LatestMysore

ಸೂಕ್ಷ್ಮಾತೀತ  ಸಮುದಾಯಗಳು ಸಮಾಜದ ಮುನ್ನಲೆಗೆ ಬರಬೇಕು : ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಸೂಕ್ಷಾತೀತ ಸಮುದಾಯ ಸಮಾಜದ ಮುನ್ನಲೆಗೆ ಬರಬೇಕು ಎಂದು ಶಾಸಕ ರವಿಶಂಕರ್ ರವರು  ಹೇಳಿದರು.

ಪಟ್ಟಣದ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ  ಇತ್ತೀಚೆಗೆ ನಡೆದ ಶ್ರೀ ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು ಸಮಾಜದಲ್ಲಿ ಸೂಕ್ಷಾತೀತ ಸಮಾಜಗಳು ತಮ್ಮ ಪ್ರತಿಭೆಗಳ ಮೂಲಕ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸ್ಥಾನಮಾನವನ್ನು ಪಡೆದು ಉನ್ನತ ಅಧಿಕಾರಗಳನ್ನು ಪಡೆದು ಸಮಾಜದ ಮುನ್ನಲೆಗೆ ಬರಬೇಕು ಜೊತೆಗೆ ನಾನು ಮತ್ತು ನಮ್ಮ ಕಾಂಗ್ರೇಸ್ ಪಕ್ಷ ಈ ಸೂಕ್ಷಾತೀತ ಸಮಾಜದ ಪರವಾಗಿದ್ದು ಅವರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದು ಮುಂದೆಯೂ ಸಹ ಅವರ ಕೆಲಸ ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಪಟ್ಟಣದಲ್ಲಿರುವ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಬೇಕಾಗಿರುವ ಅಗತ್ಯ ಅನುದಾನದ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.

ಅರ್ಕ ಫೌಂಡೇಶನ್‌ನ ಸಂಸ್ಥಾಪಕರಾದ ಹಾಗೂ ಸಮಾಜದ ಗುರುಗಳಾದ ಶ್ರೀ ಯೋಗಿ ಶ್ರೀನಿವಾಸ ಅರ್ಕ ಸ್ವಾಮೀಯವರು ನೇರೆದಿದ್ದ ಭಕ್ತಾಧಿಗಳಿಗೆ ರಾಮಾನುಜಾಚಾರ್ಯರ ತಿರುನಕ್ಷತ್ರದ ದಿನದ ಮಹತ್ವವನ್ನು ಸವಿವರವಾಗಿ ತಿಳಿಸಿದರು. ಮತ್ತು ಶ್ರೀ ವೈಷ್ಣವ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳು ನಮ್ಮ ನಡೆನುಡಿಗಳು ಯಾವ ರೀತಿ ಇರಬೇಕು ಯಾವ ರೀತಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಯಾವ ರೀತಿ ನಮ್ಮ ಸಮುದಾಯ ಸಂಘಟಿತರಾಗಬೇಕು ನಮ್ಮ ಶ್ರೀ ವೈಷ್ಣವ ಸಂಸ್ಕೃತಿಯನ್ನು ಮುಂದಿನ ಪಿಳಿಗೆಗೆ ತೆಗೆದುಕೊಂಡು ಹೋಗಬೇಕು. ಮೈಸೂರಿನ ಬೋಗಾದಿ ಗದ್ದಿಗೆ ರಸ್ತೆಯಲ್ಲಿರುವ ಶ್ರೀ ಅರ್ಕ ಫೌಂಡೇಶನ್ ವತಿಯಿಂದ ಸಮಾಜದಲ್ಲಿ ನಮ್ಮ ಸಂಸ್ಕೃತಿಯನ್ನು ಯಾವ ರೀತಿ ಉಳಿಸಿ ಬೆಳೆಸುತ್ತೀದ್ದೇವೆ ಅಲ್ಲಿನ ಕಾರ್ಯಕ್ರಮಗಳ ವಿವರವನ್ನು ಸವಿವರವಾಗಿ ಭಕ್ತಾಧಿಗಳಿಗೆ ತಿಳಿಸಿದರು.

ಮಾಜಿ ಸಚಿವ  ಸಾ.ರಾ.ಮಹೇಶ್ ಮಾತನಾಡಿ ರಾಮಾನುಜಾಚಾರ್ಯರು ಇಡೀ ದೇಶವನ್ನು ಸುತ್ತಿ ಜಾತಿ ವ್ಯವಸ್ಥೆಯ ವಿರುದ್ದ ಹೋರಾಟಮಾಡಿದ ಮಹಾನ್ ವ್ಯಕ್ತಿಯಾಗಿದ್ದವರು ಅಂಥವರ ಜಯಂತಿಯನ್ನು ಆಚರಣೆಮಾಡುತ್ತಿರುವುದು ಸಂತಸದ ವಿಚಾರ ಎಂದರು.

ದೇವರು ಒಬ್ಬನೇ ಒಬ್ಬರು ಒಂದೊಂದು ದೇವರನ್ನು ಪೂಜಿಸುತ್ತಾರೆ. ನೀವು ಮಾಡುವ ಒಳ್ಳೆಯ ಕೆಲಸಗಳಿಗೆ ನಮ್ಮ ಬೆಂಬಲ ಇದ್ದೆ ಇರುತ್ತದೆ. ನಾನು ವೈಯುಕ್ತಿವಾಗಿ ಕೂಡ ಸಹಾಯವನ್ನು ಮಾಡುತ್ತೇನೆ. ಮತ್ತೇ ಕುಮಾರಸ್ವಾಮಿಯವರನ್ನು ಭೇಟ ಮಾಡಿ 5 ಲಕ್ಷ ರೂಪಾಯಿಗಳ ಅನುದಾನವನ್ನು ಅವರ ಕಡೆಯಿಂದ  ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮತ್ತು ಉನ್ನತ ವ್ಯಾಸಂಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ಸೇರಿದಂತೆ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು. ಈ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಉಡುಗೊರೆ ನೀಡಿದ ವಸಂತಮ್ಮ ಮತ್ತು ಗಿರೀಶ್, ರಾಘವನ್ ಮತ್ತು ಕುಟಂಬದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶ್ರೀ ವೈಷ್ಣವ ಸಂಘದ ಅಧ್ಯಕ್ಷರಾದ ಕೆ.ವಿ.ಲೋಕೇಶ್, ಲೋಕೋಪಯೋಗಿ ಇಲಾಖೆ ಮೈಸೂರಿನ ನಿವೃತ್ತ ಇಂಜಿನಿಯರ್ ಜೆ.ಎಸ್.ಪ್ರಸಾದ್, ಮೈಸೂರು ಜಿಲ್ಲಾ ವೈಷ್ಣವ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ರೈತ ಸಂಘದ ರಾಜ್ಯ ನಾಯಕರಾದ ಕುಮಾರ್, ಕಾಂಗ್ರೆಸ್ ಪಕ್ಷದ ವಕ್ತಾರರಾದ ಸೈಯದ್ ಜಾಬೀರ್, ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಪ್ರಸನ್ನ, ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರುಕ್ಮಾಂಗದ, ಖಜಾಂಜಿ ಕೆ.ಆರ್.ಗಣೇಶ್, ಸಹಕಾರ್ಯದರ್ಶಿ ಸ್ಪಿನ್ ಕೃಷ್ಣ, ದಿಲೀಪ್, ಮೂರ್ತಿ, ಮುತ್ತರಾಜು, ಶಿಕ್ಷಕರಾದ ಲಲಿತ, ಸವಿತ, ನಾಗರತ್ನ, ಜಯರಾಮು, ಹರೀಶ್, ಮಂಜುನಾಥ್, ಕಾಂತರಾಜು, ಕುಮಾರ್, ಗೋವಿಂದರಾಜು, ಜಯರಾಮುರಮೇಶ್, ಸ್ಪಿನ್ ಅಶ್ವಿನಿ, ಶ್ವೇತಾ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want