LatestMysore

ತಂದೆ ಅಗಲಿಕೆ ನೋವಲ್ಲೂ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆ ದೃತಿರಾಜ್

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ತಂದೆಯ ಅಗಲಿಕೆಯ ನೋವನ್ನು ಮೆಟ್ಟಿನಿಂತು 625ಕ್ಕೆ 616 ಅಂಕ ಪಡೆದ ಹಿರೀಕ್ಯಾತನಹಳ್ಳಿ ಗ್ರಾಮದ ಗ್ರಾಮೀಣ ಪ್ರತಿಭೆ ದೃತಿರಾಜ್ ಸಾಧನೆ ಮಾಡಿ ಶಾಲೆಗೂ, ಊರಿಗೂ ಪೋಷಕರಿಗೂ ಹೆಮ್ಮೆ ತಂದಿದ್ದಾಳೆ.

ಹಿರಿಕ್ಯಾತನಹಳ್ಳಿ ನಿವಾಸಿ ಲೇಟ್ ರಾಜಣ್ಣ ಎಚ್ ಆರ್ (ಮಿಲ್ಟ್ರಿ ರಾಜಣ್ಣ) ಮತ್ತು ಸುಧಾ ಹೆಚ್ ಎನ್ ದಂಪತಿ ಸುಪುತ್ರಿ  ದೃತಿರಾಜ್  ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ  ವ್ಯಾಸಂಗ ಮಾಡುತ್ತಿದ್ದು  ಈ ವಿದ್ಯಾರ್ಥಿನಿಯ ತಂದೆ ರಾಜಣ್ಣ  ಕಳೆದ 8 ತಿಂಗಳ ಹಿಂದಷ್ಟೇ   ಹೃದಯಘಾತದಿಂದ ಮರಣ ಹೊಂದಿದ್ದು ತಂದೆಯ ಅಗಲಿಕೆಯ ನೋವಿನ ನಡುವೆಯೂ  ಎಸ್ ಎಸ್ ಎಲ್ ಸಿ  ಪರೀಕ್ಷೆಯನ್ನು  ಬರೆದು ಅತ್ಯುತ್ತಮ ಅಂಕವನ್ನು ಗಳಿಸಿ ಗಮನಸೆಳೆದಿದ್ದಾಳೆ.

ತಂದೆಯ ಸಾವಿನ ಬಳಿಕವೂ  ಎದೆಗುಂದದ  ದೃತಿ ರಾಜ್ ನೋವಿನ ನಡುವೆಯೂ   ನಿರಂತರ ವಿದ್ಯಾಭ್ಯಾಸದಲ್ಲಿ ತೊಡಗಿ  ಉತ್ತಮ ಅಂಕ ಪಡೆದಿರುವುದು  ಯುವ ಸಮೂಹಕ್ಕೆ ಒಂದು ಮಾದರಿಯಾಗಿದ್ದಾಳೆ. ಇವಳ  ತಾತ ಲೇಟ್ ರಾಜೇಗೌಡ ರವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.  ಇವರ ಅಜ್ಜಿ ಸೌಭಾಗ್ಯ ಅವರ ಶ್ರಮದ ಸಹಕಾರದಿಂದ ಓದಿದ ನಾನು ಅವರಂತೆ ತಾನು ಸಹ   ದೇಶ ಸೇವೆ ಮಾಡುವ ಮೂಲಕ  ಅಥವಾ ವೈದ್ಯಕೀಯ ಸೇವೆ ಮೂಲಕ  ಬಡ ಜನರ ಸೇವೆ ಮಾಡುವ ಮಹತ್ವಾಕಾಂಕ್ಷೆಯನ್ನು  ಹೊಂದಿರುವುದಾಗಿ ಮನದ ಇಂಗಿತವನ್ನು ದೃತಿರಾಜ್ ಹೊರಗೆಡವಿದ್ದಾರೆ.  ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದಾರೆ.

admin
the authoradmin

Leave a Reply

Translate to any language you want