LatestMysore

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಮಕ್ಕಳ ಸಮಾವೇಶ… ಗೀತಾ ಪಠಣ, ದೇಸಿ ಆಟಗಳ ಅರಿವು..

ಮೈಸೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಮೈಸೂರು ಜಿಲ್ಲಾ ಸಮಿತಿಯ ಮಕ್ಕಳ ಪ್ರಕಾರದ ವತಿಯಿಂದ ಮಕ್ಕಳ ಸಮಾವೇಶವನ್ನು ಮೈಸೂರಿನ ಶ್ರೀ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಲಯ ಪ್ರಮುಖ್ ಡಾ ವಿ ರಂಗನಾಥ್ ಉದ್ಘಾಟನೆ ನೆರವೇರಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಭಾರತೀಯ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯ ಮೌಲ್ಯಗಳನ್ನು ಪರಿಚಯಿಸುವ ಪ್ರಯತ್ನವಾಗಿ ಮಕ್ಕಳ ಸಮಾವೇಶ ಆಯೋಜಿಸಲಾಗಿದೆ ಎಂದರು.

ಮೈಸೂರು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಎಸ್. ಸುಬ್ರಮಣ್ಯ ಅವರು ಶಾಲೆಗಳ ಪರಿಸರದಲ್ಲೇ  ಮಕ್ಕಳ ಪ್ರಕಾರದ ಕಾರ್ಯಕ್ರಮಗಳನ್ನು ಆಯೋಜಿಸುವ ಹಾಗೂ ಈಗಾಗಲೇ ಮೈಸೂರು ನಗರದ ವಿವಿಧ ಬಡಾವಣೆಯಲ್ಲಿ ಯಶಸ್ವೀಯಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಾಹಿತ್ಯ ಕೂಟಗಳಲ್ಲಿ ಮಕ್ಕಳ ಪ್ರಕಾರದ ಕಾರ್ಯಕ್ರಮ ರೂಪಿಸುವ ಪ್ರಯತ್ನ ನಡೆದಿದೆ ಎಂದರು.

ಇದೇ ಕಾರ್ಯಕ್ರಮದ ಮುಖ್ಯ ಭಾಗವಾದ ಮಕ್ಕಳ ಸಮಾವೇಶ ವಿಶೇಷತೆಯಿಂದ ಕೂಡಿತ್ತು. ಗೀತಾ ಪಠಣ, ದೇಸಿ ಆಟಗಳು, ಹಾಡು, ಕಲಿಕೆ, ಕತೆ ಹೇಳುವ, ಕೇಳಿಸುವ ಕಲೆ,  ಯೋಗ ಪ್ರಕಾರಗಳು, ಪೇಪರ್ ಕಲಾಕೃತಿಗಳ ರಚನೆ, ಸುಲಭ ವಿಜ್ಞಾನ ಪ್ರಯೋಗ ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.

5 ರಿಂದ 12 ವಯಸ್ಸಿನ ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಕ್ಕಳ ಸಮಿತಿಯ ಅಧ್ಯಕ್ಷ ಕೆ ಎಲ್ ನಾಗರಾಜ್ ಹಾಗೂ ಸಮಿತಿಯ ಎಚ್‌ ಜಿ ಜಗದೀಶ್, ಶ್ರೀಮತಿ ಎಚ್ ವೈ ಕಾತ್ಯಾಯಿನಿ, ಶ್ರೀಮತಿ ತೇಜಸ್ವಿನಿ, ಕಾರ್ಯದರ್ಶಿ ಎಸ್. ಸುಬ್ರಮಣ್ಯ, ಜಿ ಲಕ್ಷ್ಮಣ, ರಾಜಾರಾಮ್ ಭಟ್ ವಿಠೋಬ, ಜಯಮಾಲ, ವಿವಿಧ ಸಾಹಿತ್ಯ ಕೂಟ ಸಂಚಾಲಕರು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want