Job NewsLatest

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನಸಹಾಯ… ಯಾರಿಗೆಲ್ಲ ಸಿಗಲಿದೆ ನೆರವು?  

ಗದಗ: ಆರ್ಥಿಕ ಸಂಕಷ್ಟದಲ್ಲಿರುವ 10ನೇ ತರಗತಿ ನಂತರದ ಶಿಕ್ಷಣ ಮುಂದುವರಿಕೆಗಾಗಿ  ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ನರ್ಚರ್ ಮೆರಿಟ್ ಯೋಜನೆಯಡಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವನ್ನು ನೀಡಲು ಮುಂದಾಗಿದೆ.

ವಿದ್ಯಾರ್ಥಿಗಳು ಮಾರ್ಚ 2026ರಲ್ಲಿ ಪ್ರಥಮ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದು ಮೊದಲನೇ ಪ್ರಯತ್ನದಲ್ಲಿ ಶೇ. 80% ಅಂಕ ಗಳಿಸಿರಬೇಕು. ಪಿ.ಯು.ಸಿ. ಮೊದಲನೇ ವರ್ಷದ ವಾಣಿಜ್ಯ ಮತ್ತು ಡಿಪ್ಲೋಮಾ ಕೋರ್ಸಗೆ ಸೇರಲು ಬಯಸುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರು  ಕುಟುಂಬದ ಮಾಸಿಕ ವರಮಾನ ರೂ. 10,000/- ಕ್ಕಿಂತ ಕಡಿಮೆ ಇರಬೇಕು.

ವಿದ್ಯಾರ್ಥಿಯ ಪಾಲಕರು/ಪೋಷಕರು ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಹಾಗೂ ಕುಷ್ಟಗಿ ಜಿಲ್ಲೆಗಳಲ್ಲಿ ವಾಸವಿದ್ದವರಾಗಿರಬೇಕು. ವಿದ್ಯಾಪೋಷಕ ನರ್ಚರ್ ಮೆರಿಟ್ ಕಾರ್ಯಕ್ರಮವು ಸ್ವಯಂಸೇವಕರ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಕಾರಣ ಹೊಸ ಅರ್ಜಿಯನ್ನು 2026-27 ಪರಿಗಣಿಸುವುದು ಕೆಲವೊಂದು (ಸ್ವಯಂಸೇವಕರು ಲಭ್ಯವಿರುವ) ಜಿಲ್ಲಾ ಅಥವಾ ತಾಲೂಕುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಧನ ಸಹಾಯದ ಅರ್ಜಿಯು ವಿದ್ಯಾಪೋಷಕ ಸಂಸ್ಥೆಯ ಅಂತರ್ಜಾಲ www.vidyaposhak.ngo ಲಭ್ಯವಿದೆ.

ವಿದ್ಯಾರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಅದರಲ್ಲಿ ನಮೂದಿಸಿರುವ ಮಾಹಿತಿಯನ್ನು ತುಂಬಿ ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್ ಮಾಡಬೇಕು. ಆನ್‌ಲೈನ್‌ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 30, 2026. ಕಛೇರಿ: ವಿದ್ಯಾಪೋಷಕ, ನಂ. 307/4ಎ1, ನಗರಕರ ಕಾಲೋನಿ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ದೂರವಾಣಿ ಸಂಖ್ಯೆ :0836-2747357/9513322355ನ್ನು ಸಂಪರ್ಕಿಸಿರಿ. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯವರು ಡಾ.ಎಸ್.ಬಿ.ಸಜ್ಜನರ್-ಮೊ-9945555084, ಡಾ.ಪ್ರಭು ಗಂಜಿಹಾಳ-ಮೊ-9448775346, ಡಾ.ಪ್ರಕಾಶ ಕಣವಿ-ಮೊ-9449121688, ಪ್ರೊ.ಮಂಜುನಾಥ ಹೊಳ್ಳಿಯವರ-ಮೊ-9886893859, ವಿಜಯಕುಮಾರ ಸಜ್ಜನರ-ಮೊ-8445646911 ಇವರನ್ನು ಸಂಪರ್ಕಿಸಬಹುದಾಗಿದೆ.

 

 

admin
the authoradmin

Leave a Reply

Translate to any language you want