ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ…. ಪ್ರೇರಣಾ ಫೌಂಡೇಶನ್ ನಿಂದ ಶಿಕ್ಷಣಕ್ಕೆ ನೆರವು!

ಮೈಸೂರು: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೊಂದು ಸುವರ್ಣಾವಕಾಶವನ್ನು Prerana (Infosys Foundation) ನೀಡುತ್ತಿದೆ. ನಿಮ್ಮ ಮನೆಯಲ್ಲಿ ಅಥವಾ ಗ್ರಾಮಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಬಡತನದ ಹಿನ್ನಲೆಯಲ್ಲಿ ಮುಂದಿನ ಓದಿಗೆ ತೊಂದರೆಯಾಗುತ್ತಿದ್ದರೆ ಅಂಥವರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಈ ವರ್ಷ 10(sslc)ನೇ ತರಗತಿ ಪೂರ್ಣಗೊಳಿಸಿ ಶೇ.80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳು NGO – Prerana (Infosys Foundation) ಅನ್ನು ಸಂಪರ್ಕಿಸಿದರೆ ಅವರು ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ನೀಡಲಾಗುತ್ತದೆ.

ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಹಲವಾರು ಸಂಸ್ಥೆಗಳಿದ್ದು, ಇಂತಹ ಸಂಸ್ಥೆಗಳಿಂದ ಸಹಾಯ ಪಡೆಯುವುದು ಹೇಗೆ ಎಂಬುದು ತಿಳಿಯದ ಕಾರಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ Prerana (Infosys Foundation) ಅವಕಾಶವನ್ನು ಒದಗಿಸಿದ್ದು ನಿಮ್ಮಲ್ಲಿ ಪ್ರತಿಭೆಯಿದ್ದು, ಪ್ರೇರಣಾ ಪೌಂಡೇಶನ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಂಡು ಮುಂದಿನ ಶಿಕ್ಷಣಕ್ಕೆ ಆರ್ಥಿಕ ಸಹಾಯ ಪಡೆಯಲು ಅವಕಾಶವಿದೆ. ಲಿಖಿತ ಪರೀಕ್ಷೆಗೆ ಸಂಬಂಧಿಸಿದ ಅರ್ಜಿ(ಫಾರಂ) ನಮೂನೆಯನ್ನು ಪಡೆಯಲು ಸರಸ್ವತಿ – 9900906338, ಶಿವಕುಮಾರ್ – 99866 30301, ಬಿಂದು – 99645 34667 ಅವರನ್ನು ಸಂಪರ್ಕಿಸಬಹುದಾಗಿದೆ.

ನಿಮಗೆ ಪರಿಚಿತ ವಿದ್ಯಾರ್ಥಿಗಳು ಯಾರೂ ಇಲ್ಲದಿದ್ದರೂ, ದಯವಿಟ್ಟು ಈ ಮಾಹಿತಿಯನ್ನು ಹಂಚಿಕೊಳ್ಳಿ. ಯಾರಿಗಾದರೂ ಇದರ ಅವಶ್ಯಕತೆ ಇರಬಹುದು. ಹೀಗಾಗಿ ಇದನ್ನು ಇತರ ಗುಂಪುಗಳಲ್ಲಿಯೂ ದಯವಿಟ್ಟು ಹಂಚಿಕೊಳ್ಳಿ, ಒಬ್ಬ ವಿದ್ಯಾರ್ಥಿಗಾದರೂ ಉಪಯೋಗವಾದರೆ, ಇದು ಒಳ್ಳೆಯ ಮಾಹಿತಿಯಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿ ಎನ್ನುವುದರಲ್ಲಿ ಎರಡು ಮಾತಿಲ್ಲ.
https://gec.karnataka.gov.in/gechassan/public/38/infosys-scholarship/en







