LatestMysore

ಮಾಯಿಗೌಡನಹಳ್ಳಿ  ಶ್ರೀ ಮಹದೇಶ್ವರ ಜೀರ್ಣೋದ್ದಾರಗೊಂಡ ದೇಗುಲದ ಪ್ರವೇಶೋತ್ಸವ

 ಸಾಲಿಗ್ರಾಮ(ಸಂಘಟನೆ ಮಂಜುನಾಥ್) : ತಾಲೂಕಿನ‌ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ಮಾ. 29 ಮತ್ತು ಮಾ.30ರಂದು ಶ್ರೀ ಮಹದೇಶ್ವರ ಜೀರ್ಣೋದ್ಧಾರಿತ ನೂತನ ದೇವಾಲಯದ ಪ್ರವೇಶೋತ್ಸವ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನಾ ಹಾಗೂ ಗೋಪುರ ಬ್ರಹ್ಮಕಲಶ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಡ್ಯ ಮತ್ತುಮಾಯಿಗೌಡನಹಳ್ಳಿ ಶ್ರೀ ಮಹದೇಶ್ವರ ಸೇವಾ ಸಮಿತಿ ಅಧ್ಯಕ್ಷರಾದ ಎಚ್.ಪಿ.ಮಹದೇವಪ್ಪ ಹೇಳಿದರು.

ಅವರು ತಾಲೂಕಿನ ಮಾಯಿಗೌಡನಹಳ್ಳಿಯಲ್ಲಿರುವ ಶ್ರೀ ಮಹದೇಶ್ವರ ದೇವಸ್ಥಾನದ ಅವರಣದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಮಾ.29ರಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಗ್ರೋದಕ, ಗಂಗಾಪೂಜೆ, ಗೋಪೂಜೆ, ನೂತನ ದೇವಾಲಯದ ಪ್ರವೇಶ, ಮಹಾಸಂಕಲ್ಪ, ಮಹಾ ಗಣಪತಿ ಪೂಜೆ, ನಂದಿಪೂಜೆ ನಂತರ ಕಲಶ ಪೂಜಾದಿಗಳು, ಗಣಪತಿ ಹೋಮ, ಮಂಗಳಾರತಿ ನಂತರ ಸಾಯಂಕಾಲ ಗಂಗಾರತಿ, ಪ್ರಧಾನ ಕಲಶ ಪೂಜಾದಿಗಳು, ಮಂಡಲ ಪೂಜಾದಿಗಳು, ವಿಶೇಷ ನವಗ್ರಹ ಹೋಮ, ಮೃತ್ಯುಂಜಯ ಹೋಮ, ವಾಸ್ತು ಹೋಮ, ಶಾಂತಿ ಹೋಮ ಹಾಗೂ ನೂತನ ವಿಗ್ರಹಗಳಿಗೆ ಸಂಸ್ಕರಾದಿ ಪೂಜೆಗಳು ನಡೆಯಲಿವೆ ಎಂದರು.

ಮಾ.30ರ ಸೋಮವಾರ ಬೆಳಗಿನ ಜಾವ ಶ್ರೀ ಮಹದೇಶ್ವರ ಸ್ವಾಮಿಯ ಪ್ರತಿಷ್ಠಾಪನೆ, ಕಲಾವಾಹನೆ, ನಂತರ ಕುಂಭಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಗೋಪುರ ಬ್ರಹ್ಮಕಲಸ ಪ್ರತಿಷ್ಠಾಪನೆ, ದೃಷ್ಟಿಪೂಜೆ, ಕುಂಭಾಭಿಷೇಕದ ನಂತರ ಪ್ರಧಾನ ಹೋಮ, ಶಂಕ ಹೋಮ ಪೂಜಾದಿಗಳು, ಅಷ್ಟೋತ್ತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವನ್ನು ಮಾಡಲಾಗುವುದು ಎಂದರು.

ತಾಲೂಕು ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹಾಡ್ಯ ಮಹದೇವಸ್ವಾಮಿರವರು ಮಾತನಾಡಿ ಮಾ.30ರಂದು ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯು ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.

ಈ ಸಮಾರಂಭದಲ್ಲಿ ಬೆಟ್ಟದಪುರದ ಕನ್ನಡ ಮಠ ಮತ್ತು ಸಲೀಲಾಖ್ಯಾ ಮಠದ ಶ್ರೀ ಚೆನ್ನಬಸವದೇಶಿಕೇಂದ್ರ ಸ್ವಾಮಿಗಳು, ಗಾವಡಗೆರೆಯ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮಿಗಳು, ಹಾಡ್ಯ ಈಶಾನ್ಯೇಶ್ವರ ಮಠದ ಶ್ರೀ ಬಸವರಾಜ ಸ್ವಾಮಿಗಳು, ಮಾದಿಹಳ್ಳಿಯ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಗಳು, ಅಂಕನಹಳ್ಳಿಯ ಬಸವಕಲ್ಯಾಣ ಮಠದ ಶ್ರೀ ವಿಜಯಕುಮಾರ ಸ್ವಾಮಿಗಳು, ರಾವಂದೂರಿನ ಶ್ರೀ ಮುರುಘ ಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು, ಹರವೆಯ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮಿಗಳು

ತೊರೆನೂರಿನ ಮಠದ ಶ್ರೀ ಮಲ್ಲೇಶ್ವರ ಸ್ವಾಮಿಗಳು, ಅರಕೆರೆ ವಿರಕ್ತಮಠದ ಶ್ರೀ ಸಿದ್ದೇಶ್ವರ ಸ್ವಾಮಿಗಳು, ದಿಂಡಗಾಡು ಶ್ರೀ ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮಿಗಳು, ಲಾಲನಹಳ್ಳಿಯ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಶರಣೆ ಜಯದೇವಿ ತಾಯಿ ರವರು, ಕಲ್ಯಾಣಪುರದ ಕಲ್ಯಾಣ ಬಸವೇಶ್ವರ ಮಠದ ಶ್ರೀ ಶರಣೆ ಚಿನ್ಮಯಿತಾಯಿರವರು, ಸರಗೂರಿನ ಪಟ್ಟದ ಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳು, ಮಾರಗೌಡನಹಳ್ಳಿಯ ದಾಸೋಹ ಮಠದ ಶ್ರೀ ಶಂಭುಲಿಂಗ ಸ್ವಾಮಿಗಳು, ಕರ್ಪೂರವಳ್ಳಿ ಶ್ರೀ ಜಂಗಮ ಮಠದ ಶ್ರೀ ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಶಾಸಕರಾದ ಡಿ.ರವಿಶಂಕರ್ ಅವರು ಉದ್ಘಾಟನೆ ಮಾಡಲಿದ್ದು, ದಾಸೋಹ ಮಂದಿರವನ್ನು ಮಾಜಿ ಸಚಿವರಾದ ಸಾ.ರಾ.ಮಹೇಶ್ ರವರು ಮತ್ತು ಶ್ರೀ ಮಹದೇಶ್ವರ ಕಲಾಮಂಟಪವನ್ನು ಗುಂಡ್ಲುಪೇಟೆ ಶಾಸಕರಾದ ಗಣೇಶ ಪ್ರಸಾದ್ ಅವರುಗಳು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮೈಸೂರು – ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡಸ್ವಾಮೇಗೌಡರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯರವರು ಹಾಗೂ ಶ್ರೀ ಮಹದೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಹೆಚ್.ಪಿ.ಮಹದೇವಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಎಸ್ ಅಧಿಕಾರಿಗಳಾದ ಡಿ.ಭಾರತಿಯವರು ವಹಿಸಲಿದ್ದಾರೆ ಎಂದರು.

ವಿಶೇಷ ಉಪನ್ಯಾಸವನ್ನು ನಿವೃತ್ತ ಪ್ರಾಚಾರ್ಯರಾದ ಮೊರಬದ ಮಲ್ಲಿಕಾರ್ಜುನ ಅವರು ನೀಡಲಿದ್ದಾರೆ. ಶ್ರೀ ಮಹದೇಶ್ವರ ದೇವಸ್ಥಾನಕ್ಕೆ ವಿಗ್ರಹಗಳನ್ನು ಕೆತ್ತನೆ ಮಾಡಿರುವ ಶಿಲ್ಪಿ ಗಳಾದ ಅರುಣ್ ಯೋಗಿರಾಜ್ ಮತ್ತು ಶ್ರೀ ಮಹದೇಶ್ವರ ದೇವಸ್ಥಾನ ಮತ್ತು ಗೋಪುರವನ್ನು ನಿರ್ಮಿಸಿದ ಶಿಲ್ಪಿಗಳಾದ ವಿ.ಮುತ್ತು ಕುಮಾರ್ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದರು.

ದೇವತಾ ಕಾರ್ಯಕ್ರಮದ ಅಂಗವಾಗಿ ಮಾ.29ರಂದು ಬೆಳಿಗ್ಗೆ ಕೇರಳದ ಚಂಡ ಮದ್ದಲೆ ಕಲಾತಂಡ, ಕಂಸಾಳೆ, ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ, ನಗಾರಿ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಸಕ್ಕರೆ ಗ್ರಾಮದ ಕಾವೇರಿ ನದಿಯಿಂದ ಮೆರವಣಿಗೆಯ ಮೂಲಕ ಗಂಗೆಯನ್ನು 108 ಕಳಸಗಳೊಂದಿಗೆ ದೇವಾಲಯಕ್ಕೆ ತರಲಾಗುವುದು.

ಅಂತರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮತ್ತು ಸಂಗಡಿಗರಿಂದ ಜಾನಪದ ಝೇಂಕಾರ ಕಾರ್ಯಕ್ರಮ, ನಂಜನಗೂಡು ತಾಲೂಕಿನ ಅಹಲ್ಯದ ಶ್ರೀ ಮಲೈ ಮಹದೇಶ್ವರ ಭಜನಾ ಸಂಘದ ರಾಜೇಶ್ ಮತ್ತು ತಂಡದವರಿಂದ ಬಜನಾ ಕಾರ್ಯಕ್ರಮ ಮಾ.30ರಂದು ಹೆಬ್ಬಾಳಿನ ಪುಟ್ಟೇಗೌಡ ಮತ್ತು ತಂಡದವರಿಂದ ಜನಪದ ಮತ್ತು ಭಕ್ತಿ ಗೀತ ಗಾಯನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಎರಡು ದಿನಗಳ ಕಾಲವೂ ಸಾರ್ವಜನಿಕರು ಹಾಗೂ ಭಕ್ತರುಗಳಿಗೆ ಪ್ರಸಾದ ವಿನಿಯೋಗವನ್ನು ಮಾಡಲಾಗುವುದು.

ದೇವಾಲಯದ ಪೂಜಾ ಕಾರ್ಯಕ್ರಮಗಳನ್ನು ಶ್ರೀ ಮಹದೇಶ್ವರ ದೇವಸ್ಥಾನದ ಅರ್ಚಕರಾದ ಮಾದೇಶ್, ವಾಸ್ತುಶಿಲ್ಪಿಗಳಾದ ಹರೀಶ್ ಮತ್ತು ತಂಡದವರು ನಡೆಸಿಕೊಡಲಿದ್ದಾರೆ. ಈ ದೇವತಾ ಕಾರ್ಯದಲ್ಲಿ ಸಾರ್ವಜನಿಕರು, ಶ್ರೀ ಮಹದೇಶ್ವರ ಸ್ವಾಮಿಯ ಭಕ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಡಿ.ಭಾರತಿ, ಶ್ರೀ ಮಹದೇಶ್ವರ ಸೇವಾ ಸಮಿತಿಯ ಆಶಿಮಲ್ಲಿಕಾರ್ಜುನ್, ಎಂ.ಎನ್.ಮಹದೇವ, ಅಂಕನಹಳ್ಳಿ ಷಣ್ಮುಖ, ಮಂಜುನಾಥ, ಸೋಮೇಶ್, ಶಿವಾನಂದ್, ರಘು, ಸುರೇಶ್, ಸೋಮಶೇಖರಯ್ಯ, ಮಹದೇವ, ಪೂಜಾರಿ, ದಶರಥ, ರವಿ, ರಾಜಶೇಖರಯ್ಯ, ನಂಜೇಶ್, ಮಂಜು ಆರಾಧ್ಯ, ಮಹದೇವ್, ಪೋಸ್ಟ್ ಲೋಕಿ ಸೇರಿದಂತೆ ಹಲವರು ಇದ್ದರು.

admin
the authoradmin

Leave a Reply

Translate to any language you want