2026 ಯುಗಾದಿ.. ಪರಾಭವ ಸಂವತ್ಸರ… ತಿನ್ನುವ ಮುನ್ನ ಬೇವುಬೆಲ್ಲ.. ಪ್ರತಿಜ್ಞೆ ಮಾಡೋಣ ನಾವೆಲ್ಲ ..

ಇದು ಹೊಸವರುಷದ ಹೊಸ ಹರುಷದ ಹಬ್ಬವಾದ ಯುಗಾದಿಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರ ಕವನದ ಮುನ್ನುಡಿ…
ಬಂದು ಹೋಗುವ ಸಂವತ್ಸರ
ಯಾವುದಾದರೇನು?
ಮನದೊಳಗಿನ ಮದಮತ್ಸರ
ಕಿತ್ತೊಗೆಯಬೇಕಿನ್ನು!
ಮಾಡಲೇಬೇಕು
ಒಳಹೊರಗಿನ ಶತೃಸಂಹಾರ
ಉಕ್ಕುವುದೆಲ್ಲೆಡೆ
ಶಾಂತಿನೆಮ್ಮದಿ ಮಹಾಪೂರ!
ತಿನ್ನುವ ಮುನ್ನ ಬೇವು ಬೆಲ್ಲ
ಪ್ರತಿಜ್ಞೆ ಮಾಡೋಣ ನಾವೆಲ್ಲ
ಹೆಣ್ಣುಹೊನ್ನುಮಣ್ಣು ನಾಡೆಲ್ಲ
ನಾವೇ ರಕ್ಷಣೆ ಮಾಡಬೇಕಲ್ಲ
ತಾಯ್ನಾಡು ತಾಯಿಭಾಷೆ ತಾಯ್ತನ
ಮಾತಾಪಿತ ಆಚಾರ್ಯಅತಿಥಿ ಅನ್ನ
ಇವರೆಲ್ಲರ ಬಗ್ಗೆ ಸದಾ ಇರಿಸೋಣ
ಶ್ರದ್ಧೆ ಸುಜ್ಞಾನ ಗೌರವ ಅಭಿಮಾನ
ದೇಶ ಸುತ್ತಿ ಕೋಶ ಓದೋಣ
ಸಂಸ್ಕೃತಿ ಸನ್ನಡೆ ಕಲಿಯೋಣ
ಚೆನ್ನುಡಿ ಮುನ್ನುಡಿ ಕಲಿಸೋಣ
ಶ್ರೇಷ್ಠರು ಬದುಕಲು ಬಿಡೋಣ
ವಾಟ್ಸಪ್ ಟ್ವಿಟರ್ ಗೂಗಲ್ ಎಕ್ಸ್
ಯುಟ್ಯೂಬ್ ಫೇಸ್ ಬುಕ್ ಡ್ರಗ್ಸ್
ಇತ್ಯಾದಿಗಳ ವ್ಯಸನಿ ದಾಸನಾಗದೆ
ತ್ರಿಕರಣ ಶುದ್ಧಿಯಿಂದ ಬದುಕೋಣ
ಸಕಲ ಸಂಕುಲ ಸರ್ವರ ಜೀವನ
ಪರಮ ಪಾವನ ಗೊಳಿಸೋಣ
ಹಳೇಯದಕ್ಕೆ ವಿದಾಯ ಹೇಳುತ್ತಾ
ಹೊಸತನ್ನು ಸಂಭ್ರಮದಿ ಸ್ವಾಗತಿಸೋಣ
ಎಂಬ ಸದಭಿರುಚಿಯ ಚಿಂತನೆಯಲ್ಲಿದ್ದಾಗ
ಬಂತು ತೇಲಿ…..ತೇಲಿ…..
ಆಕಾಶವಾಣಿ ಬಾನುಲಿಯಲ್ಲಿ…..
‘’ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ….
ಹೊಸ ವರ್ಷದ ಹೊಸ ಹರ್ಷಕೆ
ಹೊಸತು ಹೊಸತು ತರುತಿದೆ..
ಹೊಸತು ಹೊಸತು ತರುತಿದೆ….









ಧನ್ಯವಾದಗಳು ಲವ ಸರ್
ಇಪ್ಪತ್ತು ಸಾಲಿನ ಕವಿತೆಯಲ್ಲಿ ಅಡಗಿದೆ ಸಾವಿರ ಸಾವಿರದಷ್ಟು ಅರ್ಥ ಆಶ್ಚರ್ಯ ಆನಂದ ಅಗತ್ಯ.ಕುಮಾರಕವಿಯವರ ಬರಹ-ಸಾಹಿತ್ಯ ಪ್ರತಿಭಾ ಪರ್ವತಶಿಖರಕ್ಕೆ
ನೂರು ನೂರು ನಮೋ ನಮಃ
ಇಪ್ಪತ್ತು ಸಾಲಿನ ಕವಿತೆಯಲ್ಲಿ ಅಡಗಿದೆ ಸಾವಿರ ಸಾವಿರದಷ್ಟು ಅರ್ಥ ಆಶ್ಚರ್ಯ ಆನಂದ ಅಗತ್ಯ ಮಾಹಿತಿ ಮಾರ್ಗದರ್ಶನ ಎಲ್ಲವೂ…. ಕುಮಾರಕವಿಯವರ ಇಂತಹ ಅಮೋಘ ಬರಹ-ಸಾಹಿತ್ಯದ ಪ್ರತಿಭಾ ಪರ್ವತ ಶಿಖರಕ್ಕೆ ನನ್ನ ಮನದಾಳದಿಂದ ನೂರು ನೂರು ಬಾರಿ ನಮೋ ನಮಃ
ಪೃಥ್ವಿ, ಶಿರ್ಖೆ, ಬೆಂಗಳೂರು