ ಮಾಡಿ ದೇವರಿಗೆ ಭಕ್ತಿ ಸಮರ್ಪಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶನಾಯಕ, ಸದಸ್ಯರಾದ ಅನಿತಾಕೀರ್ತಿ, ಲಕ್ಷ್ಮಿಮಹದೇವಶೆಟ್ಟಿ, ಸರ್ಕಾರಿ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ್, ಪ್ರೌಡಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ಮಂಜುನಾಥ್,ರೈತ ಸಂಘದ ಅಧ್ಯಕ್ಷ ಗೋವಿಂದೇಗೌಡ, ಪುಟ್ಟಶೆಟ್ಟಿ, ಕರಿಶೆಟ್ಟಿ, ಟೈಲರ್ ಜವರಶೆಟ್ಟಿ, ಸುಬ್ಬಣ್ಣ, ಮದೇವಶೆಟ್ಟಿ, ಮಂಡ್ಯ ಮಹದೇವ್, ಸಣ್ಣಶೆಟ್ಟಿ, ಶಿವಶೆಟ್ಟಿ, ಶಿವಮ್ಮ, ಕೆಂಪರಾಜು, ಶಿವು, ಅಂಕಿತ, ಸೌಜನ್ಯ, ಮಧುಸೂದನ್, ಸತೀಶ್, ತೇಜು, ತಂದ್ರೆ ಧರ್ಮ, ಡೈರಿ ಅಧ್ಯಕ್ಷ ಅಶೋಕ್, ಡಿ.ಸ್ವಾಮಿಶೆಟ್ಟಿ ಮೊದಲಾದವರು ಇದ್ದರು.

ಗೃಹಸಚಿವ ಡಾ.ಜಿ.ಪರಮೇಶ್ವರ್ ಗೆ ಸಾಲಿಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ..

admin
the authoradmin

Leave a Reply

Translate to any language you want