LatestMysore

ನಿವೃತ್ತಿ ಹೊಂದಿದ ಶಿಕ್ಷಕ ಎನ್. ಕುಮಾರ್ ಅವರಿಗೆ ಸಹದ್ಯೋಗಿಗಳಿಂದ ಆತ್ಮೀಯವಾದ ಬೀಳ್ಕೊಡುಗೆ

ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ತಾಲೂಕಿನ ಮಂಟಿಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ಎನ್. ಕುಮಾರ್ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಸಹೋದ್ಯೋಗಿಗಳು ಎನ್. ಕುಮಾರ್ ಅವರ ಶಿಕ್ಷಣ ಕ್ಷೇತ್ರದಲ್ಲಿನ ದೀರ್ಘಕಾಲದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ವಿದ್ಯಾರ್ಥಿಗಳ ಅಭಿವೃದ್ದಿಗೆ ಅವರು ಸಲ್ಲಿಸಿದ ಕೊಡುಗೆ ಶ್ಲಾಘನೀಯವೆಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಕೋಡು ಕ್ಲಸ್ಟರ್ ಸಿ.ಆರ್.ಪಿ ಬಿ. ನಾಗೇಶ್, ಮಾಕೋಡು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ನಾಗೇಶ್ ಹೆಚ್. ಬಿ., ಅತ್ತಿಗೋಡು ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಹಾಗೂ ಸಹ ಶಿಕ್ಷಕರಾದ ಶ್ರೀರಾಮಪುರ ಶ್ರೀನಿಧಿ, ಲೋಕೇಶ್, ಮಾದೇಶ್, ಉಮಾಶಂಕರಾರಾಧ್ಯ, ಶಿವಶಂಕರ, ಪವಿತ್ರ, ಚಂದ್ರೆಗೌಡ ನಟರಾಜ್ ಮತ್ತು ರಮೇಶ್ ಕಾಂತರಾಜು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want