LatestMysore

ಕೆ.ಆರ್.ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ವಾಸವಿ ಜಯಂತಿ ಆಚರಣೆ.. ಜಯಘೋಷದೊಂದಿಗೆ ಮೆರವಣಿಗೆ

ಕೆ.ಆರ್.ನಗರ(ಜಿಟೆಕ್ ಶಂಕರ್): ಪಟ್ಟಣದ  ಆರ್ಯ ವೈಶ್ಯ ಮಂಡಳಿ ವತಿಯಿಂದ ವಾಸವಿ ಜಯಂತಿಯನ್ನು ಅತ್ಯಂತ ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.  ಜಯಂತಿಯ ಅಂಗವಾಗಿ ಸರ್ವಾಲಂಕಾರ ಭೂಷಿತೆಯಾದ ವಾಸವಿ ತಾಯಿಯ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ‌ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಗಿ ಬಂದ ನೂರಾರು ಮಂದಿ ಭಕ್ತರು ದೇವರಿಗೆ ಜಯಘೋಷ ಮೊಳಗಿಸಿದರು.

ವಾಸವಿ ಜಯಂತಿಯ ಅಂಗವಾಗಿ ಬಜಾರ್ ರಸ್ತೆಯ ಪಕ್ಕದಲ್ಲಿರುವ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ ಮಾಡಲಾಯಿತಲ್ಲದೆ, ಮಹಾ ಮಂಗಳಾರತಿ ನೆರವೇರಿಸಿ ಇದರೊಂದಿಗೆ ದೇವಾಲಯದ ಪ್ರಾಂಗಣವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು.

ದೇವರ ಉತ್ಸವ ಮತ್ತು ದೇವಾಲಯದಲ್ಲಿ ವಿಶೇಷ ಪೂಜೆಯ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದುಕೊಂಡರು.   ಆರ್ಯ ವೈಶ್ಯ ಮಂಡಳಿ ಮತ್ತು ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ವಾಸವಿ‌ ಮಹಲ್ ನಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಂಡಳಿಯ ಅಧ್ಯಕ್ಷ ಶಂಕರನಾರಾಯಣಶೆಟ್ಟಿ, ಕಾರ್ಯದರ್ಶಿ ವೈ.ಎಸ್.ಕುಮಾರ್, ಉಪಾಧ್ಯಕ್ಷರ ರವೀಂದ್ರ, ಪದಾಧಿಕಾರಿಗಳಾದ ಗಣೇಶರಾಜು, ಚನ್ನಪ್ಪಶೆಟ್ಟಿ, ದೂಲಿ ಮಂಜುನಾಥ ಬಾಬು, ಶ್ರೀಧರ್, ರಂಗನಾಥ್, ವೈ.ಆರ್.ವಿಶ್ವನಾಥ ಶೆಟ್ಟಿ, ವೈ.ಎಸ್.ಅವಿನಾಶ್, ಚಂದ್ರಿಕಾ, ಲಕ್ಷ್ಮಿಶ್ರೀಧರ್, ಯುವ ಜನ ಸಂಘದ ಅಧ್ಯಕ್ಷ ವಿನಯ್, ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಲ್.ಅಮರ್ ನಾಥ್, ಸುನೀತಾ ಅಮರ್ ನಾಥ್, ಭೂಷಣ್, ವಿನಯ್ ಕುಮಾರ್, ಸುನೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು

admin
the authoradmin

Leave a Reply

Translate to any language you want