ಮೈಸೂರು: ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದನ್ನು ಗುರಿಯಾಗಿಸಿಕೊಂಡು ಅನ್ಯ ವಿಷಯಗಳಿಗೆ ಆಸ್ಪದ ಕೊಡದೆ ವಿದ್ಯಾಭ್ಯಾಸ ಮಾಡುವಂತೆ ಮಂಡ್ಯ ಡಯಟ್ ನ ವಿಶ್ರಾಂತ ಪ್ರಾಚಾರ್ಯ ಪುರುಷೋತ್ತಮ್ ಸಲಹೆ ನೀಡಿದರು.
ಅವರು ನಗರದ ರಾಮಾನುಜ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಅವರು ಮುಂದಿನ ಓದಿಗೆ ಪ್ರೇರಣೆಯಾಗಲಿದೆ ಎಂದರು.
ಸಮಾಜ ಸೇವಕ ರಘುರಾಮ ವಾಜಪೇಯಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತುಗಳ ಚಟಗಳಂತಹ ದುಶ್ಚಟಗಳಿಂದ ದೂರವಿದ್ದು, ವ್ಯಾಸಂಗದತ್ತ ಚಿತ್ತ ಹರಿಸುವಂತೆ ಸಲಹೆ ನೀಡಿದರಲ್ಲದೆ, ಮೊಬೈಲ್ ವ್ಯಾಮೋಹದಿಂದಲೂ ದೂರವಾಗಿ ಓದಿನತ್ತ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಉಪಾಸಕರಾದ ಗೋಪಾಲ ಸ್ವಾಮಿ ದಂಪತಿಯನ್ನು ಸನ್ಮಾನಿಸಲಾಯಿತು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಮಾತನಾಡಿದರು.
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕುವೆಂಪು ನಗರದ ಆರ್.ಸೃಜನ್, ಆದರ್ಶ ವಿದ್ಯಾಲಯದ ಎಸ್.ಮೋನಿಶ್ ಗೌಡ, ಕನಕಗಿರಿ ಪ್ರೌಢಶಾಲೆಯ ಪೃಥ್ವಿರಾಜ್, ರೈಲ್ವೆ ವರ್ಕ್ ಶಾಪ್ ಪ್ರೌಢಶಾಲೆಯ ರಶೀದಾ ಬಾನು, ತಬಮ್ ಬಾನು, ಅಶೋಕಪುರಂ ಸರ್ಕಾರಿ ಪ್ರೌಢಶಾಲೆಯ ಪ್ಎಣವ್ ಮೌನಿ, ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆಯ ಧನಂಜಯ, ಲಕ್ಷ್ಮೀಪುರಂ ಜೆಎಸ್ ಎಸ್ ಪ್ರೌಢಶಾಲೆಯ ಡಿ.ಧ್ರುವಕುಮಾರ್, ಗೀತಾಂಜಲಿ, ಶ್ರೀಕಾಂತ ಬಾಲಿಕಾ ಪ್ರೌಢಶಾಲೆಯ ಲಾವಣ್ಯ, ಅಶ್ವಿನಿ, ಬನುಮಯ್ಯ ಬಾಲಿಕಾ ಪ್ರೌಢಶಾಲೆಯ ಸಿಂಚನಾ, ಪಿಲಾಲ್, ಸಾರ್ವಜನಿಕ ಪ್ರೌಢಶಾಲೆಯ ಸಿ.ಚರಣ್, ವಾಣಿ ವಿದ್ಯಾಮಂದಿರದ ಅರ್ಚನಾ, ಹಾರ್ಡ್ವೀಕ್ ಶಾಲೆಯ ಲಿಖಿತ್ ನಾಯಕ್, ದಳವಾಯಿ ಶಾಲೆಯ ಅಮೂಲ್ಯ ಹಾಗೂ ಪಿಯುಸಿಯಲ್ಲಿ ವಿಶೇಷ ಸಾಧನೆಗೈದ ಬಸವೇಅಸ್ವರ ಬಡಾವಣೆಯ ಎಎಂಬಿ ಕಾಲೇಜಿನ ಎಂ.ಸಂಗೀತಾ(ಶೇ.99), ವಿದ್ಯಾವರ್ಧಕ ಶಾಲೆಯೆಸ್.ಸಾನಿಕಾ(ಶೇ.91) ಹಾಗೂ ಭಾರತೀಯ ವಿದ್ಯಾಭವನದ ಮೇಘನಾ(ಶೇ.94) ವಿದ್ಯಾರ್ಥಿನಿಯರಿಗೆ ಪದಕ, ಸ್ಮರಣಿಕೆ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾವೇರಿ ಬಳಗದ ಅಧ್ಯಕ್ಷೆ ಕಾವೇರಿಯಮ್ಮ,ಒರಿಗಾಮಿ ಕಲಾವಿದ ಎಚ್.ಮುರಳೀಧರ್, ಶಿಕ್ಷಕ ನಾರಾಯಣ ರಾವ್, ಶ್ರೀ ಕಂಠಮೂರ್ತಿ, ಮನೋಹರ್ ಮತ್ತಿತರರಿದ್ದರು.








