LatestMysore

ಶಿವರಾತ್ರಿ ರಾಜೇಂದ್ರ ಕಲಾ ಬಳಗದ ಕಾರ್ಯಕ್ಕೆ  ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ಶ್ಲಾಘನೆ

ಪ್ರಭುಲಿಂಗ ಲೀಲೆ ನಾಟಕದ ಪ್ರಚಾರ ಕರ ಪತ್ರ ಬಿಡುಗಡೆ

ಮೈಸೂರು: ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ಥಾಪನೆಯಾದ ಶಿವರಾತ್ರಿ ರಾಜೇಂದ್ರ ಕಲಾ ಬಳಗ ಸಾರ್ಥಕ ಸೇವೆ ಸಲ್ಲಿಸುತ್ತಿದೆ ಎಂದು ಜೆಎಸ್ಎಸ್ ಮಹಾ ವಿದ್ಯಾ ಪೀಠದ ಕಾರ್ಯದರ್ಶಿ ಎಸ್ ಪಿ ಮಂಜುನಾಥ್ ಶ್ಲಾಘಿಸಿದ್ದಾರೆ.

ಮಹಾವಿದ್ಯಾಪೀಠದ ಕಿರು ಸಭಾಂಗಣದಲ್ಲಿ ಫೆ.13ರ ಶುಕ್ರವಾರ ರಾತ್ರಿ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಗ್ರಾಮಸ್ಥರ ಒಕ್ಕೊರಲ  ಮನವಿಯಂತೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ದಿವ್ಯ ಕೃಪಾಶೀರ್ವಾದ ಅನುಮತಿ ಮೇರೆಗೆ ಪ್ರದರ್ಶನ ಗೊಳ್ಳಲಿರುವ ಪ್ರಭುಲಿಂಗ ಲೀಲೆ ನಾಟಕದ ಪ್ರಚಾರ ಕರ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.

ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳವರು ನಾಡಿನ ಸಾಂಸ್ಕೃತಿಕ, ಪರಂಪರೆ, ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಕಲೆಗಳಾದ ಪ್ರದರ್ಶಕ ಕಲೆಗಳಾದ ನಾಟಕ, ಸಂಗೀತ, ಶರಣ ಸಾಹಿತ್ಯ ಪ್ರಚಾರಕ್ಕಾಗಿಯೇ ಮಹಾ ವಿದ್ಯಾಪೀಠದ ಪ್ರತ್ಯೇಕ ವಿಭಾಗವೊಂದನ್ನು ಸ್ಥಾಪನೆ ಮಾಡಿ ನಾಡಿನಾದ್ಯಂತ ನಿರಂತರ ಚಟುವಟಿಕೆ ಹಮ್ಮಿ ಕೊಂಡಿರುವುದು ಸರ್ವವೇದ್ಯ ಅದನ್ನು ಜಗತ್ತಿನ ಮೂಲೆ ಮೂಲೆಗಳಲ್ಲಿ ಇಂದಿನ ಶ್ರೀಗಳಾದ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರು ಮತ್ತಷ್ಟು ಪ್ರಚಾರ ಮತ್ತು ಅಗತ್ಯ ಸಹಕಾರ ನೀಡಿ ಆಶೀರ್ವದಿಸುತ್ತಿದ್ದು ನಾಡು ನುಡಿಗೆ ಶ್ರೀ ಮಠ ನೀಡುತ್ತಿರುವ ಕೊಡುಗೆ ಅಪಾರ ಎಂದರು

ಈ ಕಲಾ ಬಳಗ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳವರ 110ನೇ ಜನ್ಮ ದಿನೋತ್ಸವ ದಿನವೇ ಸ್ಥಾಪನೆಯಾಗಿದ್ದು,  ಅಂದು ನಡೆದ ಎಲ್ಲ ಕಾರ್ಯಕ್ರಮಗಳ ಆಯಾಸವನ್ನು ಲೆಕ್ಕಿಸದೆ ಪೂಜ್ಯರೇ ಕುಳಿತು ವೀಕ್ಷಿಸಿ ಆಶೀರ್ವದಿಸಿ ಅಷ್ಟೇ ಅಲ್ಲದೆ ನಾನು ಸುತ್ತೂರು ಜಾತ್ರೆಯಲ್ಲಿ ನಡೆಯುವ ಯಾವುದೇ ಒಂದು ನಾಟಕವನ್ನು ಪೂರ್ಣ ಪ್ರಮಾಣದಲ್ಲಿ ನೋಡದೆ ಇದ್ದವ ಈ ಕಲಾ ಬಳಗದ ನಾಟಕವನ್ನು ಪೂರ್ಣ ಪ್ರಮಾಣದಲ್ಲಿ ಮುಗಿಯುವ ತನಕ ನೋಡಿ ಬಹಳ ಸಂತಸ ತಂದಿದೆ ನಿಜಕ್ಕೂ ಈ ಕಲಾ ಬಳಗದ ಪದಾಧಿಕಾರಿ ಸಮಿತಿ ಎಲ್ಲ ಪಾತ್ರಧಾರಿಗಳು ಬಹಳ ಅಚ್ಚುಕಟ್ಟಾಗಿ ಶಿಸ್ತಿನಿಂದ ಅಭಿನಯಿಸಿ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ.

ಇದು ಒಬ್ಬರದಲ್ಲ ಎಲ್ಲರ ಶ್ರೇಯಸ್ಸು ಮತ್ತು ಯಶಸ್ಸು ಈ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ವಿವಿಧ ಜಿಲ್ಲೆಗಳಿಂದಲೂ ಈ ತಂಡ ಕಳುಹಿಸಿ ಕೊಡುವಂತೆ ಶ್ರೀ ಮಠಕ್ಕೆ ಬಂದು ಪೂಜ್ಯರನ್ನು ವಿನಂತಿಸಿ ಕೊಳ್ಳುತ್ತಿದ್ದು ನನ್ನನ್ನು ಆಹ್ವಾನಿಸುತ್ತಿದ್ದಾರೆ ಈಗಾಗಲೇ ಮೈಸೂರಿನ  ಸುತ್ತೂರು ಮಠ ಸೇರಿದಂತೆ ಮಳವಳ್ಳಿ ಗುಂಡ್ಲುಪೇಟೆ ಶಾಸಕರ ವಿನಂತಿ ಮೇರೆಗೆ ಹಾಲಹಳ್ಳಿ ಸುತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಸುತ್ತೂರು ಕೊತ್ತಲವಾಡಿ ಯಲ್ಲಿ ಪ್ರದರ್ಶನ ನಡೆಯಲಿದೆ ಪ್ರದರ್ಶನಗೊಂಡಿರುವ ಎಲ್ಲ ಕಡೆಯಲ್ಲಿ ಬೆಳಗಿನ ಜಾವದ ವರೆಗೆ ವೀಕ್ಷಿಸಿರು. ಅನೇಕ ಗ್ರಾಮಸ್ಥರು ಭಕ್ತರು ರಂಗಾಸಕ್ತರು ಕರೆ ಮಾಡಿ ಶ್ರೀಗಳಿಗೆ ಮತ್ತು ನನಗೆ ತಿಳಿಸಿ ದ್ದಾರೆ ನನಗೂ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

ಕಾರ್ಯಕ್ರಮದಲ್ಲಿ ಕಲಾ ಬಳಗದ ಪರವಾಗಿ ಗ್ರಾಮಕ್ಕೆ  ನಾಟಕದ ಉದ್ಘಾಟನೆಗೆ ಸ್ವಾಗತಿಸಿ ಮಾತನಾಡಿದ ಕಲಾ ಬಳಗದ ಸಂಸ್ಥಾಪಕ ಅಧ್ಯಕ್ಷರಾದ   ಕಲ್ಮಳ್ಳಿ ನಟರಾಜು  ಅವರು, ಈ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುವ ಜೊತೆಗೆ ಇಲ್ಲಿಗೆ ಬರುವ ಮುನ್ನವೆ ಮಠದ ಭಕ್ತನಾಗಿ ವಿಶ್ವದ ಸಾಂಸ್ಕೃತಿಕ ಕ್ಷೇತ್ರಕ್ಕೆ ಶ್ರೀ ಮಠ  ನೀಡುತ್ತಿರುವ ಕೊಡುಗೆ ನೋಡಿ ನನಗೂ ನೌಕರನಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆ ನಿಜಕ್ಕೂ ಪ್ರಾರ್ಥನೆ ಎಂದಿಗೂ ವ್ಯರ್ಥವಾಗದು ಎನ್ನುವುದಕ್ಕೆ ನಾನೇ ಸಾಕ್ಷಿ.

ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರು ಇಂದು ನಾನು ಬದುಕಿ ಬರಲು ಅವರು ಕಳೆದ 20 ವರ್ಷಗಳ ಹಿಂದೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ  ತೋರಿದ ಪ್ರೀತಿ ನೀಡಿದ ಆರ್ಥಿಕ ನೆರವು ನನ್ನ ಮತ್ತು ಕುಟುಂಬದ ಮೇಲಿದೆ ಅದರ ಋಣ ತೀರಿಸುವ ನಿಟ್ಟಿನಲ್ಲಿ ಅವರ ಕೃಪಾಶೀರ್ವಾದ ಪಡೆದು ಈ ಬಳಗ ಸ್ಥಾಪನೆ ಮೂಲಕ ಕಲಾ ಕ್ಷೇತ್ರಕ್ಕೆ ಕಿಂಚಿತ್ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ ಎಂದರು

ಇದಕ್ಕೆ ಪದಾಧಿಕಾರಿ ಸಮಿತಿ ಸದಸ್ಯರಾದ ಶ್ರೀ ಸುರೇಶ್ ಮಾಲಂಗಿ, ಪರಮೇಶ್ ಮಾಸ್ಟರ್   ಸುರೇಶ್ ಉಮ್ಮತ್ತೂರು  ಗಣೇಶ್ ಬೆನ್ನೆಲು ವಾಗಿ ನಿಂತು ಪೋಷಿಸಿದರು. ಇದಕ್ಕೆ ಅಗತ್ಯ ನೆರವು ಮತ್ತು ಮಾರ್ಗದರ್ಶನವನ್ನು ಕಲಾ ಬಳಗದ ಮಾರ್ಗದರ್ಶಕರಾದ ಮಂಜುನಾಥ ರವರು ನೀಡಿ ಕಲೆ ಉಳಿಸುವಂತೆ ಬೆನ್ನು ತಟ್ಟಿದ ಫಲವಾಗಿ ಇಂದು ಎಲ್ಲೆಡೆಯಲ್ಲಿಯೂ ಈ ಕಲಾಬಳಗ ಪ್ರದರ್ಶಿಸುತ್ತಿರುವ ಪ್ರಭುಲಿಂಗಲೀಲೆ ನಾಟಕ ವ್ಯಾಪಕ ಜನಮನ್ನಣೆ ಗಳಿಸುತ್ತಿದೆ.  ಇದು ನಮ್ಮೆಲ್ಲರ ಜೀವಿತಾವಧಿ ಪುಣ್ಯವೆಂದರೆ ತಪ್ಪಾಗಲಾರದು. ಇದಕ್ಕಾಗಿ ಕಲಾಬಳಗದ ಪರವಾಗಿ ಪೂಜ್ಯರಿಗೆ  ಹಾಗೂ ಮಂಜುನಾಥ್ ರವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಲಾ ಬಳಗದ ಪದಾಧಿಕಾರಿಗಳಾದ ಮಾಲಂಗಿ ಸುರೇಶ್, ಪರಮೇಶ್ ಮಾಸ್ಟರ್  ಸುರೇಶ್ ಗಣೇಶ್ ಮೈಸೂರು ಜಿಲ್ಲಾ ಪಾತ್ರಧಾರಿ ಕಲಾವಿದರಾದ   ಬೆಳಚಲವಾಡಿ ಶಿವಕುಮಾರ್ ಪಾರ್ವತಪ್ಪ ಮುಳ್ಳೂರು ಕರುಹಟ್ಟಿ ಮಲ್ಲಣ್ಣ ಕೊತ್ತಲವಾಡಿ  ಸಿದ್ದರಾಮೇಶ, ಬಾಗಳಿ ಮಹೇಶ್, ಬಾನಹಳ್ಳಿ ಸಂತೋಷ್, ಗೌಡಗೆರೆ ಮಹೇಶ್, ದುಗ್ಗಹಳ್ಳಿ ಸುರೇಶ್, ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಪದಾಧಿಕಾರಿಗಳಾದ  ಮೀನಾಕ್ಷಿ ಬಸವಣ್ಣ, ಶ್ರೀಕಾಂತ ಪದವಿ ಪೂರ್ವ ಪದವಿ ಪ್ರಾಂಶುಪಾಲೆ ಶ್ರೀಮತಿ ಮಾದಲಾಂಬಿಕೆ ಅನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

ವ್ಯಾಜ್ಯ ಇತ್ಯರ್ಥದ ಕಪ್ಪಡಿ ಕ್ಷೇತ್ರ… ಇಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೆ ಜಾತ್ರೆ… ನೀವೂ ತಪ್ಪದೆ ಬನ್ನಿ…

admin
the authoradmin

Leave a Reply

Translate to any language you want