janamanakannada > Blog > Latest > Mysore > ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕ ಸಂಘದಿಂದ ವಿಕ್ರಂ ಮುತ್ತಣ್ಣರಿಗೆ ಅಭಿನಂದನೆ ಸಮರ್ಪಣೆ
ಮೈಸೂರು: ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಸ್ಟಾರ್ ಆಫ್ ಮೈಸೂರ್ ಸಂಜೆ ದಿನ ಪತ್ರಿಕೆಯು ಮೈಸೂರು ನಗರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಜನಮನವನ್ನು ಗೆದ್ದಿದ್ದು, ಇದೀಗ 49ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪತ್ರಿಕೆಯನ್ನು ಮುನ್ನಡೆಸುತ್ತಿರುವ ಸಂಪಾದಕರಾದ ವಿಕ್ರಂ ಮುತ್ತಣ್ಣ ಅವರನ್ನು ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕ ಸಂಘದ ವತಿಯಿಂದ ಅಭಿನಂದಿಸಿ ಗೌರವಿಸುವ ಮೂಲಕ ಶುಭಾಶಯ ಕೋರಲಾಯಿತು.

ಈ ವೇಳೆ ಮೈಸೂರು ಜಿಲ್ಲಾ ಪತ್ರಿಕಾ ಛಾಯಾಗ್ರಾಹಕ ಸಂಘದ ಅಧ್ಯಕ್ಷರಾದ ಪ್ರಗತಿ ಗೋಪಾಲಕೃಷ್ಣ, ಉಪಾಧ್ಯಕ್ಷರಾದ ಕೆ.ಎಚ್.ಚಂದ್ರು, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಯಾದವ್, ಖಜಾಂಚಿ ಎಸ್ ಉದಯ್ ಶಂಕರ್ ಸದಸ್ಯರುಗಳಾದ ಎಂ.ಎಸ್.ಬಸವಣ್ಣ, ಹಂಪ ನಾಗರಾಜು, ಗವಿಮಠ ರವಿ ಉಪಸ್ಥಿತರಿದ್ದರು.
ವ್ಯಾಜ್ಯ ಇತ್ಯರ್ಥದ ಕಪ್ಪಡಿ ಕ್ಷೇತ್ರ… ಇಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೆ ಜಾತ್ರೆ… ನೀವೂ ತಪ್ಪದೆ ಬನ್ನಿ…
Tags:mysore news
admin








