janamanakannada > Blog > Latest > Mysore > ಗೃಹಸಚಿವ ಡಾ.ಜಿ.ಪರಮೇಶ್ವರ್ ಗೆ ಸಾಲಿಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ..
ಗೃಹಸಚಿವ ಡಾ.ಜಿ.ಪರಮೇಶ್ವರ್ ಗೆ ಸಾಲಿಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ..
adminಫೆಬ್ರವರಿ 15, 2026

ಹೊಸೂರು (ಸಂಘಟನೆ ಮಂಜುನಾಥ್):: ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸಾಲಿಗ್ರಾಮದಲ್ಲಿ ಭವ್ಯವಾಗಿ ಸ್ವಾಗತಿಸಿ, ಹಾರ ತುರಾಯಿ ಹಾಕಿ ಸನ್ಮಾನಿಸಿ ಸಂಭ್ರಮಿಸಿದ್ದಾರೆ.

ಕಾರ್ಯನಿಮಿತ್ತ ತೆರಳುತ್ತಿದ್ದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಸಾಲಿಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅಂಬೇಡ್ಕರ್ ಸರ್ಕಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ಮಾಡಿ ಜೈಕಾರ ಕೂಗುವ ಮೂಲಕ ಹಾರ ಹಾಕಿ ಸನ್ಮಾನಿಸಿ ಸಂತಸಪಟ್ಟರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಪುರಿ ಗೋವಿಂದರಾಜು, ಸಿಡಿಸಿ ಸದಸ್ಯ ಸಂತೋಷ, ತಾಲೂಕು ಎಸ್ ಸಿ ಘಟಕದ ಅಧ್ಯಕ್ಷ ಕಂಠಿ ಕುಮಾರ್, ಮುಸ್ಲಿಂ ಯುವ ಕಾಂಗ್ರೆಸ್ ಮುಖಂಡ ಸೌಕತ್, ಆದಿ ಜಾಂಬವ ಮುಖಂಡ ಮಹದೇವಪ್ಪ, ಹಾಗೂ ಇನ್ನಿತರ ಅಭಿಮಾನಿಗಳು ನೆರೆದು ಜೈಕಾರ ಹಾಕಿ ಖುಷಿಪಟ್ಟರು.
ಕುಪ್ಪಳ್ಳಿ ಶ್ರೀ ಮಾದೇಶ್ವರ ದೇವಸ್ಥಾನದ 14ನೇ ವಾರ್ಷಿಕೋತ್ಸವ.. ಇಷ್ಟಾರ್ಥ ನೆರವೇರಲು ವಿಶೇಷ ಪೂಜೆ..
Tags:k r nagar news
admin







