LatestMysore

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 5ಲಕ್ಷ ಪರಿಹಾರ ವಿತರಿಸಿದ ಶಾಸಕ ರವಿಶಂಕರ್

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದ ನಿವಾಸಿ ಲವಕುಮಾರ್ ಅವರ ಪತ್ನಿ ರಂಜಿತಾ ಅವರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನೀಡಲಾದ 5 ಲಕ್ಷ ರೂ. ಪರಿಹಾರದ ಚೆಕ್‌ನ್ನು ಶಾಸಕ ಡಿ.ರವಿಶಂಕರ್ ವಿತರಿಸಿದರು.

ಭಾನುವಾರ ಕಂಚಾರಕೊಪ್ಪಲು ಗ್ರಾಮದ ಲವಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ,  ಪರಿಹಾರದ ಚೆಕ್ ನ್ನು ವಿತರಿಸಿ ಇದೀಗ ಪರಿಹಾರದ ಮೊತ್ತವನ್ನು ನೀಡಲಾಗಿದ್ದು, ಕುಟುಂಬದ ಮುಂದಿನ ಭವಿಷ್ಯಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದ ಶಾಸಕರು ಕುಟುಂಬದ ಸಮಸ್ಯೆಗಳಿಗೆ ಸ್ಪಂದಿಸಿ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದರು.

ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಕುಟುಂಬದ ನಿರ್ವಹಣೆಗೆ 50 ಸಾವಿರ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಲ್ಲದೆ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ವೆಚ್ಚವನ್ನು ಭರಿಸುವ ಜವಾಬ್ದಾರಿಯನ್ನೂ ವಹಿಸಿಕೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಮುಖಂಡರಾದ ಎಸ್.ಆರ್.ಮಧು, ಮಾದೇಗೌಡ, ಲಕ್ಷ್ಮಿನಾರಾಯಣ್, ದೊಡ್ಡೇಗೌಡ, ಕೆ.ವಿ.ಕೃಷ್ಣೇಗೌಡ, ಕೆ.ಪಿ.ಲಿಂಗರಾಜು, ಸ್ವಾಮಿ, ಎಸ್.ಪಿ.ತ್ಯಾಗರಾಜು, ದೊರೆನಾಮಧಾರಿ, ನವೀನ್, ಅಭಿ, ಮಹದೇವ್, ರಮೇಶ್ ಡೈರಿ ಮಾದು ಮತ್ತಿತರರು ಹಾಜರಿದ್ದರು.

admin
the authoradmin

Leave a Reply