ಹುಣಸೂರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಪತ್ತೆ.. ಇಬ್ಬರ ಬಂಧನ… ಹೆಚ್ಚಿದ ಆತಂಕ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಡ್ರಗ್ಸ್ ಪತ್ತೆ ಪ್ರಕರಣಗಳು ಇದೀಗ ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನೇರವಾಗಿ ಗ್ರಾಮೀಣ ಜನರ ಕೈಸೇರುತ್ತಿದ್ದು ಬಹುತೇಕರು ಇದರ ವ್ಯಸನಿಗಳಾಗುತ್ತಿರುವುದು ಆತಂಕದ ವಿಚಾರವಾಗಿದೆ.

ಇದೀಗ ಹುಣಸೂರು ತಾಲೂಕು ರತ್ನಪುರಿ ಬಳಿಯ ದಾಸನಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜಿಲ್ಲಾ ಪೊಲೀಸ್ ತಂಡ ದಾಳಿ ನಡೆಸಿ ಡ್ರಗ್ಸ್ ಮಾರಾಟ ಜಾಲವನ್ನು ಪತ್ತೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಟ್ಯಂತರ ರೂ. ಮೌಲ್ಯದ ಅಂದಾಜು 30 ಕೆಜಿಗೂ ಹೆಚ್ಚು ಪ್ರಮಾಣದ ಮಾದಕ ವಸ್ತು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಹುಣಸೂರಿನ ರಹಮತ್ ಮೊಹಲ್ಲದ ನಿವಾಸಿಯೊಬ್ಬ ಮೈಸೂರು’ ಮೂಲದ ವ್ಯಕ್ತಿ ಯೊಬ್ಬನೊಂದಿಗೆ ಮನೆಯೊಂದರಲ್ಲಿ ಸಿಂಥೆ ಟಿಕ್ ಡ್ರಗ್ಸ್ ದಾಸ್ತಾನು ಮಾಡಿರುವ ಮಾಹಿತಿ ಆಧರಿಸಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ಸಿ.ಮಲ್ಲಿಕ್, ಹುಣಸೂರು ಉಪ ವಿಭಾಗದ ಡಿವೈಎಸ್ಪಿ ರವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಈ ಸಂದರ್ಭ ಸುಮಾರು 30 ಕೆ.ಜಿಗಿಂತಲೂ ಹೆಚ್ಚಿನ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ಗುರುವಾರ ಡ್ರಗ್ಸ್ ಸೇವನೆ ಮಾಡಿದ್ದ ಇಬ್ಬರನ್ನು ಬಂಧಿಸಿದ್ದೆವು. ವಿಚಾರಣೆ ನಡೆಸಿ ದಾಗ ದಾಸನಪುರದ ಮನೆಯೊಂದರಲ್ಲಿ ಸಿಂಥೆಟಿಕ್ ಡ್ರಗ್ಸ್ ದಾಸ್ತಾನು ಮಾಡಿರುವ ಮಾಹಿತಿ ತಿಳಿಯಿತು. ದಾಳಿ ನಡೆಸಿದಾಗ 2ಕೆ.ಜಿ, 5 ಕೆ.ಜಿಯ ಪೊಟ್ಟಣಗಳಲ್ಲಿ ಡ್ರಗ್ಸ್ ತುಂಬಿಟ್ಟಿರುವುದು ಕಂಡುಬಂದಿದೆ. ಇಬ್ಬರು ಆರೋಪಿಗಳು ಮೈಸೂರು ನಿವಾಸಿ ಗಳಾಗಿದ್ದು, ಇಲ್ಲಿಂದ ಇತರೆಡೆಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ತನಿಖೆ ಮುಂದುವರೆಸಿದ್ದೇವೆ” ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಸದನಲ್ಲಿಯೂ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಗೆ ಪುಷ್ಟಿ ನೀಡುವಂತೆ ಇದೀಗ ಹುಣ ಸೂರಿನಲ್ಲಿ ಮತ್ತೊಂದು ಘಟನೆ ನಡೆದಿರು ವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಡ್ರಗ್ಸ್ ಪ್ರಕರಣಗಳ ಬಗ್ಗೆ ಹೇಳಬೇಕೆಂದರೆ ಡ್ರಗ್ಸ್ ಗೂ ಮೈಸೂರಿಗೂ ನಂಟು ಇರುವುದನ್ನು ತಳ್ಳಿ ಹಾಕಲಾಗದು. ಇಲ್ಲಿ ಫ್ಯಾಕ್ಟರಿಗಳನ್ನೇ ತೆಗೆಯುವಷ್ಟರ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಇದರ ಜಾಲ ಎಷ್ಟು ಆಳವಾಗಿ ವ್ಯಾಪಿಸಿರಬಹುದು ಎಂಬುದು ಗೊತ್ತಾಗುತ್ತದೆ.
2026ರ ಜ.30ರಂದು ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಘಟಕ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಹೈಟೆಕ್ ಡ್ರಗ್ಸ್ ತಯಾರಿಕಾ ಘಟಕ ಪತ್ತೆಹಚ್ಚಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿತ್ತು.

ಮಹಾರಾಷ್ಟ್ರ ಪೊಲೀಸರು ಮೈಸೂರು `ಹೊರವಲಯದ ರಿಂಗ್ ರಸ್ತೆ ಬಳಿಯ. `ಮಾದಕ ಪದಾರ್ಥಗಳ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿ 50 ಕೆಜಿಗೂ ಹೆಚ್ಚು ಎಂಡಿಎಂಎ ವಶಕ್ಕೆಪಡೆದಿದ್ದರು. ಮುಂದೆ ಕಾರ್ ಗ್ಯಾರೇಜ್ ಮಾಡಿಕೊಂಡು ಅದರ ಹಿಂದೆ ಮೂರು ದೊಡ್ಡ ಕಂಟೇನರ್ಗಳ ಮೂಲಕ ಡ್ರಗ್ ತಯಾರಿಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಇತ್ತೀಚೆಗೆ ಯಾಂದಳ್ಳಿಯಲ್ಲಿ. ಮನೆಯೊಂದರಲ್ಲಿ ಡ್ರಗ್ಸ್ ತಯಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ನಡೆಸಿದ ದಾಳಿಯಲ್ಲಿ ಹಲವು ರಾಸಾಯನಿಕ ವಸ್ತುಗಳು ಮತ್ತು 10 ಬ್ಯಾರಲ್ ರಾಸಾಯನಿಕ ದ್ರವ್ಯ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಯುವಜನತೆ ಮೇಲೆ ಡ್ರಗ್ಸ್ ಅಸ್ತ್ರ… ಇದು ಭಯೋತ್ಪಾದನೆಯ ತಂತ್ರ… ಪೋಷಕರೇ ಹುಷಾರ್!







