ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ನಿರುದ್ಯೋಗಿ ಮಹಿಳೆಯರು ಟಿವಿ ವೀಕ್ಷಣೆ, ಹರಟೆಯಲ್ಲಿ ಕಾಲಹರಣ ಮಾಡದೆ ಹೊಲಿಗೆ ತರಬೇತಿ ಪಡೆದು ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದು ಶಾಸಕ ಹರೀಶ್ ಗೌಡ ಪತ್ನಿ ವರ್ಷಾ ಹರೀಶ್ ಗೌಡ ಸಲಹೆ ನೀಡಿದರು.
ಸಮೀಪದ ಕರ್ಣಕುಪ್ಪೆ ಗ್ರಾಮದಲ್ಲಿ ಜೆಎಸ್ಎಸ್ ಸಂಸ್ಥೆ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಿರುದ್ಯೋಗಿ ಮಹಿಳೆಯರಿಗೆ ಟೈಲರಿಂಗ್, ಕರಕುಶಲ ತರಬೇತಿ, ಎಂಬ್ರಾಯಿಡರಿ, ಊದುಬತ್ತಿ, ಮುಂಬತ್ತಿ ತಯಾರಿಕೆ, ಗೃಹಬಳಕೆ, ವಾಸ್ತು ತಯಾರಿಕೆ ಸೇರಿದಂತೆ ಹಲವು ತರಬೇತಿ ಪಡೆದ ಮಹಿಳೆಯರು ಸ್ವಂತ ಉದ್ಯೋಗ ಮಾಡಬೇಕು ಎಂದರು

ಇದರ ಜೊತೆಗೆ ಹೈನುಗಾರಿಕೆ ಬ್ಯಾಗ್ ತಯಾರಿಸುವುದು ಗುಡಿ ಕೈಗಾರಿಕೆ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನಕ್ಕೆ ಒತ್ತು ನೀಡಿ ಉತ್ತಮ ಕುಟುಂಬ ನಡೆಸಲು ಮಹಿಳೆಯರು ಸಹಕಾರಿಯಾಗಬೇಕು ಮಹಿಳೆ ದಿಟ್ಟ ನಿರ್ಧರ ತೆಗೆದುಕೊಂಡರೆ ಏನನ್ನು ಬೇಕಾದರೂ ಸಾಧಿಸಬಹುದು. ಒಂದು ಕುಟುಂಬ ಆರ್ಥಿಕ ಜೀವನ ಸುಧಾರಣೆ ಆಗಬೇಕಾದರೆ ಮಹಿಳೆ ಮನಸ್ಸು ಮಾಡಿದಾಗ ಮಾತ್ರ ಸಾಧ್ಯ ಎಂದರು.
ಸರಿಯಾದ ರೀತಿಯಲ್ಲಿ ಜೀವನ ನಡೆಸುವುದರ ಜೊತೆಗೆ ಮಕ್ಕಳ ಉತ್ತಮ ವಿದ್ಯಾಭ್ಯಾಸ ನೀಡಿ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಬೇಕು ಹಳ್ಳಿಯ ಜೀವನ ತುಂಬಾ ಕಷ್ಟಕರವಾಗಿದ್ದು ಮಳೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವುದರಿಂದ ಇಂತಹ ಸಂದರ್ಭಗಳಲ್ಲಿ ಹೈನುಗಾರಿಕೆ ಗುಡಿ ಕೈಗಾರಿಕೆ ಟೈಲರಿಂಗ್ ತರಬೇತಿ ಇತರ ಹಲವು ಕೌಶಲ್ಯ ಆಧಾರಿತ ತರಬೇತಿಗಳನ್ನು ಪಡೆದು ಮಹಿಳೆಯರು ಮುಂದೆ ಬರಬೇಕೆಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹರವೆ ಶ್ರೀಧರ್, ಕೆಎಂ ರಾಜಣ್ಣ, ಮಾದೇವಪ್ಪ, ಅಶೋಕ್ ತರಬೇತಿದಾರರಾದ ಕವಿತಾ, ಚೈತ್ರ, ಪಂಕಜ ಇನ್ನಿತರರು ಇದ್ದರು.








