Articles

ಅಕ್ಷರಸಾಮ್ರಾಟ ಎಸ್ಸೆಲ್ ಭೈರಪ್ಪ ಅಜರಾಮರ..  ಸರಸ್ವತಿ ಪುತ್ರನಿಗೆ ಕವಿತೆಯಲ್ಲಿಯೇ ಅಂತಿಮ ನಮನ…

ತೊಂಭತ್ತನಾಲ್ಕು ವಸಂತಋತುಗಳ ಕಂಡಂಥ

ಭಾರತಪರಂಪರೆ ವೈಭವೀಕರಿಸಿದ ಪರಮಪಿತ

ಭವ್ಯ ಸನಾತನ ಧರ್ಮದಾ ಭವಿತವ್ಯ ಪಂಡಿತ

ಕನ್ನಡ ಸಾರಸ್ವತ ಲೋಕದ ರವಿತೇಜ ಮಂಡಿತ

ನವ್ಯತ್ವ ಕಾದಂಬರಿ ನೇಸರದ ಶಶಾಂಕ ಖಂಡಿತ

ಪುರಾಣೇತಿಹಾಸ ಬೆಸೆದುಬರೆದ ತತ್ವಶಾಸ್ತ್ರಪ್ಪ

ಅನುಭವಾಮೃತದ ಅನರ್ಘ್ಯರತ್ನ ಉಚ್ಛಅಪ್ಪ

ವಿಶಿಷ್ಟ ಸ್ವಾನುಭಾವ ವಿಶೇಷ ಚೇತನ ನೀನಪ್ಪ

ಸ್ವಂತಿಕೆ ಸಾಹಿತ್ಯ ಪ್ರಾಕಾರ ಸೃಷ್ಟಿಸಿದ ಬ್ರಹ್ಮಪ್ಪ

ನಿನಗೆ ನೀನೇ ಸಾಟಿ ಅ-ಮೃತ ಎಸ್ಸೆಲ್ ಭೈರಪ್ಪ

ನಿನ್ನಂಥ ಸುಪುತ್ರ ಪಡೆದ ಭುವನೇಶ್ವರಿ ಮಾನ್ಯ

ನಿನ್ನ ಪ್ರತಿಯೊಂದು ಸಾಧನೆಗೆ ಕನ್ನಡಿಗನೆ ಧನ್ಯ

ಮೂವತ್ತಕ್ಕೂಮಿಕ್ಕು ಬರೆದ ಕತೆ,ಕಾದಂಬರಿ ಕರ್ತ

ಅನುಪಮ ಕರ್ತವ್ಯದೊಳು ಅಪ್ರತಿಮ ಸಂತ

ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತ

ವಿಶ್ವಮಾನವ ನಾಡೋಜ ಸರಸ್ವತಿ ಸಮ್ಮಾನ

ಪದ್ಮಶ್ರೀ ಪದ್ಮಭೂಷಣ ಮುಂತಾದ ಸನ್ಮಾನ

ಕಾಣಲಿಲ್ಲ ಯುಗಪುರುಷನ ಶತಕ ಜನ್ಮದಿನ

ಅಜಾತಶತ್ರುಗೆ ಶತ್ರುವಾಗಿ ಜವರಾಯ ಹೊಯ್ದನ

ಸಧ್ಯಕ್ಕೀಗ ದೂರಸರಿದರು ಹೋಗಲು ಯಾನ

ಬಂದೇ ಬರುವರು ಮುಗಿಸಿ ತಮ್ಮ ಮತದಾನ

ಮತ್ತೆ ಹುಟ್ಟುವರು ಧರ್ಮಶ್ರೀ ಇಲ್ಲಿ ನೆಲೆಇರಲು

ಧರಣಿಮಂಡಲಮಧ್ಯೆ ಕರುನಾಡ ವಂಶವೃಕ್ಷದೊಲು

ಪುನರಪಿ ಅವರದೇ ಪರ್ವ-ಸಾಕ್ಷಿ ಪ್ರಾರಂಭಿಸಲು?

ಆವರೆಗೆ ಭೌತಿಕ ಗೈರುಹಾಜರಿ ಮಾತ್ರವೇ ಇದ್ದು

ಸಾಹಿತ್ಯಕ ಬೌದ್ಧಿಕ ಹಾಜರಿಯ ನಿರಂತರ ಸದ್ದು

ಇರುತ್ತದೆ ಎಂಬುದೆ ಸಧ್ಯದ ಸಮಾಧಾನ ಮದ್ದು

ಸನ್ಮಾನ ಬಹುಮಾನ ಪ್ರಶಸ್ತಿ ಗರಿಗಳ ಸರದಾರ

ಆಚಾರ್ಯಮಂದಾರ ಆಚಂದ್ರಾರ್ಕಅಜರಾಮರ

ನಿಮಗಿದೋ ಮನದಾಳದ ಅಂತಿಮ ನಮಸ್ಕಾರ!

24.09.2025ರಂದು ಸಂಜೆ4.30

(35 ನಿಮಿಷದಲ್ಲಿ ಬರೆದ ಭಾವಪೂರ್ಣ ಕವಿತಾನಮನ)

admin
the authoradmin

9 ಪ್ರತಿಕ್ರಿಯೆಗಳು

  • ಆಪ್ತಮಿತ್ರ ಲವ ಸರ್, ನನ್ನಂಥ ಅನೇಕರ ತನು-ಮನ ಗೆಲ್ಲುವಂಥ ಪ್ರತಿಭಾವಂತ ಪತ್ರಿಕೋದ್ಯಮಿ-ಕಂ-ಸಾಹಿತಿ, ನಿಮಗೆ ನೀವೇ ಸರಿಸಾಟಿ, ಅನೇಕಾನೇಕ ಧನ್ಯವಾದಗಳು, a big salute for u sir ♥

  • ಕಾದಂಬರಿ ಪ್ರಪಂಚದ ಮಹಾರಾಜ ಡಾ.ಎಸ್.ಎಲ್.ಭೈರಪ್ಪನವರ ಬಗ್ಗೆ
    ಕುಮಾರಕವಿ ನಟರಾಜರು ಅಮೋಘ ರೀತಿಯಲ್ಲಿ ಭೈರಪ್ಪನವರ ಉತ್ತಮ ಕಾದಂಬರಿಗಳ ಹೆಸರಿನ ಉದಾಹರಣೆ ಮೂಲಕ ಬಹಳ ಅಪರೂಪದ ಶೈಲಿಯಲ್ಲಿ ಬರೆಯುವ ಮೂಲಕ ತಮ್ಮ ಭಾವಪೂರ್ಣ ಅಶ್ರುತರ್ಪಣ ಕವನ ಬರೆದಿದ್ದಾರೆ. ಇಂಥದ್ದೊಂದು ಹೊಸ ಪ್ರಯತ್ನ ನಾನಂತೂ ಓದಿದ್ದು ಇದೇ ಮೊದಲು ಎಂದು ಹೆಮ್ಮೆಯಿಂದ ತಿಳಿಸಲು ಇಷ್ಟಪಡುತ್ತೇನೆ. ಪತ್ರಿಕಾ ಸಂಪಾದಕರು ಹಾಗೂ ಸಿಬ್ಬಂದಿಯವರಿಗೂ ನನ್ನ ಸಾವಿರ ವಂದನೆ.

  • ಅಪರೂಪದ ರೀತಿಯಲ್ಲಿ ಕುಮಾರಕವಿ ತಮ್ಮ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ದಿಟವಾಗಿ ಈ ಕವನ ನಮನ ಪ್ರಯತ್ನ ಶ್ಲಾಘನೀಯ ಕಾರ್ಯ. ಇಡೀ ಪತ್ರಿಕಾ ಬಳಗಕ್ಕೆ ನಮೋ ನಮಃ

  • ಡಾ.ಎಸ್.ಎಲ್.ಭೈರಪ್ಪನವರ ಬಗ್ಗೆಲ್ಲ ಕವಿತೆ ಸಾಲುಗಳಲ್ಲಿ ಸಂಕ್ಷಿಪ್ತ ವಿವರ ನೀಡಿದ ಮಹಾಕವಿ ನಟರಾಜರಿಗೆ ಧನ್ಯವಾದ, ಬಹಳ ಚಲೋ ಐತ್ರಿ ಸಂಪಾದಕ ಸಾಹೇಬ್ರೇ. ನಮ್ಮ ಕಲ್ಯಾಣ ಕರ್ನಾಟಕದ ಸಾಮಾನ್ಯ ಮಂದಿಗೆ ಇವ್ಯಾವೂ ತಿಳಿದಿಲ್ರೀ ಸಾಹೇಬ್ರ…..ನಮಸ್ತೇ ಸಾ..ರಾ…

ನಿಮ್ಮದೊಂದು ಉತ್ತರ

Translate to any language you want